ಮಹತ್ವದ ಪಾತ್ರ ನಿರ್ವಹಿಸಲಿದೆ ನೌಕಾನೆಲೆ
2022ರ ವೇಳೆಗೆ ಕದಂಬ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಪೂರ್ಣ: ಮಹೇಶ ಸಿಂಗ್
Team Udayavani, Dec 5, 2019, 6:30 PM IST
ಕಾರವಾರ: ಭಾರತದ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾರವಾರದ ನೌಕಾನೆಲೆ ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಕರ್ನಾಟಕ ನೌಕಾದಳದ ಫ್ಲ್ಯಾಗ್ಆ ಫೀಸರ್ ಮಹೇಶ ಸಿಂಗ್ ಹೇಳಿದರು.
ಅವರು ಇಲ್ಲಿನ ಕದಂಬ ನೌಕಾನೆಲೆಯೊಳಗೆ ಏರ್ಪಡಿಸಿದ್ದ ನೇವಿ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು. 2022ರ ವೇಳೆಗೆ ಕದಂಬ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಮುಗಿಯಲಿದೆ. ಕದಂಬ ನೌಕಾನೆಲೆ ಭಾರತೀಯ ನೌಕಾಪಡೆಗೆ ಶಕ್ತಿ ತುಂಬಲಿದೆ. ನೌಕಾನೆಲೆ ನಿರ್ಮಾಣ ಪೂರ್ಣವಾದಾಗ ಸಮುದ್ರಯಾನ, ವ್ಯಾಪಾರ ವಹಿವಾಟಿಗೆ ಮತ್ತಷ್ಟು ಭದ್ರತೆ ಮತ್ತು ಸುರಕ್ಷತೆ ದೊರಕಲಿದೆ. ದೇಶದ ಕರಾವಳಿ ಸುರಕ್ಷತೆಗೆ ಹೆಚ್ಚಿನ ಮಹತ್ವ ಬಂದಿದ್ದು ಇದನ್ನು ಭಾರತೀಯ ನೌಕಾಪಡೆ ನಿಭಾಯಿಸುತ್ತಾ ಬಂದಿದೆ ಎಂದರು.
1971ರ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ವಿಜಯ ಸಾಧಿಸಿದ ನೆನಪಿಗಾಗಿ ಈ ನೇವಿ ಡೇ ಆಚರಿಸುತ್ತಾ ಬರಲಾಗುತ್ತಿದ್ದು, ಭಾರತೀಯ ನೌಕಾಪಡೆಗೆ ಇದು ಹೆಮ್ಮೆಯ ದಿನ ಎಂದೂ ಹೇಳಿದರು. ಭಾರತದ ನೌಕಾಪಡೆ ಏಷ್ಯಾದಲ್ಲಿ ಮಹತ್ವದ ನೆಲೆಯಾಗಿದ್ದು, ಅದರಲ್ಲಿ ಐಎನ್ ಎಸ್ ಕದಂಬಕ್ಕೆ ಮಹತ್ವ ಪಾತ್ರವಿದೆ. ನೌಕಾನೆಲೆ ಎರಡನೇ ಹಂತದ ಕಾಮಗಾರಿ ವೇಗವಾಗಿ ನಡೆದಿದೆ. ಎರಡನೇ ಹಂತದ ಕಾಮಗಾರಿ ಮುಗಿದಾಗ ನೌಕಾನೆಲೆಯಲ್ಲಿ ಅನೇಕ ಯುದ್ಧ ನೌಕೆಗಳು ನೆಲೆ ನಿಲ್ಲಲಿವೆ.
ದೇಶದ ಸಾಗರ ಮಾಲಾ ಯೋಜನೆಗೆ ನೌಕಾಪಡೆ ಸುರಕ್ಷತೆ ಒದಗಿಸಲಿದೆ. ಅಲ್ಲದೇ ಏರ್‌ಬೇಸ್ ನಿರ್ಮಾಣ ಸಹ ಪೂರ್ಣಗೊಂಡಾಗ ಐಎನ್‌ಎಸ್ ಕದಂಬ ಜೊತೆಗೆ ಇಡೀ ಕಾರವಾರ ಹಾಗೂ ಕರಾವಳಿ ಅತ್ಯಂತ ಸುರಕ್ಷಿತ ಪ್ರದೇಶವಾಗಲಿದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಅದ್ದೂರಿ ನೇವಿ ಬ್ಯಾಂಡ್ ಪ್ರದರ್ಶನ: ಸೀಬರ್ಡ್ ನೌಕಾನೆಲೆಯಲ್ಲಿ ನೌಕಾ ದಿನಾಚರಣೆ ಅಂಗವಾಗಿ ನೇವಿ ಬ್ಯಾಂಡ್ ಪ್ರದರ್ಶನ ಹಾಗೂ ನೌಕಾ ಧ್ವಜ ವಂದನೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಸೂರ್ಯಾಸ್ತದ ಸಮಯದಲ್ಲಿ ರಾಷ್ಟ್ರ
ಧ್ವಜ ಹಾಗೂ ನೌಕಾ ಧ್ವಜವನ್ನು ಅವರೋಹಣ ಮಾಡಿದರು. ಕಡಲಿನಲ್ಲಿ ನಿಂತಿದ್ದ ಐಎನ್ ಎಸ್ ಮಕರ, ಐಎನ್‌ಎಸ್ ತಿಲ್ಲಾಂಚಾಂಗ್ ಹಾಗೂ ಐಎನ್‌ಎಸ್ ಕೊಸ್ವಾರಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಫ್ಲಾಗ್ ಆಫೀಸರ್ ಪತ್ನಿ ಮನಿತಾ ಸಿಂಗ್, ನೌಕಾ ಅಧಿಕಾರಿಗಳಾದ ಪಿ.ಗೋಪಾಲಕೃಷ್ಣ, ಶ್ರೀಧರ ರಾಮಸ್ವಾಮಿ, ಇಫೆ¤ಕಾರ್ ಅಲಮ್, ಕಿರಣ ರೆಡ್ಡಿ, ಎಸ್.ಕುಮಾರ್, ಸಂಗೀತಾ ಕುಮಾರ್, ಸಂಗ್ರಾಮ್ ಕೆ., ಸುಜಾತಾ, ದೇವಕಿ ಮದ್ದುಲಾ, ಶ್ರೀನಿವಾಸ ಮದ್ದುಲಾ, ಆರ್.ಕೆ. ದಹಿಯಾ, ಜಿಲ್ಲಾ ನ್ಯಾಯಾಧೀಶೆ ವಿಪುಲಾ ಎಂ.ಬಿ. ಪೂಜಾರಿ, ಕೈಗಾ ಸ್ಥಳ ನಿರ್ದೇಶಕ ಸತ್ಯನಾರಾಯಣ, ಪ್ರಮುಖರಾದ ಎ.ಶಿಗ್ಗಾವಿ, ವೀಣಾ ಶಿಗ್ಗಾವಿ, ಶ್ರೇಯಾ ಸುರೇಂದ್ರ, ಆರ್. ರವಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.