ಹೆಸರು ನಮೂದಿಸಲು ಅಲೆದಾಟ
Team Udayavani, Jan 28, 2020, 11:51 AM IST
ಚಿಂಚೋಳಿ: ತಾಲೂಕಿನ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರು ನೋಂದಣಿ ಮತ್ತು ಜಮೀನು ಪಹಣಿಗಳ ತಿದ್ದುಪಡಿ ಮಾಡಿಕೊಳ್ಳಲು ಸರ್ವರ್ ಸಮಸ್ಯೆ ಹೆಚ್ಚಾಗಿದೆ. ಇದರಿಂದ ರೈತರು ತೊಂದರೆ ಪಡುತ್ತಿದ್ದು, ಇದಕ್ಕಾಗಿ ದಿನವೀಡಿ ಕಾಯಬೇಕಾಗಿದೆ. ತಾಲೂಕಿನಲ್ಲಿ ಸರ್ಕಾರವು 24 ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ.
ಆದರೆ, ರೈತರು ಹೆಸರು ನೋಂದಾಯಿಸಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ರೈತರು ಕಂದಾಯ, ಕೃಷಿ ಇಲಾಖೆ ಕಚೇರಿಗೆ ನಿತ್ಯ ಅಲೆದಾಡುವ ಪರಸ್ಥಿತಿ ಉಂಟಾಗಿದೆ. ರೈತರ ಪಹಣಿಯಲ್ಲಿ ಬೇರೆ ಬೆಳೆ ಇರುವುದರಿಂದ ನೋಂದಣಿ ಆಗುತ್ತಿಲ್ಲ. ಇನ್ನು ಕೆಲರೈತರ ಪಹಣಿಯಲ್ಲಿ ಯಾವುದೇ ಬೆಳೆ ನಮೂದಿಸಿಲ್ಲ ಮತ್ತು ಇನ್ನು ಕೆಲ ಪಹಣಿ ಕಾಲಂದಲ್ಲಿ ತೊಗರಿ ಎಂದು ನಮೂದಿಸಲಾಗಿದೆ. ಫುರ್ಟ್ಸ್ ಸಾಪ್ಟವೇರ್‌ನಲ್ಲಿಯೂ ತೊಗರಿ ಬೆಳೆ ಎಂದು ತೋರಿಸುತ್ತಿದೆ. ಆದರೆ ತೊಗರಿ ಮಾರಾಟ ಕೇಂದ್ರದಲ್ಲಿ ರೈತರ ಹೆಸರು ನೋಂದಣಿ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಬೆಳೆ ಸಮೀಕ್ಷೆ ಬೇರೆ ಬೆಳೆ ನಮೂದು ಮಾಡಿದ್ದಾರೆ. ಇದರಿಂದಾಗಿ ತೊಗರಿ ಖರೀದಿ ಕೇಂದ್ರದಲ್ಲಿ ನಿಮ್ಮ ಹೆಸರು ಅಪ್‌ಲೋಡ್ ಆಗುತ್ತಿಲ್ಲವೆಂದು ಹೇಳುತ್ತಿರುವುದರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿಕೊಳ್ಳುವ ರೈತರಿಗೆ ನಿರಾಶೆ ಮೂಡಿಸಿದೆ.
ಹೆಸರು ನೋಂದಣಿ ಮಾಡಿಕೊಳ್ಳಲು ಜ.31 ಕೊನೆಯ ದಿನವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ರೈತರು ಪಹಣಿಯಲ್ಲಿ ದೋಷ ಮತ್ತು ನೋಂದಣಿಮಾಡಿಕೊಳ್ಳುವುದಕ್ಕಾಗಿ ಅಲೆದಾಡಬೇಕಾಗಿದೆ. ತಾಲೂಕು ಕೃಷಿ ಮತ್ತು ಕಂದಾಯ ಇಲಾಖೆ ಅ ಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.