ಯೋಗ ಬದುಕೇ ಸಾರ್ಥಕ
Team Udayavani, Mar 22, 2017, 4:21 PM IST
ಜೇವರ್ಗಿ: ಯೋಗ ಸಾಧನೆಗಾಗಿ ದೊರೆತ ಜನ್ಮವೇ ಮನುಷ್ಯ ಜನ್ಮ. ಪ್ರತಿಯೊಬ್ಬರು ದೈನಂದಿನ ಬದುಕಿನಲ್ಲಿ ಯೋಗ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಭಗವತ್ಪಾದರು ನುಡಿದರು. ತಾಲೂಕಿನ ಶಖಾಪುರದ ತಪೋವನ ಮಠದಲ್ಲಿ ಸಿದ್ದರಾಮ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ, ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ದೇಹ ಮನಸ್ಸುಗಳನ್ನು ಸಂಯೋಜಿಸಿಕೊಂಡು ಮಾಡುವ ಎಲ್ಲ ಕಾರ್ಯಗಳು ಯೋಗವೆಂದು ಕರೆಯಲ್ಪಡುತ್ತವೆ. ಪತಂಜಲಿ ಮಹರ್ಷಿಗಳು ಪ್ರತಿಯೊಬ್ಬರಲ್ಲಿಯೂ ಅನುಶಾಸನ ಬೆಳೆಸುವುದಕ್ಕಾಗಿ ಯೋಗಶಾಸ್ತ್ರದ ರಚನೆ ಮಾಡಿದರು ಎಂದರು. ಅನುಶಾಸನ ಎಂದರೆ ಮನಸ್ಸು ನಿಷಿದ್ಧ ವ್ಯವಹಾರದತ್ತ ಹೋಗದಂತೆ ತಾನೇ ನಿಯಂತ್ರಿಸಿಕೊಳ್ಳುವುದು ಅನುಶಾಸನವು.
ಪಶುಗಳಿಗೆ ಯೋಗ್ಯ-ಅಯೋಗ್ಯಗಳ ವಿವೇಕ ಇಲ್ಲದಿರುವುದರಿಂದ ಅವುಗಳನ್ನು ಯಾರಾದರೂ ಬಡಿಗೆಯಿಂದ ನಿಯಂತ್ರಿಸಬೇಕಾಗುತ್ತದೆ. ಹಾಗೆ ತಪ್ಪಿತಸ್ಥ ಪ್ರಾಣಿಗಳನ್ನು ಮತ್ತು ಮನುಷ್ಯರಿಗೆ ವಿಧಿಸುವ ದಂಡಕ್ಕೆ ಪ್ರಶಂಸನ ಎನ್ನುತ್ತಾರೆ. ಮನುಷ್ಯನು ವಿವೇಕ ಜೀವಿಯಾಗಿರುವುದರಿಂದ ಪ್ರಶಂಸನಕ್ಕೆ ಒಳಗಾಗದೇ ಅನುಶಾಸನ ಪ್ರಿಯನಾಗಿರಬೇಕು ಎಂದು ನುಡಿದರು.
ಅನುಶಾಸತನಾಗಬೇಕಾದರೆ ಯೋಗಾಭ್ಯಾಸಕ್ಕೆ ಶರಣಾಗಬೇಕು. ಯೋಗದಲ್ಲಿ ಹಠಯೋಗ, ಮಂತ್ರಯೋಗ, ಲಯಯೋಗ, ರಾಜಯೋಗ ಮತ್ತು ಶಿವಯೋಗವೆಂದು ಅನೇಕ ಪ್ರಕಾರ. ಈ ಎಲ್ಲ ಯೋಗಗಳಲ್ಲಿ ಶಿವಯೋಗವು ಶ್ರೇಷ್ಠವಾದದ್ದು ಮತ್ತು ಸುಲಭವಾದದ್ದು.
ಕರದಲ್ಲಿ ಇಷ್ಟಲಿಂಗವನ್ನು ಹಿಡಿದುಕೊಂಡು ಬಾಯಲ್ಲಿ ಪಂಚಾಕ್ಷರ ಮಂತ್ರವನ್ನು ಜಪಿಸುತ್ತ ಹಸ್ತಪೀಠದಲ್ಲಿಯ ಇಷ್ಠಲಿಂಗದ ಆಕಾರದ ಜ್ಯೋರ್ತಿಲಿಂಗವನ್ನು ಹೃದಯದಲ್ಲಿ ಧ್ಯಾನಿಸುತ್ತಾ ತ್ರಿಕರಣಗಳನ್ನು ಯೋಗದಲ್ಲಿ ತೊಡಗಿಸುವುದೇ ಶಿವಯೋಗ ಎಂದರು. ವಿಶ್ವಾರಾಧ್ಯರು ಮತ್ತು ಬಸವಾಂಬೆಯವರು ಶಿವಯೋಗ ಮಾಡಿದ ಫಲವಾಗಿ ಇಲ್ಲಿ ತಪೋವನ ಮಠವು ಸ್ಥಾಪಿತಗೊಂಡಿದೆ.
ಕಾಶೀಜ್ಞಾನ ಪೀಠದ ಶಾಖಾ ಮಠವಾದ ಶಖಾಪುರ ಮಠ ಸಾವಿರಾರು ಮಕ್ಕಳಿಗೆ ಜ್ಞಾನದ ಜೊತೆಗೆ ಯೋಗವನ್ನು ತಿಳಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು ಕೃಷಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸೋಮನಾಥರೆಡ್ಡಿ ಪುರಮಾ ಯೋಗ ಪ್ರದರ್ಶನ ನೀಡಿದರು. ಶಖಾಪುರ ತಪೋವನಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಕಡಕೋಳದ ರುದ್ರಮನಿ ಶಿವಾಚಾರ್ಯರು, ಕಡಗಂಚಿಯ ವೀರಭದ್ರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಅಶೋಕ ಸಾಹು ಗೋಗಿ, ದಯಾನಂದ ದೇವರಮನಿ, ಸೋಮಶೇಖರ ಪಾಟೀಲ ಗುಡೂರ, ಬಸವರಾಜ ಮದರಿ, ಚಂದ್ರಕಾಂತ ಇಜೇರಿ, ಉಮಾಕಂತ ಗೋಲಗೇರಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.