ಸರಸ್ವತಿ ಕಲ್ಯಾಣಿ ಸ್ವತ್ಛತೆಗೆ ಮುಂದಾದ ಯುವಕರು
Team Udayavani, Feb 12, 2018, 10:15 AM IST
ಕಾಳಗಿ: ಇಲ್ಲಿನ ಸರಸ್ವತಿ ದೇವಸ್ಥಾನದ ಆವರಣದಲ್ಲಿರುವ ಪುರಾತನ ಕಲ್ಯಾಣಿ ಸ್ವತ್ಛತಾ ಕಾರ್ಯಕ್ಕೆ ಸಮಾನ ಮನಸ್ಕ ಯುವಕರ ತಂಡ ರವಿವಾರ ಚಾಲನೆ ನೀಡಿತು. ಕರ್ನಾಟಕ ರಾಜ್ಯದಲ್ಲೆ ಎರಡನೇಯದ್ದು ಎಂಬ ಖ್ಯಾತಿ ಪಡೆದ ಪುರಾತನ ಸರಸ್ವತಿ ದೇವಸ್ಥಾನದ ಆವರಣದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಬೃಹದಾಕಾರದ ಕಲ್ಯಾಣಿಯಿದೆ. ಆದರೆ ಸ್ಥಳೀಯರ ನಿರ್ಲಕ್ಷ್ಯದಿಂದಾಗಿ ಕಲ್ಯಾಣಿಯಲ್ಲಿ ಕಲ್ಲು, ಕಸ ತುಂಬಿಕೊಂಡು ಸಂಪೂರ್ಣ ಹಾಳು ಬಿದ್ದು ನೀರು ಬತ್ತಿ ಹೋಗಿದೆ. ಆದರೆ ಈಗ ದೇವಸ್ಥಾನ ಹಾಗೂ ಕಲ್ಯಾಣಿ ದೆಸೆ ಬದಲಾಯಿಸಲು ಯುವಕರ ತಂಡ ಮುಂದಾಗಿದೆ.
ಕಲಬುರಗಿ, ಯಾದಗಿರಿ, ಬೀದರ ಮೊದಲಾದ ಕಡೆಗಳಿಂದ ಕಾಳಗಿಗೆ ಬಂದಿಳಿದಿರುವ ಹತ್ತಾರು ಜನ ಉತ್ಸಾಹಿ ಯುವಕರ ತಂಡ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರತಿ ರವಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಶ್ರಮದಾನ ಮಾಡುವ ಮೂಲಕ ಕಲ್ಯಾಣಿ ಹಾಗೂ ಸರಸ್ವತಿ ಗುಡಿ ಸ್ವತ್ಛಗೊಳಿಸುವ ಗುರಿ ಇಟ್ಟುಕೊಂಡಿದೆ.
ಈಗಾಗಲೇ ಕಾರ್ಯಾರಂಭ ಮಾಡಿರುವ ಯುವಕರು ಬಾವಿ ಸಂಪೂರ್ಣ ಸ್ವತ್ಛಗೊಳಿಸಿ ನೀರು ಬರುವವರೆಗೆ ಬಿಡುವುದಿಲ್ಲ. ಇದಕ್ಕೆ ಎಷ್ಟೇ ರವಿವಾರಗಳು ಬೇಕಾದರೂ ಸರಿ ನಾವು ಶ್ರಮದಾನ ಮಾಡಲು ಸಿದ್ಧರಿದ್ದೇವೆ ಎನ್ನುವ ಯುವಕರು, ಬಾವಿ ನಂತರ ದೇವಸ್ಥಾನವನ್ನೂ ಸ್ವತ್ಛ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳೀಯರಾದ ಹನುಮಂತಪ್ಪ ಕಾಂತಿ, ರವಿದಾಸ ಪತಂಗೆ, ಮುನೀರ್‌ಬೇಗ್ ಬಿಜಾಪುರ, ಬಾಬು ನಾಟೀಕಾರ, ನಾಮದೇವ ಸೇಗಾಂವಕರ್, ಶ್ರೀಮಂತ ನಾಶಿ, ರಾಜಕುಮಾರ ಪಂಚಾಳ, ಬಸವರಾಜ ಸಿಂಗಶೆಟ್ಟಿ, ಬಸವರಾಜ ಡೋಣಗಾಂವ, ಪ್ರದೀಪ ಮಾಳಾ, ವಿನಾಯಕ ಗುರುಮಠಕಲ್ ಮೊದಲಾದವರು ಸ್ವತ್ಛತಾ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.