ವಾಡಿ ಪುರಸಭೆ: ನೀರಿನ ತೆರಿಗೆ ಹೆಚ್ಚಳ; ಬಿಜೆಪಿ ವಿರೋಧ
Team Udayavani, Feb 23, 2022, 3:02 PM IST
ವಾಡಿ: ಪಟ್ಟಣದ ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ತೆರಿಗೆ ಹೆಚ್ಚಳ ಮತ್ತು ಕಸ ವಿಲೇವಾರಿ ಶುಲ್ಕ ಸಂಗ್ರಹ ಕುರಿತು ಪರ ವಿರೋಧ ಚರ್ಚೆ ನಡೆದು ವಾಗ್ವಾದಕ್ಕೆ ಕಾರಣವಾಯಿತು.
ಕುಡಿಯುವ ನೀರಿಗೆ ವರ್ಷದ ಶುಲ್ಕ 300 ರೂ. ಹೆಚ್ಚಳ ಹಾಗೂ ಕಸ ವಿಲೆವಾರಿ ನಿರ್ವಹಣೆಗಾಗಿ ಸಾರ್ವಜನಿಕರಿಂದ ವಾರ್ಷಿಕ ರೂ. 250 ವಸೂಲಿಗೆ ಸಭೆ ಒಪ್ಪಿಗೆ ನೀಡಲಾಗಿದೆ. ನೀರಿನ ತೆರಿಗೆ ಹೆಚ್ಚಳಕ್ಕೆ ವಿರೋಧ ಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ,ಜನರಿಗೆ ಕುಡಿಯಲು ಶುದ್ಧ ನೀರು ಕೊಡದೆ ತೆರಿಗೆ ಹೆಚ್ಚಿಸಿದರೆ ಸುಮ್ಮನಿರಲ್ಲ ಎಂದು ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳಿ ಎಚ್ಚರಿಕೆ ನೀಡಿದರು.
ರಸ್ತೆ ಅಭಿವೃದ್ಧಿಯಲ್ಲಿ ಅವ್ಯವಹಾರ ಕಂಡು ಬಂದಿದ್ದು, ವಿದ್ಯುತ್ ದೀಪಗಳ ಖರೀದಿಯಲ್ಲೂ ನಕಲಿ ಬಿಲ್ ಹಾಕಿ ನೀರಿನ ಮೋಟಾರ್ ರಿಪೇರಿಗೆ ಡಬಲ್ ಬಿಲ್ ಹಾಕಲಾಗಿದೆ. ಐದು ವೃತ್ತಗಳಲ್ಲಿರುವ ಹೈಮಾಸ್ಟ್ ದೀಪಗಳು ಐದಾರು ವರ್ಷಗಳಿಂದ ಬೆಳಕು ನೀಡುತ್ತಿಲ್ಲ. ಬೀದಿ ದೀಪಗಳ ಹೆಸರಲ್ಲೂ ಪುರಸಭೆಯ ಹಣ ದುರುಪಯೋಗವಾಗುತ್ತಿದೆ ಪುರಸಭೆಯ ವಿವಿಧ ಯೋಜನೆಗಳ ಲಕ್ಷಾಂತರ ರೂ. ಅನುದಾನ ಕಾಂಗ್ರೆಸ್ ಆಡಳಿತ ಲೂಟಿ ಮಾಡುತ್ತದೆ. ಪುರಸಭೆಯ ಕಾಂಗ್ರೆಸ್ ಆಡಳಿತವು ಕಾಂಗ್ರೆಸ್ ಸದಸ್ಯರಿಗೆ ಗುತ್ತಿಗೆ ನೀಡಿ ಅನುದಾನ ಲಪಟಾಯಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆಡಳಿತದ ವಿರುದ್ಧ ಪ್ರತಿಪಕ್ಷದ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.