ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರ ಸ್ಮರಿಸಿ
•ಎಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆ•ಗಮನ ಸೆಳೆದ ಮಕ್ಕಳ ವೇಷಭೂಷಣ•ಆಕರ್ಷಕ ಪಥ ಸಂಚಲನ
Team Udayavani, Aug 16, 2019, 11:22 AM IST
ಕೆಂಭಾವಿ: ಪುರಸಭೆ ಆವರಣದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ದೇಶಭಕ್ತಿ ಗೀತೆ ನೃತ್ಯ ಪ್ರದರ್ಶಿಸಿದರು.
ಕೆಂಭಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರನ್ನು ಸದಾ ಸ್ಮರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಭು ದೊರಿ ಹೇಳಿದರು.
73ನೇ ಸ್ವಾತಂತ್ಯ್ರ ದಿನೋತ್ಸವದ ನಿಮಿತ್ತ ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ರಕ್ಷಣೆಯಲ್ಲಿ ತೊಡಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ದೇಶದ ಸೈನಿಕರಿಗೆ ನಾವು ದಿನನಿತ್ಯ ತಲೆಬಾಗಬೇಕು ಎಂದು ಹೇಳಿದರು.
ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಇದ್ದರು. ನಂತರ ನಡೆದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರದರ್ಶಿಸಿದ ದೇಶಭಕ್ತಿ ಸಾರುವ ಹಲವಾರು ನೃತ್ಯ, ನಾಟಕ, ಸ್ವಾತಂತ್ರ್ಯ ಹೋರಾಗಾರರನ್ನು ನೆನಪಿಸುವ ವಿವಿಧ ರೀತಿಯ ವೇಷಧಾರಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನೋಡುಗರನ್ನು ಮಂತ್ರಮುಗ್ಧಾರನ್ನಾಗಿಸಿತು.
ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಗೀತೆ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪಟ್ಟಣದ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ರಾಜಾಸಾಬ ಗ್ರಾಮ ಲೇಖಪಾಲಕ ಲಕ್ಷ್ಮಣ ಇದ್ದರು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಬಾಳನಗೌಡ ಧ್ವಜಾರೋಹಣ ನೆರವೇರಿಸಿದರು. ಪದವಿ ಪೂರ್ವ ಕಾಲೇಜಿನಲ್ಲಿ ಪ್ರಭಾರಿ ಪ್ರಾಚಾರ್ಯ ಲಕ್ಷ್ಮಣ ರಾಠೊಡ ಧ್ವಜಾರೋಹಣ ನೆರವೇರಿಸಿದರು.
ಜೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ಶ್ರೀಶೈಲ, ಬಾಲಕರ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕೆ. ಆರ್. ಪಾಟೀಲ, ಕನ್ಯಾ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಅನಿಲಕುಮಾರ ಧ್ವಜಾರೋಹಣ ನೆರವೇರಿಸಿದರು.
ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಧರೆಪ್ಪ ಧ್ವಜಾರೋಹಣ ಮಾಡಿದರು. ಬಂದೇನವಾಜ ನಾಲತವಾಡ, ಎಸ್‌ಡಿಎಂಸಿ ಅಧ್ಯಕ್ಷ ಮಡಿವಾಳಪ್ಪ ದೊಡಮನಿ ಸೇರಿದಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಅಂಬಣ್ಣ ತಳವಾರ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಭೀಮನಗೌಡ ಕಾಚಾಪುರ, ಪುರಸಭೆ ಸದಸ್ಯರಾದ ಕಮಲಾಬಾಯಿ, ರಾಘವೇಂದ್ರ ದೇಶಪಾಂಡೆ ಹಾಗೂ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ನಿವೃತ್ತ ಶಿಕ್ಷಕ ಶಿವಾನಂದ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಡಿ. ಸಿ. ಪಾಟೀಲ, ಮುಖ್ಯಶಿಕ್ಷಕ ಸುಜಾತಾ ಮೊಕಾಶಿ, ಶಂಕ್ರಪ್ಪ ದೇವೂರ, ಶ್ರೀನಿವಾಸರೆಡ್ಡಿ ಮಾಲಿಪಾಟೀಲ, ಮಂಜುನಾಥ ಕಕ್ಕೇರಿ, ರೇವಣಸಿದ್ದಯ್ಯ ಮಠ ಇದ್ದರು. ವಿದ್ಯಾಲಕ್ಷ್ಮೀ ಪಬ್ಲಿಕ್ ಶಾಲೆಯಲ್ಲಿ ರಾಮು ಧ್ವಜರೋಹಣ ಮಾಡಿದರು. ನಾಗಮಣಿ ಇದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಸನಗೌಡ ಹೊಸಮನಿ (ರಾಜು ಕಾಕಾ) ಧ್ವಜಾರೋಹಣ ಮಾಡಿದರು. ಆರೀಫ್ ಖಾಜಿ, ಸಾಯಬಣ್ನ ದೊಡಮನಿ, ಗಿರೀಶ ಅಂಗಡಿ, ರಾಜಶೇಖರ ಹಿರೇಮಠ, ಶರಣಪ್ಪ ಬಿದರಿ, ರವಿ ಬಿಂಗೇರಿ, ರಾಚಪ್ಪ, ದೇವಿಸಿಂಗ, ಪ್ರಭುಗೌಡ ಇದ್ದರು.
