ಜೀವನಕ್ಕೆ ವಚನಗಳು ಶ್ರೇಷ್ಠ : ಜತ್ತಿ
Team Udayavani, Jul 10, 2018, 11:37 AM IST
ಬೀದರ: ವಚನಗಳೇ ನಮಗೆ ನಿಜವಾದ ಅನುಭವ ನೀಡಬಲ್ಲವು. ವಚನಗಳನ್ನು ಬದುಕಿನ ಉಸಿರಾಗಿಸಿಕೊಂಡಲ್ಲಿ ಶ್ರೇಷ್ಠ ಜೀವನ ನಡೆಸಲು ಸಾಧ್ಯ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ನಗರದ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಕೇಂದ್ರದಿಂದ 2017-18ನೇ ಸಾಲಿನ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾವ್ಯ, ಗದ್ಯ ಗ್ರಂಥಗಳು, ಅಭಿನವ ಗ್ರಂಥಗಳು, ಆತ್ಮಚರಿತ್ರೆ ಇತ್ಯಾದಿ ಲೋಕಾನುಭವದಲ್ಲಿ ಕಾಣಬಹುದಾದರೆ, ಮಹಾಭಾರತ, ರಾಮಾಯಣ, ಭಗವದ್ಗೀತೆ, ಪುರಾಣಗಳು, ಅಧ್ಯಾತ್ಮಿಕ ಗ್ರಂಥಗಳನ್ನು ಶಿವಾನುಭವದಲ್ಲಿ ಗುರುತಿಸಬಹುದು. ಇವೆರಡನ್ನು ಜೋಡಿಸಿ ಸಂಗಮ ಅನುಭಾವ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಮಾತೆ ಕರುಣಾದೇವಿ ತಾಯಿಯವರ ಪರಿಶ್ರಮ ಅಗಾಧವಾಗಿದೆ ಎಂದರು.
ಮನುಷ್ಯ ತನ್ನ ನಿಜ ಜೀವನದಲ್ಲಿ ನಾನೆಂಬುದನ್ನು ಮರೆತು ನೀನೆಂಬುದನ್ನು ಅರಿಯಬೇಕು. ನಮ್ಮಲ್ಲಿ ಹುದುಗಿರುವ ಆತ್ಮಸಾಕ್ಷಿ ಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದ ಪ್ರಮುಖ ಸಮಸ್ಯೆಗಳಿಗೆ ಇತಿಶ್ರೀ ಹೇಳಬೇಕು. ನಮ್ಮ ಸಂಸ್ಕಾರದ ಕುರುಹು ಲಿಂಗಸಾಕ್ಷಿಯು ನಮ್ಮನ್ನು ಮಹಾತ್ಮರ ಸ್ಥಾನದಲ್ಲಿ ನಿಲ್ಲಿಸಿ, ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಪ್ರತಿಯೊಬ್ಬರು ಜೀವನ ಸುಂದರವಾಗಿಸಿಕೊಳ್ಳಲು ಮಹಾತ್ಮರ ಹಾಗೂ ಗುರುವರ್ಯರ ಸಂಗ ಬೆಳೆಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹೂ “ಅಕ್ಕ ಮಹಾದೇವಿ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಹಾಗೂ ಸನ್ಮಾನಗಳು ನಮ್ಮ ಕರ್ತವ್ಯಗಳನ್ನು ಹೆಚ್ಚಿಸುತ್ತವೆ.
ಉತ್ತಮ ನಡುವಳಿಕೆಯಿಂದ ಬದುಕಲು ಕಲಿಸುತ್ತವೆ. ಸಮಾಜದಲ್ಲಿ ಗೌರವ ಸನ್ಮಾನಗಳಿಗೆ ಭಾಜನರಾಗಲು ಕಾರಣವಾಗುತ್ತವೆ. ಪರಸ್ಪರ ಪ್ರೀತಿ, ವಿಶ್ವಾಸ, ಮಾನವೀಯತೆ, ಸಾಮಾಜಿಕ ಪ್ರಜ್ಞೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಲು ದಾರಿ ಮಾಡಿಕೊಡುತ್ತವೆ ಎಂದರು. ಮಹಿಳೆ ಇಂದು ಸ್ವತಂತ್ರಳಾಗಿ ತನ್ನಿಷ್ಟದ ವಸ್ತ್ರಗಳನ್ನು ಧರಿಸಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗಿದೆ.
