ಕಲಬುರಗಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಹಾಡಹಗಲೇ ಯುವಕನ ಬರ್ಬರ ಹತ್ಯೆ
Team Udayavani, Aug 20, 2020, 9:44 PM IST
ಕೊಲೆಯಾದ ಯುವಕ ವೀರೇಶ ಶರಣಬಸಪ್ಪ ಕಡಗಂಚಿ.
ಕಲಬುರಗಿ: ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮರೆದಿದ್ದಾರೆ.
ಗುರುವಾರ ಹಾಡಹಗಲೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವೀರೇಶ ಶರಣಬಸಪ್ಪ ಕಡಗಂಚಿ (20) ಎಂಬಾತನೇ ಕೊಲೆಯಾದ ಯುವಕ. ನಗರದ ಹೃದಯ ಭಾಗವಾದ ಪಬ್ಲಿಕ್ ಗಾಡರ್ನ್ ನಲ್ಲಿ ಈ ಕೊಲೆ ಮಾಡಲಾಗಿದೆ.
ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಭೀಕರ ಕೊಲೆ ನಗರದ ಜನತೆಯನ್ನು ಭಯಭೀತರನ್ನಾಗಿಸಿದೆ.
ಗಾಡರ್ನ್ ಒಳ ರಸ್ತೆಯಲ್ಲಿ ರಕ್ತ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವೀರೇಶನನ್ನು108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಇಲ್ಲಿನ ಆಳಂದ ರಸ್ತೆಯ ರಾಣೋಸಫೀರ್ ದರ್ಗಾ ಪ್ರದೇಶದ ನಿವಾಸಿಯಾಗಿದ್ದ ಮೃತ ವೀರೇಶ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಹಣದ ವಿಚಾರಗಾಗಿ ಖಾರದಪುಡಿ ಅಂಬು ಗ್ಯಾಂಗ್ ಈ ಕೊಲೆ ಮಾಡಿದೆ ಎಂದು ಹೇಳಲಾಗಿದೆ.
ಕೋಟನೂರ ಮಠದ ಸಮೀಪದ ನಿವಾಸಿಯಾದ ಅಂಬಾರಾಯ ಅಲಿಯಾಸ್ ಖಾರದಪುಡಿ ಅಂಬು, ಭವನ, ಲವ ನಂದಿಕೂರ, ಗಿರೀಶ, ಕಾಳು, ಬಸ್ಸು, ಅಭಿಲಾಷ್ ಎಂಬುವವರು ಸೇರಿಕೊಂಡು ವೀರೇಶನಿಗೆ ಚಾಕುವಿಂದ ಇರಿದಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಕೊಲೆಯಾದ ವೀರೇಶನ ಬಳಿ ಖಾರದಪುಡಿ ಅಂಬು ಹಣ ಕೇಳಿದ್ದ ಮಾತ್ರವಲ್ಲದೇ, ಇದೇ ಕಾರಣಕ್ಕೆ ಬುಧವಾರ ವೀರೇಶನ ಮನೆಗೂ ಹೋಗಿದ್ದಮಾತ್ರವಲ್ಲದೇ ಇವರಿಬ್ಬರೂ ಫೋನ್ ನಲ್ಲೂ ಪರಸ್ಪರ ಬೈದಾಡಿಕೊಂಡಿದ್ದರು.
ಗುರುವಾರ ವೀರೇಶಗಾಗಿ ಹುಡುಕಾಟ ನಡೆಸಿದಾಗ ಆತ ಗಾಡರ್ನ್ ನಲ್ಲಿ ಇರುವುದಾಗಿ ಗೊತ್ತಾಗಿತ್ತು. ಅಂತೆಯೇ ಎಲ್ಲರೂ ಅಲ್ಲಿಗೆ ಬಂದಾಗ ವಾಗ್ವಾದ ನಡೆದಿದೆ. ಇದೇ ವೇಳೆ ವೀರೇಶನ ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಲೇ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಡಿಸಿಪಿ ಡಿ.ಕಿಶೋರ್ ಬಾಬು, ಎಸಿಪಿ ವಿಜಯಕುಮಾರ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕೊಲೆಗೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.