Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
Team Udayavani, Nov 11, 2024, 4:11 PM IST
ಕಲಬುರಗಿ: ರೈತರ ಜಮೀನು ಹಾಗೂ ಮಠ ಮಂದಿರಗಳ ಆಸ್ತಿಯಲ್ಲಿ ವಕ್ಫ್ ನಮೂದನೆ ಮಾಡುತ್ತಿರುವುದು ಸಮಾಜದಲ್ಲಿ ಅಶಾಂತಿ ಹಾಗೂ ತಲ್ಲಣ ನಿರ್ಮಾಣ ಮಾಡುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿ ರದ್ದುಗೊಳಿಸಿ ಹಿಂದೂ ನಾಗರೀಕರ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಡಿನ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು, ಮಠ, ಮಂದಿರಗಳ ಆಸ್ತಿಗಳ ಮೇಲೆ ವಕ್ಫ್ ಮಂಡಳಿ ತನ್ನ ಹೆಸರಿಗೆ ಬದಲಾವಣೆ ಮಾಡುತ್ತಿರುವುದನ್ನು ತಕ್ಷಣ ತಡೆಹಿಡಿದು ಹಿಂದುಗಳಿಗೂ ಕೂಡಾ ಸನಾತನ ಮಂಡಳಿ ರಚನೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯಾದ್ಯಂತ ರೈತರು ಉಳುಮೆ ಮಾಡುತ್ತಿರುವ ಜಮೀನು, ಹಿಂದುಗಳ ಮಠ, ಮಂದಿರಗಳ ಮೇಲೆ ಹಾಗು ಸಂರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಮಂಡಳಿ ಹೆಸರಿಗೆ ಅಸ್ತಿ ವರ್ಗಾವಣೆ ಮಾಡುತ್ತಿರುವುದು ಮತ್ತು ಪ್ರಕರಣಗಳನ್ನು ದಾಖಲಿಸುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆಯಲ್ಲದೇ ಸಮಸ್ತ ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ತರುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು ಸಹ ಪಾಲ್ಗೊಂಡು, ಈಗಾಗಲೇ ಸುಮಾರು ಹಿಂದುಗಳ ಆಸ್ತಿಗಳ ಪಹಣಿಯಲ್ಲಿ ವಕ್ಷ್ ಬೋರ್ಡ್ ಎಂದು ಬಂದಿದ್ದು, ಅದನ್ನು ಈ ಕೂಡಲೇ ತೆಗೆದುಹಾಕಿ ಹಿಂದೂಗಳಿಗೆ ಮಾರಕವಾಗಿರುವ ವಕ್ಫ್ ಬೋರ್ಡ್ ರದ್ದುಗೊಳಿಸಿ ಎಲ್ಲಾ ಹಿಂದೂಗಳಿಗಾಗಿ ಸನಾತನ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೆಕೆಂದು ಆಗ್ರಹಿಸಿದರು.
