ಅಂಬೇಡ್ಕರ್‌ಗೆ ಕಾಂಗ್ರೆಸ್ ಭಾರತರತ್ನ ನೀಡಲಿಲ್ಲವೇಕೆ?
Team Udayavani, Feb 26, 2018, 10:05 AM IST
ಕಲಬುರಗಿ: ಸ್ವಾತಂತ್ರ್ಯ ನಂತರ ಅಧಿಕಾರ ನಡೆಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಚುನಾವಣೆ ಬಂದಾಗಲೇ ನೆನಪಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದರು. ನಗರದ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಬಿಜೆಪಿ ಎಸ್‌ಸಿ ಸಮುದಾಯಗಳ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನದವರೆಗೂ ಶೇ.80ರಷ್ಟು ದಲಿತರಿಗೆ ಪಕ್ಕಾ ಮನೆ ಇಲ್ಲ. ಆದರೆ 2022ರೊಳಗೆ ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರದಲ್ಲಿ ನರೇಂದ್ರ ಮೋದಿ
ಸರ್ಕಾರ ಎಲ್ಲರಿಗೂ ಪಕ್ಕಾ ಮನೆ ಜತೆಗೆ ಉಚಿತ ವಿದ್ಯುತ್ ಪೂರೈಸಲಿದೆ ಎಂದು ಘೋಷಿಸಿದರು.
ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರಿಗೆ ಅವಮಾನ ಮಾಡಿದೆ. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ ಅವರ ಬಗ್ಗೆ ಕಾಂಗ್ರೆಸ್‌ಗೆ ನಿಜವಾದ ಗೌರವವಿದ್ದರೆ ಭಾರತ ರತ್ನ ಏಕೆ ನೀಡಲಿಲ್ಲ. ಈ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಉತ್ತರವಿದೆಯೇ? ಭಾರತ ರತ್ನ ಯಾರು ನೀಡಿದ್ದಾರೆ ಎಂಬುದನ್ನು ಅವರೇ ಜನರಿಗೆ ತಿಳಿಸಲಿ. ಬಾಬು ಜಗಜೀವನರಾಮ್ ಪ್ರಧಾನಿಯಾಗಲು ಮುಂದಾಗಿದ್ದರು. ಆದರೆ ಅದನ್ನು ತಪ್ಪಿಸಿದ್ದೇ ಕಾಂಗ್ರೆಸ್ ಪಕ್ಷ ಎಂದು ಜರಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಅಂಬೇಡ್ಕರ ಜನ್ಮಸ್ಥಳ, ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿ ಮತ್ತು ನವದೆಹಲಿ, ಲಂಡನ್‌ದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಅಲ್ಲದೇ 200 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಾರೆ. ಅದೇ ರೀತಿ ಉಚಿತ ಅನಿಲ ಭಾಗ್ಯ, 2022ರೊಳಗೆ ಎಲ್ಲ ದಲಿತರಿಗೆ ಪಕ್ಕಾ ಮನೆ ನೀಡುವ ಕಾರ್ಯಸೂಚಿ ಹೊಂದಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ 318 ದಲಿತರ ಹತ್ಯೆಯಾಗಿದೆ. 9080 ಜನರ ಮೇಲೆ ದೌರ್ಜನ್ಯವಾಗಿದೆ. ಮಹಿಳೆಯರ
ಮೇಲೆ ಅತ್ಯಾಚಾರ ನಡೆದಿದೆ. ಇದನ್ನು ಗೃಹ ಖಾತೆ ಸಚಿವರು ಸನದಲ್ಲಿಯೇ ಹೇಳಿದ್ದಾರೆ. ಕಾಂಗ್ರೆಸ್‌ನ ಮೋಸ ಗೊತ್ತಾಗಿ ಈಗ ದಲಿತರು ಬಿಜೆಪಿ ಜತೆಗೆ ಬರುತ್ತಿರುವುದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲಿಕ್ಕಾಗುತ್ತಿಲ್ಲ. ಭ್ರಷ್ಟಾಚಾರ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ಲಕ್ಷ ರೂ. ಮೌಲ್ಯದ ಗಡಿಯಾರ ಏಲ್ಲಿಂದ ಬಂತು ಎಂದು ವಾಗ್ಧಾಳಿ ನಡೆಸಿದರು.
13 ನಿಮಿಷ ಭಾಷಣ: ಸಂಜೆ ಸ್ವಲ್ಪ ತಂಪಾದ ವಾತಾವರಣ ಇರುವುದರಿಂದ ಅಮಿತ್ ಶಾ ಅವರು ಬಹಳ ಹೊತ್ತಿನವರೆಗೂ ಮಾತನಾಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಸ್ವಲ್ಪ ಬಳಲಿದಂತೆ ಕಂಡ ಶಾ ಅವರು 13 ನಿಮಿಷಗಳ ಕಾಲ ಮಾತನಾಡಿದರು.
ಕಪ್ಪು ಬಾವುಟ: ಅಮಿತ್ ಶಾ ಭಾಷಣ ಆರಂಭಿಸುತ್ತಿದ್ದಂತೆ ಸಭೆಯೊಳಗೆ ಬಂದಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು. ತಕ್ಷಣ ಎಚ್ಚೆತ್ತ ಪೊಲೀಸರು ಬಂಧಿಸಿದರು. ಇದಕ್ಕೆ ಅಮಿತ್ ಶಾ ಟಾಂಗ್ ನೀಡುವುದರೊಂದಿಗೆ ಭಾಷಣ ಆರಂಭಿಸಿ, ಅವರು ಕಾಂಗ್ರೆಸ್‌ನವರಿದ್ದಾರೆ. ಎಷ್ಟು ಕೂಗುತ್ತಾರೆ ಕೂಗಲು ಬಿಡಿ. ಅವರ ಕಡೆ ಗಮನಹರಿಸುವ ಅವಶ್ಯಕತೆಯಿಲ್ಲ ಎಂದರು. ತದನಂತರ ಕರ್ನಾಟಕ ಭಾವಿ ಸಿಎಂ ಯಡಿಯೂರಪ್ಪ ಎಂತಲೇ ಭಾಷಣ ಆರಂಭಿಸಿದರು. ಸಿದ್ದರಾಮಯ್ಯ ಸರ್ಕಾರ
ಕಿತ್ತೂಗೆಯಲು ಸಂಕಲ್ಪಗೈಯುವಂತೆ ಜನತೆಗೆ ಶಾ ಕರೆ ನೀಡಿದರು. ಕೇಂದ್ರದ ಸಚಿವ ರಮೇಶ ಜಿಗಜಿಣಗಿ, ಸಂಸದ ಶ್ರೀರಾಮುಲು, ಮಾಜಿ ಸಚಿವರಾದ ಗೋವಿಂದ ಕಾರಜೋಳ ಮುಂತಾದವರು ಮಾತನಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್. ವೀರಯ್ಯ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ದಲಿತರಿಗೆ ಪಕ್ಕಾ ಮನೆ ಹಾಗೂ ನಿವೇಶನ ಕಲ್ಪಿಸಲಾಗುವುದಲ್ಲದೇ ಸಂಕಲ್ಪದಂತೆ ಈ ಕಾರ್ಯ ಗೈಯಲಾಗುವುದು. ಹಿಂದಿನ ಸಣ್ಣ ಪುಟ್ಟ ತಪ್ಪುಗಳಿದ್ದಲ್ಲಿ ಮರೆತು ಬಿಡಿ, ಈಗ ಅವಕಾಶ ನೀಡಿ.
ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.