41ನೇ ಯತಿ ಶ್ರೀ ಸತ್ಯಪ್ರಮೋದತೀರ್ಥರ ಆರಾಧನೆ


Team Udayavani, Oct 30, 2019, 12:18 PM IST

30-October-5

ಗುಂಡಭಟ್ಟ ಜೋಶಿ

ಕೆಂಭಾವಿ: ಸಮಗ್ರ ಭಾರತ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತ ಪಾಂಡಿತ್ಯ ಪ್ರದರ್ಶಿಸಿ, ಭಾರತದ ಉದ್ದಗಲಕ್ಕೂ ಸಂಚರಿಸಿ, ಅನೇಕ ಸಂಸ್ಕೃತ ಪಂಡಿತರನ್ನು ನಿರ್ಮಾಣ ಮಾಡಿ, ಕಷ್ಟ ಕಾಲದಲ್ಲಿ ಅವರಿಗೆ ಸಹಾಯ ಮಾಡಿದವರೇ ಉತ್ತರಾದಿ ಮಠದ ಪರಂಪರೆಯಲ್ಲಿ 41ನೇ ಯತಿಗಳಾಗಿ ಮೆರೆದ ಶ್ರೀ ಸತ್ಯಪ್ರಮೋದ ತೀರ್ಥರು.

ದ್ವೈತ ವೇದಾಂತ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಮುಮುಕ್ಷುಗಳಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸತತ 50 ವರ್ಷಗಳ ಕಾಲ ಮೂಲ ರಾಮರ ದೇವರ ಪೂಜೆ ಕೈಗೊಂಡು, ಅತೀ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ, ಧರ್ಮದ ಗಂಧವೇ ಗೊತ್ತಿಲ್ಲದ ಅನೇಕ ಜನರಿಗೆ ಧರ್ಮ, ಗುರುಗಳು, ದೇವರ ಬಗ್ಗೆ ತಿಳಿಸಿ, ಅವರಿಗೆ ಸನ್ಮಾರ್ಗದ ದಾರಿ ತೋರಿದರಲ್ಲದೇ ಸುಧಾ ಮಂಡನ, ವಿಜಯೀಂದ್ರ ವಿಜಯ ವೈಭವ, ಯುಕ್ತಿಮಲ್ಲಿಕಾ, ವಾಯುಸ್ತುತಿ ಮಂಡನ ಸೇರಿದಂತೆ ಅನೇಕ ಗ್ರಂಥಗಳನ್ನು ಬರೆದರು.

ಜನನ: ಧಾರವಾಡ ಜಿಲ್ಲೆ ಗುತ್ತಲ ಎನ್ನುವ ಗ್ರಾಮದಲ್ಲಿ ಸುಸಂಕೃತ ಮನೆತನದ ರಂಗಾಚಾರ್ಯ ಹಾಗೂ ಕಮಲಮ್ಮ ಎನ್ನುವ ದಂಪತಿಗಳ ಉದರದಲ್ಲಿ 1918ರಲ್ಲಿ ಜನಿಸಿದರು. ಗುರುರಾಜ ಎನ್ನುವ ನಾಮಾಂಕಿತರಾದ ಅವರು ಚಿಕ್ಕವರಿದ್ದಾಗಲೇ ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯ ಪಡೆದು, ತರ್ಕ ಶಾಸ್ತ್ರದಲ್ಲಿ ನಿಷ್ಣಾತರಾದರು. 1941ರಲ್ಲಿ ಮಂದಾಕಿನಿ ಎನ್ನುವ ಕನ್ಯೆಯನ್ನು ವಿವಾಹವಾದ ಇವರು ನಾಡಿನ ಉದ್ದಗಲಕ್ಕೂ ತಿರುಗಾಡಿ ತರ್ಕ ಶಾಸ್ತ್ರದ ಬಗ್ಗೆ ಅನೇಕ ಗ್ರಂಥಗಳ ಮೇಲೆ ಬೆಳಕು ಚೆಲ್ಲಿ, ಅವುಗಳ ಬಗ್ಗೆ ಸಾಮಾನ್ಯರಿಗೂ ಮನವರಿಕೆ ಮಾಡಿಕೊಟ್ಟರು. ಸರ್ವಜಿತು ಸಂವತ್ಸರ ಪುಷ್ಯ ಬಹುಳ ಅಷ್ಟಮಿ 2 ಫೆಬ್ರವರಿ 1948ರಂದು ಸತ್ಯಾಭಿಜ್ಞತೀರ್ಥರಿಂದ ಸನ್ಯಾಸ ಸ್ವೀಕರಿಸಿ ಸತ್ಯಪ್ರಮೋದತೀರ್ಥರಾಗಿ ಹಂಸನಾಮಕ ಪೀಠವನ್ನೇರಿದರು.

