ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶ ಸಲ್ಲದು
ನೆಲ-ಜಲ ಕಲುಷಿತಗೊಳಿಸಿದರೆ ಮುಂದಿನ ಪೀಳಿಗೆಯ ಬದುಕು ದುರ್ಬಲ: ದೊರೆ
Team Udayavani, Jun 12, 2019, 4:47 PM IST
ಕೆಂಭಾವಿ: ವಾಲ್ಮೀಕಿ ವೃತ್ತದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡಲಾಯಿತು.
ಕೆಂಭಾವಿ: ಪರಿಸರ ಜಾಗೃತಿಯಲ್ಲಿ ಯುವ ಶಕ್ತಿ ಜಾಗೃತರಾಗಿ ಮನುಕುಲ ಉಳಿಸಬೇಕು. ಪರಿಸರ ನಿರ್ಲಕ್ಷಿಸಿದರೆ ಮರಣ ಪ್ರಮಾಣ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಭು ದೊರೆ ಹೇಳಿದರು.
ಪಟ್ಟಣದ ಭೋಗೇಶ್ವರ ದೇವಸ್ಥಾನ ಸ್ಮಶಾನ ಭೂಮಿ ಮತ್ತು ವಾಲ್ಮೀಕಿ ವೃತ್ತದಲ್ಲಿ ಸ್ಪಂದನಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪುರಸಭೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಆಸೆ ಆಕಾಂಕ್ಷೆಗಳಿಗೆ ಪರಿಸರ ವಿನಾಶದತ್ತ ಸಾಗುತ್ತಿದೆ ಎಂದು ಹೇಳಿದರು.
ಸ್ಪಂದನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಸಿ. ಪಾಟೀಲ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ಮರಗಳನ್ನು ಕಡಿದು ಅರಣ್ಯ ನಾಶ ಮಾಡುತ್ತಿರುವುದು ಸರಿಯಲ್ಲ, ನೆಲ, ಜಲವನ್ನು ಕಲುಷಿತಗೊಳಿಸಿದರೆ ಮುಂದಿನ ಪೀಳಿಗೆಯ ಬದುಕು ದುರ್ಬಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಾದ ಬಾಬುಗೌಡ ಮಾಲಿ ಪಾಟೀಲ, ಮಹಿಪಾಲರಡ್ಡಿ ಡಿಗ್ಗಾವಿ, ವಿಕಾಸ ಸೊನ್ನದ, ನಿಂಗಣ್ಣ ಸೆಕ್ರೆಟರಿ, ಡಾ| ಶಿವಾನಂದ ಆಲಗೂರ, ಭೀಮನಗೌಡ ಕಾಚಾಪುರ, ರಾಜಶೇಖರ ಹಿರೇಮಠ, ರಾಜಶೇಖರ ಚಿಕಮಠ, ಎಎಸ್‌ಐ ರಾಜಶೇಖರ, ಅರಣ್ಯ ಅಧಿಕಾರಿ ಶರಣಪ್ಪ ಕುಂಬಾರ, ಬೀರಪ್ಪ ಪಿಸಿ, ಸುಭಾಸ ಮ್ಯಾಗೇರಿ, ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಡಿಗೇರ, ನಂದಪ್ಪ ಕವಾಲ್ದಾರ, ಹಳ್ಳೆಪ್ಪ ಕವಾಲ್ದಾರ, ಕುಮಾರ ಮೋಪಗಾರ, ಸೋಮನಾಥ ಕೋರಳ್ಳಿ, ಸತ್ಯರಾಜ, ಶರಣು ಹೊನ್ನಳ್ಳಿ, ಜಗದೀಶ ಸೊನ್ನದ, ಸಂಗಣ್ಣ ತುಂಬಗಿ, ಮಹೇಶ ಅಂಗಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.