ಎಐಟಿಯುಸಿಗೆ ಎಸಿಸಿಯ 300 ಕಾರ್ಮಿಕರು ಗುಡ್‌ಬೈ!
ನಾಯಕರಿಂದ ಏಕಪಕ್ಷೀಯ ನಿರ್ಧಾರ: ಆರೋಪ
Team Udayavani, Mar 4, 2020, 10:39 AM IST
ವಾಡಿ: ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಚುನಾಯಿತ ಕಾರ್ಮಿಕ ಸಂಘ ಹೊಂದಿರುವ ಎಐಟಿಯುಸಿ ನಾಯಕರ ವಿರುದ್ಧ ಕಾರ್ಮಿಕರು ಸಿಡಿದೆದ್ದಿದ್ದು, ಸಂಘ ತೊರೆಯಲು ಮುಂದಾಗಿದ್ದಾರೆ.
ಕಾರ್ಮಿಕರ ವೇತನ ಕಡಿತ ವಿರೋಧಿಸಿ ಎಸಿಸಿಯ ಎಚ್‌ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ಅರುಣಕುಮಾರ ಅವರಿಗೆ ಕಾರ್ಮಿಕರ ಸಾಮೂಹಿಕ ದೂರುಗಳನ್ನು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಸುರೇಶ ನಾಯಕ, ಎಐಟಿಯುಸಿಗೆ ಸಂಯೋಜಿತ ವಾಡಿ ಸಿಮೆಂಟ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿಗಳ ವರ್ತನೆಗೆ ಬೇಸತ್ತು ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಗೆ ಬೇಸರಗೊಂಡು ಒಟ್ಟು 300 ಜನ ನೌಕರರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಎಐಟಿಯುಸಿಯಿಂದ ಹೊರಗೆ ಬಂದುಐಎನ್‌ಟಿಯುಸಿಗೆ ಸೇರ್ಪಡೆಯಾಗುತ್ತಿರುವುದಾಗಿ ಲಿಖೀತ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಕಾರ್ಮಿಕರ ಪರವಾಗಿ ಕಂಪನಿ ಆಡಳಿತ ಮಂಡಳಿಯೊಂದಿಗೆ ಹೋರಾಟ ನಡೆಸುವ ಮೂಲಕ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕಾದ ಎಐಟಿಯುಸಿಯ ಚುನಾಯಿತ ನಾಯಕರು ಕಾರ್ಮಿಕರ ಹಿತಾಸಕ್ತಿಯನ್ನೇ ಮರೆತಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಶಾಮ್ಸನ್ ಅವರು ಬೋಗಸ್ ಭರವಸೆ ನೀಡುವ ಮೂಲಕ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದಾರೆ.
ಕಾರ್ಮಿಕರ ಗಮನಕ್ಕಿಲ್ಲದೆ ಕಳೆದ ಒಂದು ವರ್ಷದಿಂದ 497 ಜನ ನೌಕರರ ತಿಂಗಳ ವೇತನದಲ್ಲಿ ಸಂಘದ ಶುಲ್ಕದ ನಪದಲ್ಲಿ ತಲಾ
15 ರೂ. ಕಡಿತ ಮಾಡಿಸುತ್ತಿದ್ದಾರೆ. ಈ ಹಣ ಯಾರ ಖಾತೆಗೆ ಜಮೆಯಾಗುತ್ತಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ಎಸಿಸಿ ಕಂಪನಿ ವತಿಯಿಂದ ಕಾರ್ಮಿಕರಿಗೆ ಉಚಿತವಾಗಿ ನೀಡುವ ವಾರ್ಷಿಕ ಬೋನಸ್ ರೂಪದ ಚಿನ್ನ ಅಥವ ಬೆಳ್ಳಿ ನಾಣ್ಯಗಳ ವಿತರಣೆಗೂ ಕಾರ್ಮಿಕತರಿಂದ ತಲಾ 500 ರೂ. ವಸೂಲಿ ಮಾಡುವ ಮೂಲಕ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ಎಸಿಸಿಯಲ್ಲಿ ಒಟ್ಟು 497 ಜನ ನೌಕರ ಕಾರ್ಮಿಕರಿದ್ದು, ಸದ್ಯ 300 ಕಾರ್ಮಿಕರು ಎಐಟಿಯುಸಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಐಎನ್ ಟಿಯುಸಿಯ ಸದಸ್ಯತ್ವ ನೀಡುವಂತೆ ಕೋರಿದ್ದಾರೆ. ಇನ್ನುಳಿದ ಎಐಟಿಯುಸಿಯ ಕಾರ್ಮಿಕರೂ ಐಎನ್‌ಟಿಯುಸಿಗೆ ಸೇರ್ಪಡೆಯಾಗಲಿದ್ದಾರೆ.
ಕಾರ್ಮಿಕರ ಸಾಮೂಹಿಕ ರಾಜೀನಾಮೆಯಿಂದ ಎಐಟಿಯುಸಿ ಬಲಹೀನಗೊಂಡಿದ್ದು, ಚುನಾಯಿತ ಪ್ರತಿನಿಧಿ ಗಳು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಕಾರ್ಮಿಕ ಸಂಘಕ್ಕೆ ಚುನಾವಣೆ ನಡೆಯುವ ವರೆಗೆ ಹಾಲಿ ಚುನಾಯಿತ ಕಾರ್ಮಿಕ ಪ್ರತಿನಿಧಿಗಳು ಕಂಪನಿಯೊಂದಿಗೆ ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ಸುರೇಶ ನಾಯಕ ಆಗ್ರಹಿಸಿದ್ದಾರೆ.
ಐಎನ್‌ಟಿಯುಸಿ ಕಾರ್ಯಧ್ಯಕ್ಷ ರಾಜಶೇಖರ ಕಲಶೆಟ್ಟಿ, ಕಾರ್ಮಿಕ ಮುಖಂಡರಾದ ಮಹೆಬೂಬ ಇಂಜರ್, ಸಂಜಯ ರಾಠೊಡ, ಶಿವುಕುಮಾರ ಕಾಳಗಿ, ಜಗನ್ನಾಥ ಕಲಶೆಟ್ಟಿ, ಮಹ್ಮದ್ ನಾಸೀರ್ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.