ಮಂತ್ರಾಕ್ಷತೆ ಮಹಿಮೆ: ಸತ್ಯಪ್ರಮೋದರ ಮಂತ್ರಾಕ್ಷತೆ ಮಹಿಮೆ ಕರ್ನಾಟಕ ಮಾತ್ರವಲ್ಲದೇ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಸಿದ್ಧಿಯಾಗಿದೆ. ಯತಿಗಳ ಮುಷ್ಟಿ ಮಂತ್ರಾಕ್ಷತೆ ಅನೇಕ ತರಹದ ರೋಗ, ಪಿಶಾಚಿ ಬಾಧೆ, ಬಂಜೆತನ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ಮಾಡಿದೆ. ಹೀಗೆ ದೇಶದ ಉದ್ದಗಲಕ್ಕೂ ಸಂಚಾರ ಮಾಡುತ್ತಾ 1996ರಲ್ಲಿ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಸರ್ವಾಜ್ಞಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಸತ್ಯಾತ್ಮತೀರ್ಥರೆಂದು ನಾಮಕರಣ ಮಾಡಿದರು.

ಬೃಂದಾವನ ಪ್ರವೇಶ: ಅನೇಕ ವರ್ಷಗಳ ಕಾಲ ಮೂಲರಾಮ ದಿಗ್ವಿಜಯರಾಮ
ವೇದವ್ಯಾಸರ ಸೇವೆ ಮಾಡುತ್ತಾ, ತಮಿಳುನಾಡಿನ ಪಿನಾಕಿನಿ ನದಿ ತೀರ ಮನಂಪುಂಡಿ (ತಿರುಕೊಯಿಲೂರು)ಯಲ್ಲಿ ಈಶ್ವರ ನಾಮ ಸಂವತ್ಸರ ಕಾರ್ತಿಕ ಶುದ್ಧ ತೃತೀಯ 3 ನವೆಂಬರ್‌ 1997ರಂದು ರಘೋತ್ತಮ ತೀರ್ಥರ ಬೃಂದಾವನ ಪಕ್ಕದಲ್ಲೇ ಇವರು ಶ್ರೀರಾಮನ ಪಾದ ಸೇರಿದರು.

ಆರಾಧನೆ: ಶ್ರೀ ಸತ್ಯಪ್ರಮೋದತಿರ್ಥರ ಆರಾಧನೆಯು ಅವರ ಮೂಲ ಬೃಂದಾವನ ಸ್ಥಳವಾದ ತಿರುಕೊಯಿಲೂರ ಕ್ಷೇತ್ರದಲ್ಲಿ ಶ್ರೀ ಸತ್ಯಾತ್ಮತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಅ. 29, 30 ಹಾಗೂ 31 ರಂದು ಬಹು ವಿಜೃಂಭಣೆಯಿಂದ ನಡೆಯಲಿದೆ.

ಅಲ್ಲದೇ ಅವರ ಮೃತ್ತಿಕಾ ಬೃಂದಾವನವಿರುವ ಅನೇಕ ಸ್ಥಳಗಳಲ್ಲಿ ಆರಾಧನೆ ನಡೆಯಲಿದ್ದು, ಅದರಂತೆ ಕೆಂಭಾವಿ ಯತಿಚತುಷ್ಠಯರ ಬೃಂದಾವನ ಸನ್ನಿಧಾನದಲ್ಲಿ ಶ್ರೀ ಸತ್ಯಪ್ರಮೋದ ತೀರ್ಥರ ಆರಾಧನೆ ಬಹು ವಿಜೃಂಭಣೆಯಿಂದ ನಡೆಯಲಿದ್ದು, ಮೂರು ದಿನ ಆರಾಧನೆ ಸಮಯದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ಭಜನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.