ಸಹರಾ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ಅಧ್ಯಕ್ಷ ರಫೀಕ್ ವಡಕೇರಿ, ವಾರ್ಡ್ ನಂ1ರ ಅಂಗನವಾಡಿ ಕೇಂದ್ರದಲ್ಲಿ ಪುರಸಭೆ ಸದಸ್ಯೆ ಮಾಸಮ್ಮ ಹಲಗಿ ಧ್ವಜಾರೋಹಣ ಮಾಡಿದರು. ಸುರೇಖಾ ಕುಲಕರ್ಣಿ, ಮಡಿವಾಳಪ್ಪ ದೊಡಮನಿ, ಮಲ್ಲು ವಡ್ಡರ, ಬಸಮ್ಮ ಮಾಳಳ್ಳಿಕರ್, ಶಕುಂತಲಾ, ವಿಜಯಲಕ್ಷ್ಮೀ, ಮರೆಮ್ಮ, ಭೀಮಬಾಯಿ, ವಾರ್ಡ್ ನಂ. 2ರ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಯ್ಯಣ್ಣ ಮಾಳಳ್ಳಿಕರ್ ಧ್ವಜಾರೋಹಣ ಮಾಡಿದರು. ಮುಖ್ಯಾಧಿಕಾರಿ ಪ್ರಭು ದೊರಿ, ಪಿಎಸ್‌ಐ ಬಾಳನಗೌಡ, ಬಸವಣ್ಣೆಪ್ಪ ಮಾಳಳ್ಳಿಕರ್, ಶಿವಪ್ಪ ಕಂಬಾರ, ಸುರೇಶ ಮಾಳಳ್ಳಿಕರ, ಸಿದ್ದಪ್ಪ, ಪರಶುರಾಮ, ಪ್ರಧಾನಿ ಜಮಖಂಡಿ, ಸಿದ್ದು, ರಾಯಪ್ಪ, ಸಣ್ಣ ತಿಪ್ಪಣ್ನ ಇದ್ದರು.
ಡಾ| ಅಂಬೇಡ್ಕರ್ ವೃತ್ತದಲ್ಲಿ (ನಂ2) ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬಸವರಾಜ ಬಸರಿಗಿಡ ಧ್ವಜಾರೋಹಣ ಮಾಡಿದರು. ಪ್ಯಾಂಥರ್‌ನ ಹೋಬಳಿ ಶಾಖೆ ಅಧ್ಯಕ್ಷ ಲಕ್ಷ್ಮಣ ಬಸರಿಗಿಡ, ಮರೆಪ್ಪ, ಬಾವಿಮನಿ, ಯಲ್ಲಪ್ಪ, ಜುಮ್ಮಪ್ಪ, ಬಸವರಾಜ ಇದ್ದರು. ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವನಾಥರೆಡ್ಡಿ ಅಬ್ಬೆತುಮಕೂರ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಪಾರ್ವತಿ ಬಾಪುಗೌಡ ಇದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಸುರೇಶ ಧ್ವಜಾರೋಹಣ ಮಾಡಿದರು.
