ನದಿ ದಂಡೆಯ ಈ ಊರಿಗೆ ಅಶುದ್ಧ ನೀರೇ ಗತಿ!
ಇದ್ದೂ ಇಲ್ಲದಂತಾದ ನೀರು ಶುದ್ಧೀಕರಣ ಘಟಕ! ಹತ್ತಿರವೇ ನದಿ ಇದ್ದರೂ ಕುಡಿಯಲು ಉಪ್ಪು ನೀರು
Team Udayavani, Mar 14, 2021, 4:56 PM IST
ವಾಡಿ: ಭೀಕರ ಪ್ರವಾಹವೇ ಉಕ್ಕೇರಿ ಇಡೀ ಗ್ರಾಮವನ್ನೇ ತತ್ತರಿಸುವಂತೆ ಮಾಡಿದ ಮಹಾನದಿ ಭೀಮಾ, ಈ ಗ್ರಾಮದ ಜನರ ಒಡಲಿಗೆ ಹನಿ ನೀರು ಹಾಕಿಲ್ಲ. ಶತ-ಶತಮಾನಗಳ ಹಿಂದೆ ನೀರಿನಾಸೆಗೆ ನದಿ ದಂಡೆಯಲ್ಲಿ ನೆಲೆ ಕಂಡಿರುವ ಕುಟುಂಬಗಳಿಂದ ಇದೊಂದು ಊರಾಗಿ ಪರಿವರ್ತನೆಯಾಗಿದ್ದು, ದುರಂತವೆಂದರೆ ಶತಮಾನಗಳು ಉರುಳಿದರೂ ಗ್ರಾಮಸ್ಥರಿಗೆ ಕುಡಿಯಲು ಕನಿಷ್ಠ ಶುದ್ಧ ನೀರು ಸರಬರಾಜು ಮಾಡಲು ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಮಾನ ಪಡೆದಿರುವ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮ ಭೀಮಾ ನದಿಯ ದಂಡೆಯಲ್ಲಿದೆ. ಸುಮಾರು 2000 ಜನಸಂಖ್ಯೆ ಹೊಂದಿದೆ. 25 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಕಡಬೂರ ಗ್ರಾಮಕ್ಕೆ ಬೋರ್‌ವೆಲ್ ಮಂಜೂರಾಗಿದ್ದು, ಇದಕ್ಕೂ ಮುಂಚೆ ಜನತೆ ನೇರವಾಗಿ ಭೀಮಾ ನದಿಯಿಂದ ಕಲುಷಿತ ನೀರು ಪಡೆದು ಕಾಲರಾದಿಂದ ಬಳಲುತ್ತಿದ್ದರು. ಹೊಟ್ಟೆ ನೋವಿನಿಂದ ನರಳಿ ಸಂಕಟ ಅನುಭವಿಸುತ್ತಿದ್ದರು.
ಹತ್ತಿರವೇ ನದಿ ಹರಿಯುತ್ತಿದ್ದರೂ ಬೋರ್‌ವೆಲ್‌ನ ಪ್ಲೋರೈಡ್ ಮಿಶ್ರಿತ ಅಶುದ್ಧ ನೀರನ್ನೇ ಕುಡಿದು ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ. 1998-99ನೇ ಸಾಲಿನಲ್ಲಿ ಗುರುಮಠಕಲ್ ಕ್ಷೇತ್ರ ತೊರೆದು ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ಆಗಮಿಸುವ ಮೂಲಕ ಸತತ 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕಡಬೂರ ಗ್ರಾಮಸ್ಥರ ಕಷ್ಟವನ್ನು ಅರಿತು ನದಿ ದಂಡೆಯಲ್ಲೊಂದು ನೀರು ಶುದ್ಧೀಕರಣ ಘಟಕ ಮಂಜೂರು ಮಾಡಿದ್ದರು. ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟು ಕೆಲಸಕ್ಕೂ ಚಾಲನೆ ನೀಡಿದ್ದರು.
ಖರ್ಗೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಲೋಕಸಭೆಗೆ ಆಯ್ಕೆಯಾದ ನಂತರ ಯೋಜನೆ ಹಳ್ಳ ಹಿಡಿಯಿತು. ಬಿಜೆಪಿಯ ವಾಲ್ಮೀಕಿ ನಾಯಕ ಶಾಸಕರಾಗಿ ಮೂರು ವರ್ಷ ಆಡಳಿತ ನಡೆಸಿದ್ದು, ಸದ್ಯ ಶಾಸಕ ಪ್ರಿಯಾಂಕ್ ಖರ್ಗೆ ಅವರು ಎಂಟು ವರ್ಷಗಳಿಂದ ಅಧಿ ಕಾರದಲ್ಲಿದ್ದರೂ ಈ ಶುದ್ಧೀಕರಣ ಘಟಕ ಚೇತರಿಸಿಕೊಂಡಿಲ್ಲ. ಹನಿ ನೀರು ಶುದ್ಧೀಕರಿಸದೆ ಕೋಟಿ ರೂ. ಖರ್ಚು ವ್ಯರ್ಥವಾಗಿದೆ. ಯಾರು ಶಾಸಕರಾದರೇನು? ಮಂತ್ರಿ-ಸಂಸದರಾದರೇನು? ಶುದ್ಧ ನೀರು ಕುಡಿಯುವ ಭಾಗ್ಯ ನಮಗಿಲ್ಲ ಎಂದು ಗ್ರಾಮಸ್ಥರು ಶಪಿಸುತ್ತಿದ್ದಾರೆ.
ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.