“ತ್ಯಾಜ್ಯ’ವಾಯ್ತು ಕಸ ವಿಲೇವಾರಿ ಘಟಕ

Team Udayavani, May 27, 2017, 3:22 PM IST

gul2.jpg

ವಾಡಿ: ಪಟ್ಟಣದ ಹೊರ ವಲಯದಲ್ಲಿರುವ ಸ್ಥಳೀಯ ಪುರಸಭೆಗೆ ಸೇರಿದ ಕಸ ವಿಲೇವಾರಿ ಘಟಕ ಕಸ ಸಂಸ್ಕರಣೆಗೆ ಬಳಕೆಯಾಗದೆ, ಕೇವಲ ಕಸ ಸುಡುವ ಕಾರ್ಯಕ್ಕೆ ಮಾತ್ರ ಬಳಕೆಯಾಗುತ್ತಿದೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಿತ್ಯ ಸಂಗ್ರಹವಾಗುವ ಅಪಾರ ಪ್ರಮಾಣದ ಘನತ್ಯಾಜ್ಯ, ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸದೆ ಎಲ್ಲವೂ ಒಂದೆಡೆ ಸೇರಿಸಿ ಗುಡ್ಡೆ ಹಾಕುವ ಮೂಲಕ ಕಡ್ಡಿ ಗೀರಲಾಗುತ್ತಿದೆ.

ಕಸ ವಿಂಗಡಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ಹಾಕುವ ವ್ಯವಸ್ಥೆ ಮಾಡಬೇಕಾದ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರು ವಿಲೇವಾರಿ ಮಾಡಿದ ಕಸದ ರಾಶಿಯನ್ನು ಗಾಳಿಗೆ ಹಾರಿ ಹೋಗುವಂತೆ ಹಾಗೂ ಮಳೆ, ಬಿಸಿಲಿಗೆ ಕೊಳೆಯುವಂತೆ ನೋಡಿಕೊಳ್ಳುತ್ತಿರುವುದು ಇವರ ಕರ್ತವ್ಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. 

ಕೇವಲ ನಿವೇಶನ ರೂಪದಲ್ಲಿದ್ದ ಪಟ್ಟಣದ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ 2015/16ನೇ ಸಾಲಿನಲ್ಲಿ ಪುರಸಭೆ ಅನುದಾನದಡಿ ಒಟ್ಟು 2 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಅಂದಿನ ಮುಖ್ಯಾಧಿಕಾರಿ, ಹಾಲಿ ಪುರಸಭೆ ತಹಶೀಲ್ದಾರ ಕೆ.ಆನಂದಶೀಲ ಹಾಗೂ ಪುರಸಭೆಯ ಅಂದಿನ ಅಧ್ಯಕ್ಷ ಭಾಗವತ ಸುಳೆ ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿದ್ದರು.

ಕಸ ವಿಂಗಡಿಸುವ ವೈಬ್ರೋ ಸ್ಕ್ರೀನಿಂಗ್‌ ಮಶೀನ್‌ ಹಾಗೂ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಲಕ್ಷಾಂತರ ರೂ. ವೆಚ್ಚದ ಯಂತ್ರಗಳನ್ನು ಖರೀದಿಸಿ ಘಟಕದಲ್ಲಿರಿಸಿದ್ದರು. ಯಂತ್ರಗಳ ಬಳಕೆ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ಕಸವನ್ನು ಕೊಳೆಸಿ ಒಣಗಿಸಲು ದೊಡ್ಡ ಹೊಂಡವನ್ನೇ ನಿರ್ಮಿಸಲಾಗಿದೆ.

ಆದರೂ ಹಿಡಿ ಗೊಬ್ಬರ ಸಿದ್ಧಪಡಿಸಲಾಗಿಲ್ಲ. ಘಟಕದಲ್ಲಿ ನೂರಾರು ಟನ್‌ ಘನತ್ಯಾಜ್ಯ ಕಸ ಮರುಬಳಕೆಯಾಗದೆ ಬೇಕಾಬಿಟ್ಟಿ ಹರಡಿಕೊಂಡಿದೆ. 2 ಕೋಟಿ ರೂ. ವೆಚ್ಚದ ಕಸ ಸಂಸ್ಕರಣಾ ಘಟಕ ನಿರುಪಯುಕ್ತವಾಗಿದೆ. ಕಸ ವಿಂಗಡಿಸಿ ಗೊಬ್ಬರ ತಯಾರಿಸುವ ಎರಡು ಯಂತ್ರಗಳು ವಿದ್ಯುತ್‌ ಸಂಪರ್ಕ ಕಾಣದೆ ಕೊಳೆಯುತ್ತಿವೆ.

ಕಸ ವಿಲೇವಾರಿ ಘಟಕದಲ್ಲಿನ ತ್ಯಾಜ್ಯದ ಕಸವನ್ನು ರಸವನ್ನಾಗಿ ಪರಿವರ್ತಿಸುವಲ್ಲಿ ಅಧಿಧಿಕಾರಿಗಳು ವಹಿಸಿರುವ ಬೇಜವಾಬ್ದಾರಿ ಧೋರಣೆಗೆ ಸಾರ್ವಜನಿಕರ ತೆರಿಗೆಯಿಂದ ಸಂಗ್ರಹವಾದ ಕೋಟ್ಯಂತರ ರೂ. ಅನುದಾನ ಕಸದ ರಾಶಿ ಪಾಲಾಗಿದೆ. ಇದು ಕಸ ಸುಡುವ ಕೇಂದ್ರವಾಗಿ ಅಕ್ಷರಶಃ ಸ್ಮಶಾನದಂತೆ ಗೋಚರಿಸುತ್ತಿದೆ.  

* ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು

Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.