ಚಿತ್ತಾಪುರ: ಮಧ್ಯಾಹ್ನದ ನಂತರ ಅಗತ್ಯ ದಿನಸಿಗೂ ಬ್ರೇಕ್
Team Udayavani, Aug 7, 2021, 7:24 PM IST
ವಾಡಿ (ಚಿತ್ತಾಪುರ): ಪಟ್ಟಣದಲ್ಲಿ ವಾರಾಂತ್ಯ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಶನಿವಾರ ಅಂಗಡಿ ಮುಗ್ಗಂಟುಗಳನ್ನು ಬಂದ್ ಮಾಡುವ ಮೂಲಕ ವ್ಯಾಪಾರಿಗಳು ಸಹಕಾರ ನೀಡಿದರು.
ಮಹಾಮಾರಿ ಕೋವಿಡ್ ಸೊಂಕಿನ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು-ನೋವುಗಳನ್ನು ಕಂಡ ಸ್ಥಳೀಯರು, ಮೂರನೇ ಅಲೆಯ ಆರಂಭದ ದಿನಗಳನ್ನು ಭಾರವಾದ ಮನಸ್ಸಿನಿಂದಲೇ ಎದುರಿಸಲು ಸಿದ್ಧರಾಗಿರುವುದು ಕಂಡು ಬಂದಿತು. ಶುಕ್ರವಾರ ಸಂಜೆ ಸರಕಾರದಿಂದ ಏಕಾಏಕಿ ವಾರಾಂತ್ಯ ಕರ್ಫ್ಯೂ ಘೋಷಣೆಯಾದ ಸಂದೇಶ ಬಹುತೇಕ ಹೋಟೆಲ್ ವ್ಯಾಪಾರಿಗಳಿಗೆ ತಲುಪದ ಕಾರಣ ಉಪಹಾರ ಪದಾರ್ಥಗಳ ಸಿದ್ಧತೆ ಮಾಡಿಕೊಂಡವರು ಶನಿವಾರ ಪೊಲೀಸರ ಕಟ್ಟೆಚ್ಚರದ ಮಧ್ಯೆಯೂ ವ್ಯವಹಾರದಲ್ಲಿ ತೊಡಗಿ ನಷ್ಟದ ಗೋಳು ಮುಂದಿಟ್ಟರು.
ಮಧ್ಯಾಹ್ನ ೨ ಗಂಟೆ ವರೆಗೆ ಹಾಲು, ಹಣ್ಣು, ದಿನಸಿ, ತರಕಾರಿ, ಮಾಂಸ ಖರೀದಿಗೆ ಅವಕಾಶ ನೀಡಲಾಗಿತ್ತು. ನಂತರ ನಗರದ ರಸ್ತೆಗಳು, ಬಡಾವಣೆಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ ಸಂಚಾರ ಸಹಜವಾಗಿದ್ದರೂ ಪ್ರಯಾಣಿಕರ ಸಂಖ್ಯೆ ಕಂಡು ಬರಲಿಲ್ಲ. ಪೊಲೀಸರ ಕಾರಿನ ಸೈರನ್ ಕೇಳಿ ಎರಡು ತಿಂಗಳು ಕಳೆದಿಲ್ಲ ಮತ್ತೆ ಕಿವಿಗಡಚಿಕ್ಕುವ ಭಯದ ವಾತಾವರಣ ಮೂಡಿಸುವ ಪೊಲೀಸ್ ವಾಹನದ ಸೈರನ್ ಜನರ ಮನದ ಆಕ್ರೋಶ ಭುಗಿಲೇಳಿಸಿತು.
ಇಷ್ಟುದಿನ ರಾಜಕಾರಣ ಮಾಡಿದರು ಈಗ ಲಾಕ್‌ಡೌನ್ ಘೋಷಿಸಿದರು. ಕೋವಿಡ್ ಹೆಸರಿನಲ್ಲಿ ಪದೇಪದೇ ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಸರಕಾರದ ವಿರುದ್ಧ ಅತೃಪ್ತಿ ಹೊರಹಾಕಿದರು. ಸರಕಾರದ ಆದೇಶದಂತೆ ಪಿಎಸ್‌ಐ ವಿಜಯಕುಮಾರ ಭಾವಗಿ ಅವರು ವಾರಾಂತ್ಯ ಕರ್ಫ್ಯೂ ಯಶಸ್ವಿಗಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪೊಲೀಸ್ ಬಂದೋಬಸ್ ಒದಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.