![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 11, 2024, 5:40 PM IST
ಉದಯವಾಣಿ ಸಮಾಚಾರ
ಗುರುಮಠಕಲ್: ಚಿಂಚೋಳಿ ನನ್ನ ಕರ್ಮ ಭೂಮಿ. ಅಲ್ಲಿನ ಜನ ಎರಡು ಬಾರಿ ಶಾಸಕನಾಗಿ ಆರಿಸಿ ಕಳುಹಿಸಿದ್ದಾರೆ. ಅಲ್ಲಿನ ಜನರೊಂದಿಗೆ ಬೆರೆಯುವುದು ತಪ್ಪಾ? ಚಿಂಚೋಳಿ ಏನು ಪಾಕಿಸ್ತಾನದಲ್ಲಿದೆಯೇ ಎಂದು ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದರು.
ತಾಲೂಕಿನ ಬೋರಬಂಡಾದಲ್ಲಿ ಬಂಜಾರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ
ಅವರ ವಿರುದ್ಧ ವೈಯಕ್ತಿಕವಾಗಿ ಏಕವಚನದಲ್ಲಿ ಲೇವಡಿ ಮಾಡಿದರು. ಸಚಿವ ಪ್ರಿಯಾಂಕ ಯಾವ ಹಳ್ಳಿಯಲ್ಲಿ ಮಲಗಿದ್ದಾರೆ. ಯಾರ ಸಮಸ್ಯೆ ಆಲಿಸಿದ್ದಾರೆ. ನಾನು ಹಳ್ಳಿಯಲ್ಲಿ ಮಲಗಿ ಜನರ ಸಮಸ್ಯೆ ಆಲಿಸಿದ್ದೀನಿ ಎಂದು ಹೇಳಿದರು.
ಕೋಲಿ, ಕಬ್ಬಲಿಗ ಸಮಾಜ ಎಸ್‌ಟಿಗೆ ಸೇರ್ಪಡೆ ವಿಚಾರ ಖರ್ಗೆ ಏಕೆ ಮಾತನಾಡಿಲ್ಲ. ಕೋಲಿ ಕಬ್ಬಲಿಗ ಸಮಾಜ ಎಸ್‌ಟಿ ಸೇರ್ಪಡೆ ಬಗ್ಗೆ ಯಾರು ಮಾತಾಡಿರಲಿಲ್ಲ. ಲೋಕಸಭೆಯಲ್ಲಿ 4 ಬಾರಿ ಮಾತನಾಡಿದ್ದೇನೆ. ಲಿಖೀತ ಉತ್ತರ ಸರ್ಕಾರ ನೀಡಿದ್ದು, ಪರಿಶೀಲನೆ ಹಂತದಲ್ಲಿದೆ ಈಗಾಗಲೇ ತಳವಾರ ಸಮಾಜಕ್ಕೆ ಮೀಸಲಾತಿ ನೀಡಲಾಗಿದೆ. ಕಬ್ಬಲಿಗ ಸಮಾಜವು ಎಸ್‌ಟಿ ಸೇರ್ಪಡೆಯಾಗುವ
ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಯಿದೆ. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರೊಂದಿಗೆ ಮಾತನಾಡಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಗುರುಮಠಕಲ್, ಸೇಡಂ, ಚಿಂಚೋಳಿ ಕ್ಷೇತ್ರದ ಜನ ದುಡಿಯಲು ಹೋಗುತ್ತಾರೆ. ಜನರಿಗೆ ಉದ್ಯೋಗ ಸೃಷ್ಟಿಸುವ ಮಾತು ಕೊಟ್ಟಿದೆ. ಕಲಬುರಗಿಯಲ್ಲಿ 10 ಸಾವಿರ ಕೋಟಿ ಹೂಡಿಕೆಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ 1 ಲಕ್ಷ ಜನರಿಗೆ ನೇರ ಉದ್ಯೋಗ, 2 ಲಕ್ಷ ಜನರಿಗೆ ಅವಲಂಬಿತ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಪ್ರಮುಖರಾದ ನರೇಂದ್ರ ರಾಠೊಡ, ರಮೇಶ ಪವಾರ್, ಕಾಶಿನಾಥ, ವಿಜಯಕುಮಾರ್, ಸುರೇಶ ರಾಠೊಡ, ಪತ್ತು ನಾಯಕ, ಕಿಶನ
ರಾಠೊಡ, ರಮೇಶ ರಾಠೊಡ ಹಾಜರಿದ್ದರು.
ತನಗಿಂತ ಮೊದಲು ಬಿಜೆಪಿ ಸೇರಿದ್ದು ಬಾಬುರಾವ ಚಿಂಚನಸೂರ. ನನಗೆ ಬಿಜೆಪಿ ಸೇರಿಸಿದ್ದೆ ಚಿಂಚನಸೂರ. ಅವರು ಸುಳ್ಳು
ಹೇಳುವುದರಲ್ಲಿ ಮಿತಿಮೀರಿ ಹೋಗಿದ್ದಾರೆ. ತಾಂಡಾ ಜನರು ಅಮಾಯಕರು. ನಾನು ತಾಂಡಾಕ್ಕೆ ಬಂದಿಲ್ಲ ಎಂದು ದಾರಿ
ತಪ್ಪಿಸುತ್ತಿದ್ದಾರೆ. ಸಂಸದರ ಕೆಲಸ ಏನು ಎನ್ನುವುದು ಜನರಿಗೆ ತಿಳಿಹೇಳಲಾಗುವುದು. ಬಂಜಾರ ಸಮಾಜ ಎಸ್‌ಸಿ ಇಂದ
ತೆಗೆಯಲು ಕಸರತ್ತು ನಡೆಯುತ್ತಿದೆ. ನಾನು ಇರುವವರೆಗೆ ಏನು ಮಾಡಲಾಗಲ್ಲ. ಜನ ಪ್ರಬುದ್ಧರಿದ್ದಾರೆ. ಜನರಿಗೆ ಏನು
ಮಾಡಬೇಕು ಎನ್ನುವುದು ಗೊತ್ತು ಎಂದರು. ಅಪ್ಪ ರಾಜ್ಯಸಭಾ ಸದಸ್ಯ, ಪ್ರಿಯಾಂಕ ವಿಧಾನಸಭೆ, ಮಾವ ಎಂಪಿ ಆಗಬೇಕು
ಎನ್ನುವಂತೆ ತಮ್ಮ ಕುಟುಂಬದಲ್ಲಿಯೇ ರಾಜಕೀಯ ಅಧಿಕಾರದಲ್ಲಿ ಇರಬೇಕು ಎನ್ನುವುದು ಕುಟುಂಬ ರಾಜಕೀಯ. ಅಧಿ
ಕಾರ ವಿಕೇಂದ್ರೀಕರಣ ಆಗಬೇಕು ಎಂದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.