ಪೂಜಾ ಮಹೋತ್ಸವ: ಮೈನವಿರೇಳಿಸಿದ ಶಸ್ತ್ರಧಾರಣೆ
Team Udayavani, May 1, 2019, 5:46 PM IST
ಕಂಪ್ಲಿ: ಪಟ್ಟಣದ ಕೋಟೆ ಪ್ರದೇಶದ ತುಂಗಭದ್ರಾ ನದಿ ತೀರದಲ್ಲಿ ಕಾಳಮ್ಮದೇವಿ ಪೂಜಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಮಹೋತ್ಸವದಲ್ಲಿ ಮೈನವಿರೇಳಿಸುವ ಶಸ್ತ್ರಧಾರಣೆ ಸಾರ್ವಜನಿಕರನ್ನು ಆಶ್ಚರ್ಯಗೊಳಿಸಿದರೆ, ಸುಡುವ ಬಿಸಿಲಿನಲ್ಲಿ ಮೀನುಗಾರರ ಭಕ್ತಿಯ ಪರಾಕಾಷ್ಠೆ ಎಲ್ಲೆ ಮೀರಿತ್ತು. ಇದೇ ಸಂದರ್ಭದಲ್ಲಿ ಮೀನುಗಾರ ಕುಟುಂಬದ ಮಹಿಳೆಯರು ಬೆಲ್ಲದಿಂದ ತಯಾರಿಸಿದ ತ್ರಿಕೋನ ಆಕೃತಿಯನ್ನು ರಚಿಸಿಕೊಂಡು ತಟ್ಟೆಯಲ್ಲಿಟ್ಟುಕೊಂಡು ದೇವಿಗೆ ನೈವೇದ್ಯ ಸಮರ್ಪಿಸಿದರು.
ಸ್ಥಳೀಯ ಕೋಟೆ ಪ್ರದೇಶದ ಮೀನುಗಾರ ಕಾಲೋನಿಯಲ್ಲಿ ನಡೆದ ಕಾಳಮ್ಮದೇವಿ ಪೂಜಾ ಮಹೋತ್ಸವದಲ್ಲಿ ಹರಕೆ ಹೊತ್ತ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು, ಅದಕ್ಕೆ ನೈಲಾನ್ ಹಗ್ಗ ಕಟ್ಟಿ ಕಾರು, ಸಣ್ಣ ರಥ ಸೇರಿದಂತೆ ಹಲವು ವಾಹನಗಳನ್ನು ಎಳೆದು ನೆರೆದಿದ್ದವರ ಗಮನ ಸೆಳೆದರು.
ಜಾತ್ರಾ ಮಹೋತ್ಸವದಲ್ಲಿ 5 ಕಾರುಗಳ ಶಸ್ತ್ರ, ಮೂರು ಆಟೋಗಳ ಶಸ್ತ್ರ, 2 ಬೃಹತ್ ಕಲ್ಲಿನ ಗುಂಡುಗಳ ಶಸ್ತ್ರ ಹಾಗೂ ದೇವಿಯ ರಥದ ಶಸ್ತ್ರವನ್ನು ಹಾಕಿಕೊಂಡು ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು. ನಂತರ ಸಂಜೆಯವರೆಗೂ ಕೋಟೆಯಲ್ಲಿ ಭಕ್ತ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೋಟೆ ಪ್ರದೇಶ, ಕಂಪ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಕಂಪ್ಲಿ: ಕೋಟೆ ಮೀನುಗಾರ ಕಾಲೋನಿಯಲ್ಲಿ ಕಾಳಮ್ಮದೇವಿಗೆ ಭಕ್ತರು ಬೆನ್ನಿಗೆ, ಕಾಲಿನ ಮೀನಖಂಡಕ್ಕೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಬೊಂಬಿನ ಹಂದರಕ್ಕೆ ಇಳಿ ಬಿದ್ದು ಹರಕೆ ತೀರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.