ಏಕಾಂಗಿಯಾಗಿ ಬದುಕಲು ಮುಂದಾದರೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಆಕೆಯ ರಕ್ಷಣೆಗೆ ಧಾವಿಸಬೇಕಿದ್ದ ಸಮಾಜ ಇಂದು ನಿಂದನೆಗೆ ಮುಂದಾಗುತ್ತಿರುವುದು ವಿಪರ್ಯಾಸ. ಆದ್ದರಿಂದ ಪ್ರತಿ ಹೆಣ್ಣು ತನ್ನಲ್ಲಿನ ಅಷ್ಟ ಶಕ್ತಿಗಳನ್ನು ಜಾಗೃತಗೊಳಿಸಿ ವಿರಾಗಿನಿಯಾಗಿ ಎದ್ದು ನಿಲ್ಲಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಖ್ಯಾತ ಸಾಹಿತಿ, ಧಾರವಾಡದ ಡಾ| ಗುರುಲಿಂಗ ಕಾಪಸೆ ಮಾತನಾಡಿ, ನಮ್ಮಲ್ಲಿ ಅಧ್ಯಾತ್ಮಿಕ ಕೌಶಲ್ಯ ಜಾಗೃತವಾಗಿದ್ದರೆ ಆತ್ಮದ ಮೂಲಕ ಮಾತನಾಡುವ ಶಕ್ತಿ ಬರುತ್ತದೆ. ಆತ್ಮವನ್ನು ಲಿಂಗದೊಂದಿಗೆ ಬೆರೆಸಿ ಅನುಭಾವಿಯಾಗಿ ಹೊರಹೊಮ್ಮಬಹುದಾಗಿದೆ. ಇದು ನಮ್ಮಲ್ಲಿ
ಸಕಾರಾತ್ಮಕ ದೃಷ್ಟಿಕೋನ, ಧನಾತ್ಮಕ ಚಿಂತನೆ, ನೈತಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಇಂಬು ನೀಡುತ್ತದೆ ಎಂದರು.
ಲೇಖಕಿ ಹಾಗೂ ಶಹಾಪುರದ ನಿವೃತ್ತ ಪ್ರಾಚಾರ್ಯೆ ನೀಲಮ್ಮ ಕತ್ನಳ್ಳಿ, ಚೈತನ್ಯ ಕೇಂದ್ರದ ಸಂಚಾಲಕ ಡಾ| ರಾಜಶೇಖರ ಸ್ವಾಮೀಜಿ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಪರಿವೀಕ್ಷಣಾ ಸಮಿತಿ ಸಂಚಾಲಕ ಡಾ| ಎಸ್.ಕೆ. ಮಿತ್ತಲ್, ಪಂಚಗಾಂವ ಆಶ್ರಮದ ಮಾತೆ ಶಶಿಕಲಾ ತಾಯಿ, ಕಲಬುರಗಿಯ ವಿಲಾಸಮತಿ ಖೂಬಾ, ಜಿಪಂ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ, ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಧನ್ನುರ್, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಕಾಶೆಪ್ಪ ಧನ್ನುರ್, ಹೈದ್ರಾಬಾದ್ ಅಖೀಲ ಭಾರತೀಯ ವೀರಶೈವ ಮಹಾಸಭೆ ಅಧ್ಯಕ್ಷ ನೇತಿ ಮಹೇಶ್ವರ, ಹೈದ್ರಾಬಾದ್ ಅಕ್ಕ ಮಹಾದೇವಿ ಸಮಿತಿ ಅಧ್ಯಕ್ಷೆ ದಾಕ್ಷಾಯಣಿ ದೇವಿ, ರಾಷ್ಟ್ರೀಯ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ, ಶಿವಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬುಳಗಿ, ಡಾ| ಸೋಮನಾಥ ಪಾಟೀಲ, ಡಾ| ಸಿದ್ರಾಮಯ್ಯ ಸ್ವಾಮಿ ಗೋರಟಾ, ಕಾರ್ತಿಕ ಸ್ವಾಮಿ, ಮೀರಾ ಖೇಣಿ, ಮಲ್ಲಮ್ಮ ಸಂತಾಜಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.