ಮೋದಿಗಾಗಿ ಶ್ರೀಶೈಲಕ್ಕೆ ಪಾದಯಾತ್ರೆ
Team Udayavani, Mar 22, 2019, 10:57 AM IST
ಕಲಬುರಗಿ: ಜನತೆ ತಮ್ಮ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸಪ್ಪ ದೇವರೇ ಎಂದು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ, ಜಿಲ್ಲೆಯ ಜೇವರ್ಗಿ ತಾಲೂಕಿನ ನಾಲ್ವರು ಯುವಕರು ನರೇಂದ್ರ ಮೋದಿ “ಮತ್ತೂಮ್ಮೆ ಪ್ರಧಾನಿ’ ಆಗಬೇಕೆಂಬ ಹರಕೆ ಹೊತ್ತು ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ಮೊರೆ ಹೋಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಾದ ಜೇವರ್ಗಿ ತಾಲೂಕಿನ ಕಲ್ಲೂರು (ಬಿ) ಗ್ರಾಮದ ನಿಂಗು ಆಜಾದ್, ಸಿದ್ಧು ಭರತ್, ಬೈಲಪ್ಪ ಕಲ್ಲೂರು, ಮಲ್ಲಿಕಾರ್ಜುನ ಕಲ್ಲೂರು ಶ್ರೀ ಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಹಮ್ಮಿಕೊಂಡವರು. ಮಾ.22 ರಂದು ಅಂದರೆ ಶುಕ್ರವಾರ ಬೆಳಗ್ಗೆ ತಮ್ಮ ಗ್ರಾಮದಿಂದ ನಾಲ್ವರು ಯುವಕರು ಪಾದಯಾತ್ರೆ ಹೊರಡುವ ಮೂಲಕ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಪ್ಪ ಮಲ್ಲಯ್ಯ ಎಂದು ಹರಕೆ ಹೊತ್ತು ಶ್ರೀಶೈಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಟೀಂ ಮೋದಿ ಸಂಘಟನೆಯಲ್ಲಿ ಸಕ್ರಿಯವಾಗಿರುವ ಇವರು ಮೋದಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ನಾಲ್ವರು 21ರಿಂದ 23 ವಯಸ್ಸಿನ ಅಸುಪಾಸಿನವರಾಗಿದ್ದಾರೆ. ನಿಂಗು ಮತ್ತು ಸಿದ್ಧು ಬಿಎ ಪದವಿಧರರಾಗಿದ್ದರೆ, ಬೈಲಪ್ಪ , ಮಲ್ಲಿಕಾರ್ಜುನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಕಲ್ಲೂರು (ಬಿ) ಗ್ರಾಮದಿಂದ ಅನೇಕರು ಹರಕೆ ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ.
ಅದೇ ರೀತಿ ಈ ವರ್ಷವೂ ಅಂದಾಜು 40 ಮಂದಿ ಗ್ರಾಮಸ್ಥರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಗ್ರಾಮಸ್ಥರೊಂದಿಗೆ ಈ ನಾಲ್ವರು ಯುವಕರು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಹರಕೆ ಹೊತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಳ್ವಿಕೆ ನಡೆಸಿ ಜಗತ್ತೇ ಭಾರತದತ್ತ ಮುಖ ಮಾಡುವಂತೆ ಮಾಡಿದ್ದಾರೆ. ಭವ್ಯ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ. ಇಡೀ
ವಿಶ್ವವೇ ಯೋಗ ದಿನ ಆಚರಿಸುವಂತೆ ಮಾಡಿದ ಮೋದಿ ಅದರ ಕೀರ್ತಿಯನ್ನು ದೇಶದ ಜನತೆಗೆ ಅರ್ಪಿಸಿದ್ದಾರೆ. ದೇಶವನ್ನು ಪ್ರಪಂಚದಲ್ಲಿ ಗೌರವ ಸ್ಥಾನದಿಂದ ನೋಡಲು ಮೋದಿ ಅವರೇ ಮತ್ತೂಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಾರೆ ನಿಂಗು ಆಜಾದ್ ಮತ್ತು ಸಿದ್ಧು ಭರತ್.
ನಾವೆಲ್ಲರೂ ಇದೇ ಮೊದಲ ಬಾರಿಗೆ ದೂರದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ಹೊರಡಲು ತೀರ್ಮಾನಿಸಿದ್ದೇವೆ. ಪ್ರಸಕ್ತ
ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಬಹುಮತದೊಂದಿಗೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಬೇಕೆಂದು ಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ ಮಾಡಿಸಿ ಬೇಡಿಕೊಳ್ಳುತ್ತೇವೆ. ದೇವರ ಕೃಪೆಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ವಿಶ್ವಾಸ ನಮ್ಮದು ಎನ್ನುತ್ತಾರೆ ಯುವಕರು.
ಕಲ್ಲೂರು (ಬಿ) ಗ್ರಾಮದಿಂದ ಶ್ರೀಶೈಲ 400 ಕಿಮೀ ದೂರವಿದೆ. ಪಾದಯಾತ್ರೆ ಮೂಲಕ ತೆರಳಲು ಸುಮಾರು ಒಂಭತ್ತು ದಿನಗಳು ಬೇಕಾಗುತ್ತದೆ. ನಿತ್ಯ ಅಂದಾಜು 50 ಕಿಮೀ ಕ್ರಮಿಸಿದರೂ ಒಂಭತ್ತು ದಿನದಲ್ಲಿ ಶ್ರೀಶೈಲಕ್ಕೆ ತಲುಪುವ ವಿಶ್ವಾಸವಿದೆ. ಅಲ್ಲಿಗೆ ತಲುಪಿದ ನಂತರ ನಮ್ಮ ಮೆಚ್ಚಿನ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ನಾವು ನಾಲ್ವರು ಮಲ್ಲಯ್ಯನಲ್ಲಿ ಪ್ರಾರ್ಥಿಸುತ್ತೇವೆ ಎಂದು ಅಭಿಮಾನದಿಂದ ನುಡಿಯುತ್ತಾರೆ.
ರಂಗಪ್ಪಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.