ಅಳಿವಿನಂಚಿನ ವಸ್ತುಗಳ ಉಳಿಕೆಗೆ ಕಸರತ್ತು
ವಿಜಯಪುರ ಅಕ್ಕಮಹಾದೇವಿ ವಿವಿ ಮ್ಯೂಜಿಯಂ ಸೇರಿದ 122 ವಸ್ತು ಕಲಬುರಗಿ-ಯಾದಗಿರಿ ಜಿಲ್ಲೆಯಾದ್ಯಂತ ಸುತ್ತಾಟ
Team Udayavani, Feb 12, 2020, 10:38 AM IST
ವಾಡಿ: ಬಳಕೆಯಾಗದೆ ಅಳಿವಿನಂಚಿಗೆ ಸರಿಯುತ್ತಿರುವ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮಹಿಳೆಯರು ಬಳಸುತ್ತಿದ್ದ ಪಳೆಯುಳಿಕೆ ವಸ್ತುಗಳ ಸಂಗ್ರಹಕ್ಕೆ ಮುಂದಾಗಿರುವ ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ಒಟ್ಟು 122 ಜಾನಪದ ಸಂಸ್ಕೃತಿಯ ಜೀವನ ಬಳಕೆ ವಸ್ತುಗಳನ್ನು ಸಂಗ್ರಹಿಸಿದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಮಹಿಳಾ ವಸ್ತು ಸಂಗ್ರಹಾಲಯದ ರಾಜ್ಯ ಸಂಯೋಜಕಿದು. ಸರಸ್ವತಿ ಮಾರ್ಗದರ್ಶನದಲ್ಲಿ ಕಳೆದ ಮೂರ್‍ನಾಲ್ಕು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಕಲಬುರಗಿ ಜಿಲ್ಲಾ ಸಂಯೋಜಕ, ವಾಡಿ ನಗರ ನಿವಾಸಿ ವಿಕ್ರಮ ನಿಂಬರ್ಗಾ ಅವರು ಹಳ್ಳಿ ಜನರೊಂದಿಗೆ ಸಂವಾದ ನಡೆಸುವ ಮೂಲಕ ಹಳೆ ವಸ್ತುಗಳ ಸಂಗ್ರಹ ಮತ್ತು ವಿಜಯಪುರ ವಿವಿಯ ಉದ್ದೇಶ ಅರ್ಥ ಮಾಡಿಸುವಲ್ಲಿ ಸಫಲರಾಗಿದ್ದಾರೆ.
ಪಾಳುಬಿದ್ದ ಮನೆಗಳಲ್ಲಿ ದೊರೆತ ಗೃಹಬಳಕೆ ವಸ್ತುಗಳು, ಜಾನುವಾರುಗಳಿಲ್ಲದೆ ಮುರಿದುಬಿದ್ದ ದನದ ಕೊಟ್ಟಿಗೆಗಳಲ್ಲಿ ಕಂಡುಬಂದ ಕೃಷಿ ಪರಿಕರಗಳನ್ನು ಚಿನ್ನದ ವಸ್ತುಗಳೆಂಬಂತೆ ಕೈಗೆತ್ತಿಕೊಂಡು ಮಹಿಳಾ ವಿವಿಯ ಜಾನಪದ ಜೋಳಿಗೆ ತುಂಬಿದ್ದಾರೆ.
