ವರ್ಷವಾದರೂ ಮುಗಿಯದ ಕಾಮಗಾರಿ
Team Udayavani, Jan 21, 2018, 3:19 PM IST
ಅಫಜಲಪುರ: ನರೇಗಾ ಮತ್ತು ಎಸ್ ಡಿಪಿ ಅಡಿ 2015-16ನೇ ಸಾಲಿನಲ್ಲಿ ಅಂದಾಜು 13.5 ಲಕ್ಷ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವರ್ಷವಾದರೂ ಮುಗಿದಿಲ್ಲ. ಹೀಗಾಗಿ ಅಂಗನವಾಡಿ ಮಕ್ಕಳು ಪಂಚಾಯತ ಆವಣದಲ್ಲಿ ಪಾಠ ಕಲಿಯುವಂತಾಗಿದೆ.
ತಾಲೂಕಿನ ಬಳೂರ್ಗಿ ಗ್ರಾಮದ ವಾರ್ಡ್ ನಂ. 2ರಲ್ಲಿ ನಡೆಯುತ್ತಿರುವ ಅಂಗನವಾಡಿ ಕಾಮಗಾರಿ 2015-16ನೇ ಸಾಲಿನಲ್ಲಿ ಆರಂಭವಾಗಿದೆ. ಇಲ್ಲಿವರೆಗೂ ಕೇವಲ ಅರ್ಧ ಕಾಮಗಾರಿ ಮಾತ್ರ ಮಾಡಲಾಗಿದೆ. ಅಂಗನವಾಡಿ
ಕಟ್ಟಡವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಹೀಗಾಗಿ ವರ್ಷ ಗತಿಸಿದರೂ ಕಾಮಗಾರಿ ಮುಗಿಯದೆ ಕುಂಟುತ್ತಾ ಸಾಗಿದೆ.
ಪಾಳು ಬಿದ್ದ ಹಳೆ ಕಟ್ಟಡ: ಇನ್ನೂ ಗ್ರಾಪಂ ಕಚೇರಿಗೆ ಹೊಂದಿಕೊಂಡಿರುವ ಹಳೆ ಅಂಗನವಾಡಿ ಕಟ್ಟಡ ಪಾಳು ಬಿದ್ದಿದೆ. ಸುಮಾರು ವರ್ಷಗಳಿಂದ ಬಳಕೆಗೆ ಬಾರದಂತಾಗಿದೆ. ಹಳೆ ಕಟ್ಟಡದಲ್ಲಿ ಗ್ರಾಮಸ್ಥರು ಶೌಚಕ್ಕೆ ಹೋಗುತ್ತಿದ್ದಾರೆ.
ಒಟ್ಟಿನಲ್ಲಿ ಹಳೆ ಅಂಗನವಾಡಿ ಕಟ್ಟಡವೀಗ ಶೌಚಾಲಯವಾಗಿ ಮಾರ್ಪಾಟಾಗಿದ್ದು, ಗ್ರಾಪಂ ಹೊರಗಡೆ ಅಂಗನವಾಡಿ ನಡೆಸಲಾಗುತ್ತಿದೆ. ಗ್ರಾಪಂ ಸಭೆ ಸಮಾರಂಭಗಳಿದ್ದರೆ ಅಂಗನವಾಡಿ ಮಕ್ಕಳು ಮನೆಗೆ ಹೋಗುವ ಪರಿಸ್ಥಿತಿ ಇದೆ. ಇದು 2-3 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ಮಕ್ಕಳಿಗೆ ಸಮಸ್ಯೆ: ಇನ್ನೂ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅಲ್ಲದೆ ಕಟ್ಟಡಕ್ಕೆ ನೀರು ಸರಿಯಾಗಿ ಬಳಸುತ್ತಿಲ್ಲ. ಸರಿಯಾಗಿ ನೀರು ಚುಮುಕಿಸದೆ ಇರುವುದರಿಂದ ಕ್ಯೂರಿಂಗ್ ಸರಿಯಾಗಿ ಆಗಿಲ್ಲ.
ಹೀಗಾಗಿ ಸಿಮೆಂಟ್ ಮುಟ್ಟಿದರೆ ಉದುರಿ ಬಿಳುತ್ತಿದೆ. ಇಟ್ಟಿಗೆ ಹಿಡಿದರೆ ಗೋಡೆಯಿಂದ ಹೊರಬರುತ್ತಿವೆ. ಕಾಮಗಾರಿ
ಆಮೆಗತಿಯಲ್ಲಿ ಮತ್ತು ಕಳಪೆಯಾಗಿ ನಡೆಯುತ್ತಿರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಒಂದು ಕಡೆ ಹಳೆ ಅಂಗನವಾಡಿ ಕಟ್ಟಡ ಶೌಚಾಲಯವಾಗಿ ಬದಲಾಗಿದ್ದರೆ, ಹೊಸ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಹಳೆ ಕಟ್ಟಡ ಕಾಮಗಾರಿ ಒಂದು ಕಡೆ ಪಾಳು ಬಿದ್ದಿದ್ದರೆ, ಇನ್ನೊಂದು ಕಡೆ ಆಮೆಗತಿಯಲ್ಲಿ ಸಾಗಿರುವ ಹೊಸ ಅಂಗನವಾಡಿ ಕಟ್ಟಡವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಲಕ್ಷ್ಯವಹಿಸಿ ನೋಡುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಅಂಗನವಾಡಿ ಮಕ್ಕಳ ಭವಿಷ್ಯ ಹಾಳಗುತ್ತಿರುವುದು ಮಾತ್ರ ಸತ್ಯ
ಸಂಗತಿ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.