ಹಿಂದೂ ನಾಗರಿಕ ಸಮಿತಿಯ ಸಂಚಾಲಕ ಎಂ ಎಸ್ ಪಾಟಾಲ ನರಿಬೋಳ ಮಾತನಾಡಿ ವಕ್ಷ್ ಬೋರ್ಡ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿ ವಕ್ಷ್ ಆಸ್ತಿ ರಾಷ್ಠ್ರೀಕರಣ ಮಾಡಬೇಕು, ಇಲ್ಲವೇ ಸನಾತನ ಮಂಡಳಿ ರಚಿಸಿ ಪೇಜಾವರ ಶ್ರೀಗಳು ಹಾಗೂ ಜಗದ್ಗುರು ಪಂಚಾಚಾರ್ಯರು ಸೇರಿ ಹಿರಿಯ ಶ್ರೀಗಳ ಮಾರ್ಗದರ್ಶನ ಮಂಡಳಿ ಮಾಡಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪಾಳಾದ ಗುರುಮುರ್ತಿ ಶಿವಾಚಾರ್ಯರು ಮಾತನಾಡಿ, ವಕ್ಷ್ ಬೋರ್ಡನಿಂದ ಹಿಂದೂಗಳ ಜಮೀನು, ಮಠ ಮಂದಿರಗಳು ಹಾಗೂ ಮನೆಗಳನ್ನು ಕಬ್ಜಾ ಮಾಡಲು ಹೊರಟಿದೆ. ಒಂದೇ ದೇಶದಲ್ಲಿ ಎರಡೆರಡು ಕಾನೂನು ಒಪ್ಪುವಂತದ್ದಲ್ಲ. ಕೂಡಲೆ ವಕ್ಷ್ ಬೋರ್ಡ ರದ್ದು ಪಡಿಸಿ ಹಿಂದುಗಳ ಆಸ್ತಿ ಕಬಳಿಕೆ ಕುರಿತಾಗಿ ಎದ್ದಿರುವ ಗೊಂದಲ ಸರಿಪಡಿಸಿಬೇಕು. ಇಲ್ಲದಿದ್ದರೆ ಶಾಂತಿಯುತವಾದ ಹೋರಾಟ ಮುಂದೆ ದೇಶದ ಮಠಾಧೀಶರು, ಸಾಧು ಸಂತರು ಹಾಗೂ ಮತ್ತು ಇತರೆಲ್ಲರೂ ಸೇರಿ ಕ್ರಾಂತಿಕಾರಿಗಳಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಹ ಸಂಚಾಲಕ ಲಕ್ಮಿಕಾಂತ ಸ್ವಾದಿ ಸಹ ಮಾತನಾಡಿ, ಹಿಂದೂ ಧರ್ಮಕ್ಕೆ ಖುತ್ತು ಬಂದಾಗ ಹಿಂದೆ ಮುಂದೆ ನೋಡದೆ ಹೋರಾಟಕ್ಕಿಳಿಯುವ ಮಠಾಧೀಶರು ನಮ್ಮ ಹೋರಾಟದಲ್ಲಿದ್ದಾರೆ. ಇನ್ನು ಕೆಲ ಮಠಾಧೀಶರು ಅನಿವಾರ್ಯ ಕಾರಣಗಳಿಂದ ಬರಲಿಕ್ಕಾಗಿಲ್ಲಾ. ಆದರೆ ಕೆಲ ಮಠಾಧೀಶರು ಹೇಗಿದ್ದಾರೆಂದರೆ ಅವರಿಗೆ ಧರ್ಮ ಹೋರಾಟ ಬೇಕಾಗಿಲ್ಲ. ಶೋಕಿ ಮಾಡುವುದರಲ್ಲಿ ಬಿಜಿ ಇದ್ದಾರೆ. ಮತ್ತು ರಾಜಕಾರಣಿ ಮನೆಗೆ ಕರೆದಾಗ ಹೋಗುತ್ತಾರೆ. ಇದನ್ನು ಭಕ್ತರು ಈಗ ಅವಲೋಕಿಸುವ ಕಾಲ ಬಂದಿದೆ ಎಂದರು.
