ಕೆಜಿಎಫ್ ತಾಲೂಕಲ್ಲಿ ಆನೆಗಳ ಹಿಂಡು; ಬೆಳೆ ನಾಶ
Team Udayavani, Dec 8, 2019, 6:26 PM IST
ಬೇತಮಂಗಲ/ಕೆಜಿಎಫ್: ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಬಿಳ್ಳೇರಳ್ಳಿ, ಬೇತಮಂಗಲ ಮಾರ್ಗದಲ್ಲಿ 8 ಆನೆಗಳ ಹಿಂಡು ಕಾಣಿಸಿಕೊಂಡು, ರೈತರು ಬೆಳೆದಿದ್ದ ಹುರುಳಿ, ಟೊಮೆಟೋ ಬೆಳೆ ಸಂರ್ಪೂಣವಾಗಿ ನಾಶಪಡಿಸಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳ ಹಿಂಡನ್ನು ಮತ್ತೆ ಕಾಡಿನತ್ತ ಓಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಇದೇವೇಳೆ ಸಾವಿರಾರು ಜನರು ಆನೆಗಳನ್ನು ವೀಕ್ಷಣೆ ಮಾಡಲು ಗುಂಪು ಗುಂಪಾಗಿ ಕ್ಯಾಸಂ ಬಳ್ಳಿಯತ್ತ ದಾವಿಸುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕೂಗಾಟ ಚೀರಾಟ ಹೆಚ್ಚಾಗಿ ಆನೆಗಳನ್ನು ಮನ ಬಂದಂತೆ ಓಡಾಡುತ್ತಿವೆ.ಇದರಿಂದ ಅರಣ್ಯ ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿದೆ.
ಸಾರ್ವಜನಿಕರಿಗೆ ಮನವಿ: ಕೆಲವೊಮ್ಮೆ ರೊಚ್ಚಿಗೇಳುವ ಆನೆಗಳು ಮನುಷ್ಯರತ್ತ ನುಗ್ಗುತ್ತವೆ. ಈ ವೇಳೆ ಪ್ರಾಣಿ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾರ್ವಜನಿಕರು ಆನೆಗಳ ಹಿಂಡಿನತ್ತ ತೆರಳುವುದು ಬೇಡ ಮತ್ತು ಗ್ರಾಮಸ್ಥರು ಆನೆಗಳು ಕಾಡಿಗೆ ಹೋಗುವವರೆಗೂ ಜಮೀನಿಗೆ ತೆರಳಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೆಜಿಎಫ್ ಸಮೀಪ ಬಂದಿದ್ದ ಹಿಂಡು: ಕೆಜಿಎಫ್ ನಗರದ ಹೊರವಲಯದಲ್ಲಿ ಕಾಡಾನೆಗಳು ದಿಢೀರ್ ಪ್ರತ್ಯಕ್ಷವಾಗಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ಮುಂಜಾನೆ
ಕ್ಯಾಸಂಬಳ್ಳಿ ಹೊರವಲಯದ ಬಲುವನ ಹಳ್ಳಿ, ನಾಗಲೇಹಳ್ಳಿ, ವೀರಸಂದ್ರ ಬಳಿ ಗ್ರಾಮಸ್ಥರು ಆನೆಗಳ ಹಿಂಡನ್ನು ಕಂಡು ಆರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಭಾರೀ ಗಾತ್ರದ ಏಳು ಆನೆಗಳು ಹಿಂಡಿ ನಲ್ಲಿವೆ.
ಆಂಧ್ರದತ್ತ ಓಡಿಸಲು ಯತ್ನ: ಬಲು ವನಹಳ್ಳಿ ಬಳಿ ಸುಮಾರು 3ಗಂಟೆಗಳ ಕಾಲ ಬೀಡುಬಿಟ್ಟಿದ್ದ ಆನೆಗಳು ನಂತರ ಮಡಿವಾಳ ಕೆರೆ ಮೂಲಕ ಆಂಧ್ರದ ಗಡಿಗೆ ಹೋದವು. ಸಂಜೆ ವೇಳೆಗೆ ಎಂ.ಕೊತ್ತೂರು ಗ್ರಾಮ ಬಳಿಯಲ್ಲಿ ಬೀಡು ಬಿಟ್ಟಿವೆ. ಆನೆಗಳನ್ನು ಓಡಿಸಲು ಆಂಡರಸನ್‌ಪೇಟೆ ಪೊಲೀಸರು ಮತ್ತು ಅರಣ್ಯ ಇಲಾಖೆ ಪ್ರಯತ್ನ ನಡೆಸಿ ದ್ದಾರೆ. ಐದು ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಆನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬೆನ್ನಟ್ಟಿದ್ದಾರೆ.
ಅವುಗಳನ್ನು ಪುನಃ ತಮಿಳುನಾಡಿಗೆ ಓಡಿಸಲು ಇಲ್ಲವೇ ಆಂಧ್ರದತ್ತ ಓಡಿಸಲು ಪ್ರಯತ್ನ ನಡೆಸಿದ್ದಾರೆ.ಆನೆಗಳು ಕ್ಯಾಸಂ ಬಳ್ಳಿ ಹೊರವಲಯ ದಲ್ಲಿ ಹುರುಳಿ ಕಾಯಿ ತೋಟವನ್ನು ನಾಶಪಡಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.