ಎಚ್‌ಕೆಆರ್‌ಡಿಬಿಯಿಂದ ಹಾಳು ಬಾವಿ-ಕೆರೆಗಳ ಸುಧಾರಣೆ
Team Udayavani, May 26, 2017, 3:32 PM IST
ಕಲಬುರಗಿ: ಹಾಳು ಬಾವಿಗಳನ್ನು ಪುನರಜ್ಜೀನಗೊಳಿಸುವುದು ಹಾಗೂ ಕೆರೆಗಳ ಹೂಳೆತ್ತಲು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮುಂದಾಗಿದೆ ಎಂದು ಮಂಡಳಿ ಅಧ್ಯಕ್ಷ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ಗುರುವಾರ ನಡೆದ ಮಂಡಳಿ ಪ್ರಸಕ್ತ ಸಾಲಿನ ಪ್ರಥಮ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಾವಿ-ಕೆರೆಗಳ ಅಭಿವೃದ್ಧಿ ಮೂಲಕ ಅಂತರ್ಜಲ ಹೆಚ್ಚಿಸುವುದು ಹಾಗೂ ಕೃಷಿಕ ಪೂರಕ ವಾತಾವರಣ ಕಲ್ಪಿಸುವುದು ಈ ಕಾರ್ಯದ ಉದ್ದೇಶವಾಗಿದೆ ಎಂದರು. ವರ್ಷದೊಳಗೆ ಮಂಡಳಿಯ ಒಟ್ಟಾರೆ ಎಲ್ಲ ಕಾಮಗಾರಿಗಳನ್ನು ಮುಂದಿನ 2018ರ ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
2013- 14ನೇ ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಅದೇ ರೀತಿ 2014-15ನೇ ಸಾಲಿನಲ್ಲಿ ಶೇ. 85ರಷ್ಟು, 15-16ನೇ ಸಾಲಿನಲ್ಲಿ ಶೇ. 80ರಷ್ಟು, 16-17ನೇ ಸಾಲಿನಲ್ಲಿ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಪ್ರಸಕ್ತ ಸಾಲಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಮಂಡಳಿಗೆ ಇಲ್ಲಿಯವರೆಗೆ ಮಂಜೂರಾದ 3250 ಕೋಟಿ ರೂ.ದಲ್ಲಿ ಇಲ್ಲಿಯವರೆಗೆ 2080 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು. ಜೂನ್‌ವರೆಗೆ ಮಂಡಳಿಯ ಆರ್ಥಿಕ ಸಾಧನೆ 1800 ಕೋಟಿ ರೂ. ದಾಟುವ ಸಂಭವವಿದ್ದು, ಮೇ 2018ರೊಳಗೆ ಮಂಡಳಿಗೆ ಒದಗಿಸಿದ ಎಲ್ಲ ಅನುದಾನ ಖರ್ಚು ಮಾಡಲು ಕಾಲಮಿತಿ ಯೋಜನೆ ಹಮ್ಮಿಕೊಳ್ಳಲಾಗಿದೆ.
ಒಟ್ಟಾರೆ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಮತ್ತು ಅಂಗನವಾಡಿ ಅಭಿವೃದ್ಧಿ ಮತ್ತು ಸುಧಾರಣೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದರು. ಮಂಡಳಿ ವ್ಯಾಪ್ತಿಯಲ್ಲಿ ಉದ್ಯೋಗ ಮೇಳ, ಕೈಗಾರಿಕಾ ಮೇಳ ಮತ್ತು ಸಾಂಸ್ಕೃತಿಕ ಮೇಳಗಳನ್ನು ನಡೆಸಲು, ಆರು ಜಿಲ್ಲೆಗಳ ಎಲ್ಲ ಗ್ರಾಮ, ತಾಂಡಾ, ಹಟ್ಟಿಗಳಿಗೆ ಪಕ್ಕಾ ಡಾಂಬರ ರಸ್ತೆ ಸೌಲಭ್ಯ ಕಲ್ಪಿಸಲು,
-ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣ ಹಾಗೂ ನೀರಾವರಿ ಕಾಲುವೆಗಳ ಸುಧಾರಣೆ ಮಾಡಲು, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು, ಆರೋಗ್ಯ ವಿಸ್ತರಣಾ ಕೇಂದ್ರಗಳನ್ನು ಪ್ರಾರಂಭಿಸಲು, ಇನ್‌ಫೆಂಟ್ ಮತ್ತು ಮಾಟ್ಯಾìಲಿಟಿ ಪ್ರಮಾಣ ಸುಧಾರಿಸಲು, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬೇಡಿಕೆ ಆಧಾರಿತ ರಸ್ತೆ ಮತ್ತು ವರ್ತುಲ ರಸ್ತೆಗಳ ನಿರ್ಮಾಣ ಕಾರ್ಯಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸೋನಿಯಾ ಪ್ರಚಾರಕ್ಕಲ್ಲ: ಇಎಸ್‌ಐಸಿ ಆಸ್ಪತ್ರೆ ಉದ್ಘಾಟಿಸಲು ಯುಪಿಎ ಚೇರ್ಮನ್ ಹಾಗೂ ಎಐಸಿಸಿಐ ಅಧ್ಯಕ್ಷೆ ಸೋನಿಯಾಗಾಂಧಿ ಆಗಮಿಸಿದ್ದಾಗ ಸ್ವಾಗತ ಕೋರುವ ಸಲುವಾಗಿ 1.40 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ ಪ್ರಚಾರಕ್ಕಲ್ಲ. ಆದರೂ ಈ ಕುರಿತು ವಿವರಣೆ ಕೇಳಲಾಗಿದೆ. ಮಂಡಳಿಯ ಆಡಿಟ್‌ವಾಗಿಲ್ಲವೆಂದು ಕೇಳುತ್ತಿರುವುದು ಮೂರ್ಖತನದಿಂದ ಕೂಡಿದೆ ಎಂದು ಸಚಿವರು ತಿಳಿಸಿದರು.
ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್, ಶಾಸಕ ಅಶೋಕ ಖೇಣಿ, ಬೀದರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಶೇರಿಕಾರ, ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ, ಜಂಟಿ ನಿರ್ದೇಶಕ ಎಸ್. ಬಸವರಾಜ, ಉಪ ಕಾರ್ಯದರ್ಶಿ ಗಂಗೂಬಾಯಿ ಮಾನಕರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
Chittapur: ತಾಯಿಯನ್ನೇ ಕೊ*ಲೆಗೈದ ಮಗ: ಆರೋಪಿಯ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.