ಅತನೂರಿನ ಗುರುಬಸವ ಶಿವಾಚಾರ್ಯರು, ತೊನಸನಳ್ಳಿ ರೆವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಚಂದನಕೇರ ರನಚೆಟ್ಟಿ ಶಿವಾಚಾರ್ಯರು, ನಿಡಗುಂದಾ, ಕರುಣೆಶ್ವರ ಶಿವಾಚಾರ್ಯರು, ಸೂಗುರ ಚನ್ನರುದ್ರ ಮುನಿಸ್ವಾಮಿಗಳು, ಶಹಾಬಾದ್ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿ ಮಹಾಸ್ವಾಮಿಗಳು, ಕೇದಾರಲಿಂಗ ದೇವರು, ಬಾಬುರಾವ್ ಪೂಜಾರಿ, ಪ್ರಮುಖರಾದ ಅನುದೀಪ್ ದಂಡೋತಿ, ಮಹೇಶ ಕೆಂಬಾವಿ ಸಿದ್ರಾಮಯ್ಯಾ ಹಿರೆಮಠ, ಸಿದ್ದು ಕಂದಗಲ್, ರವೀಂದ್ರ ಕುಲಕರ್ಣಿ, ಭೀಮಸನರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ನಂದು ಕಟ್ಟಿ ರಾಜೇಶ್ವರಿ ದೇಶಮುಖ್, ಸುಮಾ ಕವಲ್ದಾರ ಮಹಾದೇವಿ ಕೆಸರಟಗಿ, ದಯಾನಂದ ಪಾಟೀಲ, ಆದಿನಾಥ ಹಿರಾ, ಕಲ್ಯಾಣರಾವ ಪಾಟೀಲ, ಶ್ರವಣಕುಮಾರ ನಾಯಕ ಸಿದ್ರಾಮಪ್ಪಾ ಅಲಗೂಡಕರ್ ವಿರಣ್ಣಾ ಬೇಲೂರೆ, ಸಂತೋಷ ಸೋನಾವಣೆ, ಸಿದ್ದು ಕಂದಗಲ್, ಸಂಗಮೇಶ್ ಕಾಳನೂರ್, ಚಿದಾನಂದ್ ಸ್ವಾಮಿ, ವಿಜಯಲಕ್ಷ್ಮಿ ಎಮ್ಮಿಗನೂರ್, ಮಹಾದೇವಿ ಪಾಟೀಲ, ಪ್ರಸನ್ನ ದೇಶಪಾಂಡೆ, ಶಿವು ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡಿಸಿ ವಿರುದ್ಧ ಆಕ್ರೋಶ: ಪ್ರತಿಭಟನೆ ನಡೆಸಿ ಗಂಟೆಗಟ್ಟಲೆ ಘೋಷಣೆಗಳನ್ನು ಕೂಗುತ್ತಿದ್ದರೂ ಯಾವ ಅಧಿಕಾರಿಗಳು ಮನವಿ ಪತ್ರ ಸ್ವಿಕರಿಸಲು ಬಾರದೆ ಇದ್ದಿದ್ದರ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹೋರಾಟಗಾರರು ಹಿಂದೂ ವಿರೋಧಿ ಜಿಲ್ಲಾದಿಕಾರಿಗೆ ಧಿಕ್ಕಾರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಎಂದು ಘೋಷ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಸಿದ ಪ್ರಸಂಗ ಇದೇ ಸಂದರ್ಭದಲ್ಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಘೋಷಣೆಯಾಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ವಿಜಯೇಂದ್ರ
Kalaburagi: ರಾಜ್ಯಾಧ್ಯಕ್ಷ ಚುನಾವಣೆ ನಂತರ ಪಕ್ಷದೊಳಗಿನ ಜಗಳಕ್ಕೆ ಉತ್ತರ: ಬಿ.ವೈ ವಿಜಯೇಂದ್ರ
Kalaburagi: ಸಂಸ್ಕೃತಿ ಉತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗಿ
Ram Nath Kovind: “ಏಕ ಚುನಾವಣೆ’ ಪ್ರಗತಿಗೆ ಪೂರಕ
Kalaburagi: ವಿಜ್ಞಾನ ಲೋಕದ ವಿಸ್ಮಯ ಕಂಡು ಬೆರಗಾದ ಜನ, ವಿದ್ಯಾರ್ಥಿಗಳು
MUST WATCH
ಹೊಸ ಸೇರ್ಪಡೆ
Budget 2025: 120 ಹೊಸ ತಾಣಗಳನ್ನು ಸಂಪರ್ಕಿಸುವ ಉಡಾನ್ ಯೋಜನೆ
Prashanth Sambargi ವಿರುದ್ಧ ದೂರು ನೀಡಿದ ನಟ ಪ್ರಕಾಶ್ ರೈ
Budget 2025: ತೆರಿಗೆ ಪಾವತಿದಾರರಿಗೆ ಬಂಪರ್- 12 ಲಕ್ಷದವರೆಗೂ ತೆರಿಗೆ ವಿನಾಯ್ತಿ
Bengaluru: ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ 1.5 ಲಕ್ಷ ರೂ. ವಂಚನೆ
Union Budget2025: ಶಿಕ್ಷಣ ಕ್ಷೇತ್ರಕ್ಕೆ ಒತ್ತು, ಸರ್ಕಾರಿ ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