ನೀರು-ನೆರಳಿಗೆ ನರಳಾಟ
Team Udayavani, May 15, 2017, 3:57 PM IST
ವಾಡಿ: ಈ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಸಲೀಸಾಗಿ ನಿಲ್ಲುತ್ತವೆ. ಆದರೆ ರೈಲಿಗಾಗಿ ಕಾಯುವ ಪ್ರಯಾಣಿಕರು ಮಾತ್ರ ನೆರಳು ನೀರಿಗಾಗಿ ಪರದಾಡುತ್ತಾರೆ. ಮೂಲ ಸೌಲಭ್ಯಗಳೆಲ್ಲವೂ ಗಗನಕುಸುಮವಾಗಿದ್ದು, ಇದು ಹೆಸರಿಗೆ ಮಾತ್ರ ರೈಲು ನಿಲ್ದಾಣ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರ ವಲಯದಲ್ಲಿರುವ ಹಳಕರ್ಟಿ ರೈಲು ನಿಲ್ದಾಣ ಅಭಿವೃದ್ಧಿ ಕಾಣದ್ದಕ್ಕೆ ಹಲವು ದಶಕಗಳ ಇತಿಹಾಸವಿದೆ. ಬೀದರ, ಹೈದ್ರಾಬಾದ, ಚೆನ್ನೆ ಮತ್ತು ಬೆಂಗಳೂರಿಗೆ ಮಾರ್ಗ ಕಲ್ಪಿಸುವ ಈ ನಿಲ್ದಾಣದಲ್ಲಿ ಲಿಂಕ್ ಏಕ್ಸ್‌ಪ್ರೆಸ್, ರಾಯಲಸೀಮಾ ಸೇರಿದಂತೆ ಐದಾರು ರೈಲುಗಳು ನಿಲುಗಡೆ ಕಾಣುತ್ತವೆ.
ರೈಲು ಹತ್ತೂರಿಗೆ ಟಿಕೆಟ್ ವಿತರಣೆ ಮಾಡುವವರಾಗಲಿ ಅಥವಾ ರೈಲು ಇಳಿಯೋರಿಗೆ ಟಿಕೆಟ್ ಕೇಳಬೇಕಾದ ಟಿಟಿಇಗಳಾಗಲಿ ಇಲ್ಲಿ ಕಾಣಸಿಗುವುದಿಲ್ಲ. ಅಂದರೆ, ಇದೆಂತಹ ರೈಲು ನಿಲ್ದಾಣ ಎಂದು ನೀವು ಹುಬ್ಬೇರಿಸಿದರೂ ಅಚ್ಚರಿಯಿಲ್ಲ. ಬೇಕಾಬಿಟ್ಟಿ ಎರಡು ಪ್ಲಾಟ್‌ಫಾರ್ಮ್ ನಿರ್ಮಿಸಿ, ನಾಮಫಲಕ ಳವಡಿಸಿ ಜವಾಬ್ದಾರಿ ಕಳಚಿಕೊಂಡಿರುವ ರೈಲ್ವೆ ಅಧಿಕಾರಿಗಳು, ಕುಡಿಯುವ ನೀರು, ಆಸನ, ಸೂಕ್ತ ನೆರಳಿನ ವ್ಯವಸ್ಥೆ ಒದಗಿಸುವಲ್ಲಿ ನಿರ್ಲಕ್ಷé ವಹಿಸಿದ್ದಾರೆ.
ಹಂದಿ ಗೂಡಿನಂತೆ ಬಾಗಿಲಿಲ್ಲದ ನಿರೀಕ್ಷಣಾ ಕೋಣೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಇದು ಪುಂಡ ಪೋಕರಿಗಳ ಅಡಗುದಾಣವಾಗಿ ಗಬ್ಬು ನಾರುತ್ತಿದೆ. ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಸೂಕ್ತವಾದ ರಸ್ತೆ ಸೌಕರ್ಯವಿಲ್ಲ. ಮುಳ್ಳುಕಂಟಿಗಳ ಮಧ್ಯೆಯಿರುವ ಕಾಲುದಾರಿಗೆ ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ. ಹಗಲು ನಿರ್ಜನ ಪ್ರದೇಶದಂತಿದ್ದರೆ, ಹತ್ತಿರವೇ ಸ್ಮಶಾನ ಇರುವುದರಿಂದ ರಾತ್ರಿ ನಿಗೂಢ ತಾಣವಾಗಿ ಪರಿವರ್ತನೆಯಾಗುತ್ತದೆ.
ಇತರ ರೈಲು ನಿಲ್ದಾಣಗಳಂತೆ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಬೇಕಿದ್ದ ಹಳಕರ್ಟಿ ರೈಲು ನಿಲ್ದಾಣ ರೈಲ್ವೆ ಇಲಾಖೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಗೆ ಸಿಲುಕಿ ಮೌನವಾಗಿ ನಿಂತಿದೆ. ರಸ್ತೆ ಸೌಲಭ್ಯದ ಜತೆಗೆ ಇತರ ಮೂಲಸೌಕರ್ಯ ಒದಗಿಸುವ ಮೂಲಕ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
* ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.