ಆಹಾರ-ನೀರು ಅರಸಿ ಗುಳೆ ಬಂದ್ವು ಜಾನುವಾರುಗಳು
ಖಾಲಿ ಜಮೀನುಗಳಲ್ಲಿ ಟಿಕಾಣಿ
Team Udayavani, Jun 9, 2019, 11:09 AM IST
ಕಂಪ್ಲಿ: ದೇವಸಮುದ್ರ ಗ್ರಾಮ ಹತ್ತಿರದ ನೀರಿಲ್ಲದ ಕಾಲುವೆಯಲ್ಲಿ ಕಂಡು ಬಂದ ಜಾನುವಾರಗಳ ಹಿಂಡು.
•ಜಿ.ಚಂದ್ರಶೇಖರಗೌಡ
ಕಂಪ್ಲಿ: ಈ ಬಾರಿಯ ಭೀಕರ ಬರಗಾಲ ತಾಲೂಕಿಗೆ ತಟ್ಟಿದೆ. ಆದರೂ ನೀರಾವರಿ ಪ್ರದೇಶವೆಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಆಹಾರ, ನೀರು ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ.
ಬರಕ್ಕೆ ಮತ್ತೂಂದು ಹೆಸರಾದ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮಗಳ ಸಾವಿರಾರು ಜಾನುವಾರುಗಳು ಕಂಪ್ಲಿ ಭಾಗದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಕೆರೆಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಕಂಪ್ಲಿ ಭಾಗದಲ್ಲಿ ಈಗಾಗಲೇ ಹಿಂಗಾರು ಹಂಗಾಮಿನ ಭತ್ತದ ಕಟಾವು ಬಹುತೇಕ ಮುಕ್ತಾಯಗೊಂಡಿದ್ದು, ಈ ಭತ್ತದ ಗದ್ದೆಯಲ್ಲಿ ಕಟಾವಿನ ನಂತರ ಉಳಿದ ಭತ್ತದ ಹುಲ್ಲು ಹಾಗೂ ಅಲ್ಲಲ್ಲಿ ಕಂಡು ಬರುವ ಹಸಿರು ಹುಲ್ಲನ್ನು ಮೇಯಲು ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ಜಾನುವಾರುಗಳು ಮಾಲೀಕರೊಂದಿಗೆ ಈ ಭಾಗಕ್ಕೆ ಬಂದಿವೆ.
ಸುಮಾರು 2ರಿಂದ 3 ತಿಂಗಳು ಕಂಪ್ಲಿ ಭಾಗದಲ್ಲಿಯೇ ಜಾನುವಾರುಗಳನ್ನು ಬೀಡು ಬಿಡುವ ಮಾಲೀಕರು ಹಗಲೆಲ್ಲಾ ಇಲ್ಲಿನ ವಿವಿಧ ಜಮೀನುಗಳಲ್ಲಿ ಜಾನುವಾರುಗಳನ್ನು ಮೇಯಿಸುವ ಅವರು ರಾತ್ರಿಯಾಗುತ್ತಲೇ ಗ್ರಾಮದ ಸಮೀಪದಲ್ಲಿಯೇ ಬೀಡು ಬಿಟ್ಟು ಹಸುಗಳ ಹಾಲನ್ನು ಕರೆದು ಸಮೀಪದಲ್ಲಿರುವ ಗ್ರಾಮದಲ್ಲಿ ಅವಶ್ಯವಿರುವವರಿಗೆ ಮಾರಿ ಅದರಿಂದ ಬರುವ ಹಣದಲ್ಲಿಯೇ ತಮ್ಮ ದೈನಂದಿನ ಜೀವನ ಸಾಗಿಸುತ್ತಾ ಕಾಲ ಕಳೆಯುತ್ತಾರೆ.