ಸಂಗ್ರಹಿಸಿದ್ದು ಏನೇನು?: ಚಿತ್ತಾಪುರ ತಾಲೂಕಿನ ಹಳಕರ್ಟಿ, ವಾಡಿ, ರಾವೂರ, ಗೋಳಾ (ಕೆ), ಇಂಗಳಗಿ, ಕುಂದನೂರು, ಚಾಮನೂರ, ಲಾಡ್ಲಾಪುರ, ಆಳಂದ ತಾಲೂಕಿನ ನಿಂಬರ್ಗಾ, ಹೀರಾಪುರ, ಖರ್ಜಗಿ, ಮಾಡಿಯಾಳ, ಭೂಸನೂರ, ಅಫಜಲಪುರ, ಜೇವರ್ಗಿ, ಸೇಡಂ, ಕಲಬುರಗಿ ತಾಲೂಕುಗಳು ಸೇರಿದಂತೆ ಯಾದಗಿರಿ ಜಿಲ್ಲೆಯ ಚಾಮನಾಳ, ಗುರುಮಠಕಲ್, ಶಹಾಪುರ, ಸುರಪುರ, ಹೊನಗೇರಾ, ದೋರನಹಳ್ಳಿ ಹೀಗೆ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಆ ಭಾಗದ ಕೃಷಿಕ ಮಹಿಳೆಯರು ಬಳಕೆ ಮಾಡುತ್ತಿದ್ದ ಒಕ್ಕಲುತನ ಮತ್ತು ಗೃಹಬಳಕೆ ವಸ್ತುಗಳಾದ ಬೀಸುವ ಕಲ್ಲು, ಹೂರಣ ರುಬ್ಬುವ ಕಲ್ಲು, ಅಸಗಲ್ಲು, ತುಪ್ಪದ ಕುಳ್ಳಿ, ಸೊಂಟದ ಢಾಬಾ, ಮನೆಗೆ ಹಾಕುತ್ತಿದ್ದ ಯರಗೋಳದ ಬೀಗ, ಆರಣಗಿ, ಕುರುಪೆಗಳು, ಕುಡಗೋಲು, ದವಸದಾನ್ಯ ಅಳತೆ ಮಾಡಲಾಗುತ್ತಿದ್ದ ಗಿದ್ದನಿಗೆ, ಸೇರು, ಅಡಕಲು ಗಡಿಗೆ, ಬಿತ್ತನೆಗೆ ಬಳಕೆಯಾಗುತ್ತಿದ್ದ ಮರದ ಬುಕ್ಕಾ, ಚೌಂಗೆ ಮಣಿ, ಒಳ್ಳು, ಒನಕೆ, ರೇವಗಿ, ಕಲಾತ್ಮಕ ಕೌದಿ, ಮಕ್ಕಳ ಕುಲಾಯಿ, ರಂಗೋಲಿ ಸಾಚಾ, ಜೋಳದ ಬಾನಕ್ಕೆ ಬಳಸುವ ಹುಟ್ಟು, ಸಾಂಬಾರ್ ಸೌಟು, ತಾಮ್ರ ಕೊಡ, ಮರ, ಹೋಳಿಗೆ ತಟ್ಟೆ, ಹೆಂಚು, ಕಂದಲಿ, ಲಟ್ಟಣಿಕೆ, ತತ್ರಾಣಿ ಹೀಗೆ ಸುಮಾರು 122 ಸ್ತ್ರೀ ಬಳಕೆ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಮುಂದಿನ ಪೀಳಿಗೆಗೆ ಉಳಿಸಲು 200 ವರ್ಷಕ್ಕೂ ಹಳೆಯದಾದ ದೊಡ್ಡ ಮಂಥಣಿ, 50 ಕೆಜಿ ತೂಕದ ಬೀಸುವ ಕಲ್ಲು ಪತ್ತೆಯಾಗಿ ರಾಜ್ಯ ಮಹಿಳಾ ವಸ್ತು ಸಂಗ್ರಹಾಲಯಕ್ಕೆ ಸೇರಿದ್ದು ಮಹತ್ವದ ಸಂಗ್ರಹ.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕ್ಯಾಂಪಸ್‌ನಲ್ಲಿ ಮಹಿಳಾ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದೆ. ಕಲ್ಯಾಣ ನಾಡು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಮಹಿಳೆಯರು ಬಳಕೆ ಮಾಡುತ್ತಿದ್ದ ಹಳೆ ವಸ್ತುಗಳನ್ನು ಸಂಗ್ರಹ ಮಾಡುವ ಕಾರ್ಯಕ್ಕೆ ನನ್ನನ್ನು ನೇಮಿಸಲಾಗಿದೆ. ಒಟ್ಟು 122 ವಸ್ತುಗಳನ್ನು ಸಂಗ್ರಹಿಸಿ, ರಾಜ್ಯ ಸಂಯೋಜಕಿ ದು. ಸರಸ್ವತಿ ಮೂಲಕ ವಿಜಯಪುರ ಮಹಿಳಾ ವಿವಿಗೆ ಹಸ್ತಾಂತರಿಸಿದ್ದೇನೆ. ಹಳೆ ವಸ್ತುಗಳಿದ್ದರೆ ಸಾರ್ವಜನಿಕರು ನನ್ನನ್ನು (ಮೊ.9448881313) ಸಂಪರ್ಕಿಸಬಹುದು.
ವಿಕ್ರಮ ನಿಂಬರ್ಗಾ,
ಕಲಬುರಗಿ-ಯಾದಗಿರಿ ಜಿಲ್ಲಾ ಸಂಯೋಜಕ,
ಅಕ್ಕಮಹಾದೇವಿ ಮಹಿಳಾ ವಿವಿ ವಸ್ತು ಸಂಗ್ರಹಾಲಯ, ವಿಜಯಪುರ
ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.