ಯಡಿಯೂರಪ್ಪ ಮೇಲಿನ ಕಾಳಜಿ ಮಗನಿಗೆ ತೋರಲಿ: ಎಂ.ಬಿ. ಪಾಟೀಲ್ ವ್ಯಂಗ್ಯ
ಬಿಜೆಪಿ ಐಸಿಯುನಲ್ಲಿರುವುದರಿಂದ ಯಡಿಯೂರಪ್ಪ ಅವರಿಗೆ ಸ್ಥಾನ
Team Udayavani, Aug 19, 2022, 12:11 PM IST
ಕಲಬುರಗಿ: ವಯಸ್ಸಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಿಜೆಪಿಗೆ ನಿಜವಾಗಿ ಕಾಳಜಿಯಿದ್ದರೆ ಅವರ ಮಗನಿಗೆ ಏನಾದರೂ ಸ್ಥಾನ ಕಲ್ಪಿಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಐಸಿಯುದಲ್ಲಿರುವುದರಿಂದ ಯಡಿಯೂರಪ್ಪ ಅವರಿಗೆ ಕೇಂದ್ರೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಒಂದು ವೇಳೆ ಅಷ್ಟೊಂದು ಪ್ರೀತಿ, ವಿಶ್ವಾವಿದ್ದರೆ ಮುಂದಿನ ಸಿಎಂ ಎಂಬುದಾಗಿ ಘೋಷಿಸಲಿ. ಒಂದು ವೇಳೆ ಕಾಳಜಿವಿದ್ದರೆ ಅವರ ಮಗ ವಿಜಯೇಂದ್ರಗೆ ಯಾವುದಾದರೂ ಮಹತ್ವದ ಸ್ಥಾನ ಕಲ್ಪಿಸಲಿ ಎಂದು ಸವಾಲು ಹಾಕಿದರಲ್ಲದೇ ಈ ಕುರಿತು ಜನರು ಇದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಎಂದರು.
ಸಂಪುಟದ ಮೇಲೆ ಹಿಡಿತ ಇಲ್ಲದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಎತ್ತ ನಡಿಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಪುಟದ ಸದಸ್ಯರ ಮೇಲೆ ಯಾವುದೇ ಹಿಡಿತ ಇಲ್ಲ. ಇದಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಬೊಮ್ಮಾಯಿ ಸರ್ಕಾರ ಆಡಳಿತ ನಡೆಯುತ್ತಿಲ್ಲ.ಸುಮ್ಮನೇ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿರುವುದೇ ಸಾಕ್ಷಿಯಾಗಿದೆ ಎಂದು ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.
ಸಚಿವರು ರಾಜಾರೋಷವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಆದರೆ ಒಬ್ಬರ ಮೇಲೂ ಐಟಿ ಇಲ್ಲವೇ ಸಿಬಿಐ ದಾಳಿ ಏಕೆ ನಡೆಯುತ್ತಿಲ್ಲ. ಒಂದೆಡೆ ಸರ್ಕಾರದಲ್ಲಿ ಸಚಿವರು ಲೂಟಿ ಗಿಳಿದರೆ ಜಿಎಸ್ ಟಿ ಬಡವರನ್ನು ಲೂಟಿ ಮಾಡುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದು,ಯಾವಾಗ ಚುನಾವಣೆ ಬರುವುದು ಎಂಬುದನ್ನು ಕಾದು ನೋಡುತ್ತಿದ್ದಾರೆ. ಹೀಗಾಗಿ 2023ರಲ್ಲಿ ಕಾಂಗ್ರೆಸ್ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಸರ್ವ ಸಮುದಾಯಗಳ ಹಿತ ಕಾಪಾಡಲಿದೆ ಎಂದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಶಾಸಕರಾದ ಡಾ.ಅಜಯಸಿಂಗ್, ಖನೀಜಾ ಫಾತೀಮಾ, ಮಾಜಿ ಶಾಸಕ ಬಿ.ಆರ್. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.