ಕೊಪ್ಪಳದಲ್ಲಿ ಮಳೆಗಾಲದಲ್ಲಿ ಮಾತ್ರ ಉತ್ತಮ ಮಳೆಯಾದರೆ ಜಾನುವಾರುಗಳಿಗೆ ಹುಲ್ಲು ಹಾಗೂ ನೀರು ಸಿಗಲಿದ್ದು, ಬೇಸಿಗೆ ಕಾಲದಲ್ಲಿ ಮೇವಿನ ಜತೆಗೆ ನೀರಿನ ಅಭಾವವು ಕಾಡಲಿದ್ದು, ಕಂಪ್ಲಿ ಭಾಗದಲ್ಲಿ ಹಸಿರು ಹುಲ್ಲು ಹಾಗೂ ನೀರು ಸಮೃದ್ಧವಾಗಿರುವುದರಿಂದ ಬೇಸಿಗೆ ಕಾಲದ ಸುಮಾರು ಮೂರು ತಿಂಗಳು ಕಾಲ ಈ ಭಾಗಕ್ಕೆ ಬರುತ್ತೇವೆ. ಮಳೆಗಾಲ ಶುರುವಾದರೆ ಪುನಃ ಗ್ರಾಮಗಳಿಗೆ ಹಿಂತಿರುಗುತ್ತೇವೆ ಎನ್ನುವ ಕೊಪ್ಪಳ ಜಿಲ್ಲೆ ಬೂದಗುಂಪ ಭಾಗದ ಅನೇಕ ಹಳ್ಳಿಗಳಿಂದ ಬಂದಿರುವ ಯಮನಪ್ಪ, ಯಂಕಪ್ಪ ಹಾಗೂ ಪಂಪಣ್ಣ ಹಾಗೂ ಇತರರು ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಈ ಭಾಗಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತೇವೆ.
ಈ ಭಾಗದ ರೈತರು ನಿಜಕ್ಕೂ ಯಾವುದೇ ತೊಂದರೆ ನೀಡುತ್ತಿಲ್ಲ. ಉತ್ತಮ ಸಹಕಾರ ನೀಡುತ್ತಿದ್ದಾರೆ. ಯಾಕೆಂದರೆ ಈ ಭಾಗದ ರೈತರ ಜಮೀನುಗಳಲ್ಲಿ ಬೀಡು ಬಿಡುವ ಜಾನುವಾರುಗಳಿಂದ ಸಗಣಿ, ಗಂಜಲ ಬೀಳುವುದರಿಂದ ಜಮೀನುಗಳಿಗೂ ಗೊಬ್ಬರ ಸಿಗುತ್ತದೆಯಾದ್ದರಿಂದ ಇಲ್ಲಿ ನಮಗೆ ಯಾವ ತೊಂದರೆಯೂ ಇಲ್ಲ ಜತೆಗೆ ಜಾನುವಾರುಗಳನ್ನು ಜಮೀನುಗಳಲ್ಲಿ ಬೀಡು ಬಿಡುವುದರಿಂದ ಜಮೀನಿನ ಮಾಲೀಕರು ಅಲ್ಪ ಸ್ವಲ್ಪ ಹಣ ನೀಡುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವರ್ಷ ಕಂಪ್ಲಿ ಭಾಗದಲ್ಲಿಯೂ ಸಹಿತ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಈ ಭಾಗದಲ್ಲಿ ಇದೀಗ ನೀರು ಮತ್ತು ಮೇವಿನ ಕೊರತೆಯಾಗಿರುವುದರಿಂದ ನಾವು ಯಾವ ಕಡೆ ಹೋಗಬೇಕೆನ್ನುವುದು ತಿಳಿಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜಾನುವಾರುಗಳು ಆಹಾರ ಹಾಗೂ ನೀರನ್ನು ಅರಸಿ ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ. ದುರಾದೃಷ್ಟವಶಾತ್ ಈ ವರ್ಷ ಕಂಪ್ಲಿ ಭಾಗದಲ್ಲಿ ಇದುವರೆಗೂ ಒಂದು ಮಳೆಯೂ ಆಗಲ್ಲ. ಮಳೆ ಆರಂಭವಾಗುತ್ತಿದ್ದಂತೆಯೇ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಕೂಲಿ ಕೆಲಸವಿಲ್ಲವೆಂದು ವಿವಿಧ ಗ್ರಾಮಗಳ ಜನತೆ ಬೇರೆ ಊರುಗಳಿಗೆ ಕೂಲಿ ಕೆಲಸಕ್ಕಾಗಿ ಗುಳೆ ಹೋಗುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಈ ಭಾಗಕ್ಕೆ ಗುಳೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.