ಹೆಗ್ಗನದೊಡ್ಡಿ ಗ್ರಾಪಂ ಕಚೇರಿಯಲ್ಲಿ ಕಸ್ತೂರೆಮ್ಮ ಚಂದ್ರಶೇಖರ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ನಿಂಗಮ್ಮ ರೇವಣಸಿದ್ದಪ್ಪ ಪೂಜಾರಿ, ಪಿಡಿಒ ಜಯಾಚಾರ್ಯ ಪುರೋಹಿತ ಸೇರಿದಂತೆ ಗ್ರಾಪಂ ಸದಸ್ಯರಿದ್ದರು. ಯಕ್ತಾಪುರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಬಸಮ್ಮ ಧ್ವಜಾರೋಹಣ ಮಾಡಿದರು. ಪಿಡಿಒ ಎಸ್. ಎಂ. ಪೂಜಾರ, ಸದಸ್ಯರು, ಮುಖಂಡರು ಹಾಗೂ ಸಿಬ್ಬಂದಿ ಇದ್ದರು. ಯಾಳಗಿ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಭೀಮಬಾಯಿ ಮಾಣಸುಣಗಿ ಧ್ವಜಾರೋಹಣ ಮಾಡಿದರು. ಪಿಡಿಒ ಗುರುಬಸಯ್ಯ ಘಂಟಿ ಇದ್ದರು. ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ವಿಠ್ಠಲ ಚೌಹ್ಹಾಣ ಧ್ವಜಾರೋಹಣ ಮಾಡಿದರು. ಶಿವಶರಣಪ್ಪ ಶಿರೂರ, ಮಾರುತಿ ಮೊಕಾಶಿ ಸೇರಿದಂತೆ ಎಲ್ಲ ಶಿಕ್ಷಕರು ಇದ್ದರು.
ನಗನೂರ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷ ಶಾಂತಣ್ಣ ಚನ್ನೂರ ಧ್ವಜಾರೋಹಣ ಮಾಡಿದರು. ಮಾಲಗತ್ತಿ ಗ್ರಾಪಂ ಕಚೇರಿಯಲ್ಲಿ ಉಪಾಧ್ಯಕ್ಷೆ ಸಾಬಮ್ಮ ಚಿದಾನಂದ ಧ್ವಜಾರೋಹಣ ಮಾಡಿದರು. ಪಿಡಿಒ ಚನ್ನಬಸಪ್ಪ ಮಿಣಜಗಿ, ಮಹಾರಾಯ ಸಾಹುಕಾರ, ದೇವರಾಜ, ರೇವಣಸಿದ್ದ ಇದ್ದರು.
ಕೂಡಲಗಿ ಪ್ರಗತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಕಾಶಿರಾಯಗೌಡ ಧ್ವಜಾರೋಹಣ ನೆರವೇರಿಸಿದರು. ಅಮೃತಗೌಡ, ಶರಣಪ್ಪ ಕೊಣ್ಣೂರು, ರಾಘವೇಂದ್ರ ಕುಲಕರ್ಣಿ, ಮುಖ್ಯಶಿಕ್ಷಕ ಪ್ರಾಣೇಶ ಜೋಷಿ ಇದ್ದರು. ಮುದನೂರ ದೇವರ ದಾಸೀಮಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಕ್ಷ ಶಾಂತರೆಡ್ಡಿ ಚೌಧರಿ ಧ್ವಜಾರೋಹಣ ಮಾಡಿದರು. ಮುಖ್ಯಶಿಕ್ಷಕ ಮಹೇಶ ತಾತರೆಡ್ಡಿ ಹಾಗೂ ಶಿಕ್ಷಕ, ಸಿಬ್ಬಂದಿ ಇದ್ದರು.
ಮಲ್ಲಾ (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ| ವಿಶ್ವನಾಥ, ಯಡಿಯಾಪುರ ಆಯುಷ್ ಇಲಾಖೆಯಲ್ಲಿ ಡಾ| ಮೀರಾ ಜೋಷಿ, ಹೆಗ್ಗನದೊಡ್ಡಿ ಕ್ರಾಸ್‌ನ ಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಗುರುರಾಜ ಜೋಶಿ ಧ್ವಜಾರೋಹಣ ಮಾಡಿದರು. ಸೋಮರಾಯ ಬಿಂಗೇರಿ, ಕುಮಾರ ದೇವರಾಜ ಅಗ್ನಿ, ರೇಷ್ಮಾ ಕಾರವಾರ, ಸನಾ ಬೇಗಂ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.