75ನೇ ಬಸವ ಜ್ಯೋತಿ ಕಾರ್ಯಕ್ರಮ
ಯುವಕರು ದುಷ್ಚಟಗಳಿಂದ ದೂರವಿರಲಿ
Team Udayavani, Jun 6, 2019, 4:49 PM IST
ಕಮಲನಗರ: ಠಾಣಾಕುಶನೂರ ಗ್ರಾಮದ ಚನ್ನಮಲಪ್ಪ ಚಿಂಚೋಳೆ ಅವರ ಮನೆಯಲ್ಲಿ ನಡೆದ ಮಹಾಮನೆಯಲ್ಲಿ ಬಸವಜ್ಯೋತಿ ಕಾರ್ಯಕ್ರಮದಲ್ಲಿ ರಾಮಶೆಟ್ಟಿ ಪನ್ನಾಳೆ ಮಾತನಾಡಿದರು.
ಕಮಲನಗರ: ತಾಲೂಕಿನ ಠಾಣಾಕುಶನೂರ ಗ್ರಾಮದ ಚನ್ನಮಲಪ್ಪ ಚಿಂಚೋಳೆ ಅವರ ನಿವಾಸದಲ್ಲಿ 75ನೇ ಬಸವಜ್ಯೋತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ರಾಮಶೆಟ್ಟಿ ಪನ್ನಾಳೆ, ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಎಲ್ಲವೂ ಅಡಗಿದೆ. ವಚನ ಸಾಹಿತ್ಯ ನಮ್ಮ ಮಾನಸಿಕ ಸ್ಥೆ ೖರ್ಯ ಹೆಚ್ಚಿಸುವುದಲ್ಲದೇ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಜೀವನಕ್ಕೆ ಬೇಕಾದ ಎಲ್ಲ ಅಂಶಗಳು ವಚನ ಸಾಹಿತ್ಯದಲ್ಲಿ ಅಡಗಿವೆ. ಕಾರಣ ವಚನ ಸಾಹಿತ್ಯದ ಅಧ್ಯಯನ ನಮ್ಮೆಲ್ಲರಿಗೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ಧಲಿಂಗ ಮಹಾಸ್ವಾಮಿ, ಲಿಂಗಾಯತ ಧರ್ಮಿಯರು ಹಣೆ ಮೇಲೆ ಭಷ್ಮ, ಕೊರಳಲ್ಲಿ ಲಿಂಗ ಕಡ್ಡಾಯವಾಗಿ ಧರಿಸಬೇಕು. ಅದು ಲಿಂಗವಂತರ ಧರ್ಮ ಲಾಂಛನವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಲಿಂಗ ಧರಿಸಿ ಭಷ್ಮಧಾರಣೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾತೆ ಸತ್ಯಕ್ಕ ದೇವಿ ಮಾತನಾಡಿ, ನಮ್ಮ ಯುವಕರು ದುಶ್ಚಟಗಳಿಂದ ದೂರವಿದ್ದು, ಅಧ್ಯಾತ್ಮಿಕ ಚಿಂತನೆಯಲ್ಲಿ ಕಾಲ ಕಳೆಯುವಂತಾಗಬೇಕು. ಅದಕ್ಕೆ ಇಂತಹ ಬಸವ ಜ್ಯೋತಿ ವೇದಿಕೆಗಳು ಪೂರಕವಾಗಿವೆ ಎಂದು ಹೇಳಿದರು.
ಮಲ್ಲಪ್ಪಾ ಬುಕ್ಕಾ, ಗುಂಡಪ್ಪ ಏರನಾಳೆ, ಸಿದ್ರಾಮಪ್ಪ ಮೂಲೆಮನಿ, ಸತೀಶ ಜಿರಗೆ, ಬಾಲಾಜಿ ವಾಘಮಾರೆ, ಶಿವಲಿಂಗ ಪರಶೇಟ್ಟೆ, ಮಾರುತಿ ಕೋಳಿ, ರಾಜಕುಮಾರ ಹೋರಂಡೆ ಹಾಗೂ ಅನೇಕ ಬಸವ ಭಕ್ತರು ಪಾಲ್ಗೊಂಡಿದ್ದರು.
ಶಿವಶರಣಪ್ಪ ವಲ್ಲೇಪುರೆ ನಿರೂಪಿಸಿದರು. ರಾಜಕುಮಾರ ಬೇಣ್ಣೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Congress government ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ
Katapady: ಕಾರ್ಮಿಕ ಕುಸಿದು ಬಿದ್ದು ಸಾವು
Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.