ಕೆಜಿಎಫ್ ಆಸ್ಪತ್ರೆಗೆ ಮಹಿಳಾ ಆಯೋಗ ಭೇಟಿ
ಸಿಸಿ ಕ್ಯಾಮೆರಾ ದೃಶ್ಯಾವಳಿ, ಡೀಸಿಯಿಂದ ವರದಿ ಪಡೆದು ಕ್ರಮ: ನಾಗಲಕ್ಷ್ಮೀಬಾಯಿ ಭರವಸೆ
Team Udayavani, May 30, 2019, 11:14 AM IST
ಕೆಜಿಎಫ್ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ರೋಗಿಗಳ ಜೊತೆ ಮಾತನಾಡಿದರು.
ಕೆಜಿಎಫ್: ರಾಬರ್ಟಸನ್‌ಪೇಟೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಪ್ರಸವಪೂರ್ವದಲ್ಲಿ ಮಗು ತೀರಿಕೊಂಡಿದೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ, ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದರು.
ನಗರಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಲವು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳು ಎಲ್ಲಾ ವರ್ಗದ ಜನರಿಗೂ ಮೀಸಲಾಗಿದೆ. ಕೆಲಸ ನಿರ್ವಹಿಸುವ ಸಿಬ್ಬಂದಿ ಸೇವಾ ಮನೋಭಾವ ತೋರಬೇಕು. ಸಂಬಳ ಬರುತ್ತೆ ಎಂಬ ಉದಾಸೀನ ಮಾಡಬಾರದು. ವೈದ್ಯೋ ನಾರಾಯಣ ಹರಿ ಎಂಬಂತೆ ಕೆಲಸ ನಿರ್ವಹಿಸಬೇಕು. ವಿಡಿಯೋ ನೋಡಿ ಮನ ಕಲಕಿತು. ಸರ್ಕಾರಿ ಆಸ್ಪತ್ರೆ ಎಂದರೆ ಜನರ ವಿಶ್ವಾಸ ಇಲ್ಲ. ಜೊತೆಗೆ ವೈದ್ಯರ ಕೊರತೆ ಇದೆ. 2016ರಿಂದ ಫಿಸಿಶಿಯನ್ ಇಲ್ಲ ಎಂಬ ವರದಿ ನಿಜಕ್ಕೂ ಆತಂಕಕಾರಿ ಎಂದು ನಾಗಲಕ್ಷ್ಮೀಬಾಯಿ ಹೇಳಿದರು.
ದೂರು ದಾಖಲಿಸಿ: ಕೆಜಿಎಫ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವಾತಾವರಣ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸೇವೆ ಕೂಡ ಲಭಿಸಬೇಕು. ಆಸ್ಪತ್ರೆಯ ಸಿಬ್ಬಂದಿಗೆ ತೊಂದರೆ ಕೊಡುವ ಪ್ರೇಂಕುಮಾರ್ ಎಂಬ ಸಾಮಾಜಿಕ ಜಾಲತಾಣದ ವರದಿಗಾರನ ಮೇಲೆ ಇದುವರೆಗೂ ದೂರು ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು. ಮೂರು ತಿಂಗಳ ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಾಸಕರ ಸೂಚನೆ ಮೇರೆಗೆ ದೂರು ನೀಡಲಾಗಿತ್ತು. ಯಾವುದೇ ಕ್ರಮ ಜರುಗಲಿಲ್ಲ. ಈಗ ಪುನಃ ದೂರು ನೀಡಲಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದರು. ಈ ಸಂಬಂಧವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡುವುದಾಗಿ ಅಧ್ಯಕ್ಷೆ ತಿಳಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್, ಡಾ.ಭಾರತಿ, ಡಾ.ಸುಧಾರಾಣಿ ಹಾಜರಿದ್ದರು.
ವೈದ್ಯರು, ಸಿಬ್ಬಂದಿ ಬಲಿಪಶು ಮಾಡಲು ಹುನ್ನಾರ
ಸಮೀನಾಗೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗಿತ್ತು. ಅವರು ಆಸ್ಪತ್ರೆಗೆ ಬರುವ ಮೊದಲೇ ಮಗು ಚಲನವಲನ ಇರಲಿಲ್ಲ. ಅದು ತನಿಖೆಯಲ್ಲಿ ದೃಢಪಟ್ಟಿತ್ತು. ಮತ್ತಷ್ಟು ದಾಖಲೆಗಾಗಿ ಅವರಿಗೆ ಸ್ಕಾನ್ ಮಾಡಿಸುವಂತೆ ತಿಳಿಸಲಾಯಿತು. ಆದರೆ, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸದೆ, ಖಾಸಗಿ ಯಲ್ಲಿ ಮಾಡಿಸಿಕೊಂಡು ಬಂದರು. ಆಸ್ಪತ್ರೆಗೆ ಬರುವ ಸಮಯದಲ್ಲಿ ನಾನು ಶಸ್ತ್ರಚಿಕಿತ್ಸೆಯಲ್ಲಿ ತೊಡಗಿದ್ದೆ. ಅವರು ಸ್ಕ್ಯಾನ್ ಪ್ರತಿಯನ್ನು ಸಿಬ್ಬಂದಿಗೂ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ವರದಿಗಾರ ಪ್ರೇಂಕುಮಾರ್ ಹೇಳಿದಂತೆ ನಟನೆ ಮಾಡಿ, ವಿಡಿಯೋ ಮಾಡಲಾಯಿತು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮುಂದೆ ಆಸ್ಪತ್ರೆಯ ಸಿಬ್ಬಂದಿ ವಿವರಿಸಿ ದರು.ಈ ಘಟನೆ ಆಸ್ಪತ್ರೆಯ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿದೆ. ಅದನ್ನು ಪರಿಶೀಲಿಸಿದರೆ ಎಲ್ಲವೂ ತಿಳಿಯುತ್ತದೆ. ಸಮೀನಾ ಜೊತೆ ಅವರು ಕುಟುಂಬದವರು ಪಕ್ಕದಲ್ಲಿಯೇ ಇದ್ದರೂ, ಅವರನ್ನು ತೋರಿಸದೆ, ಆಕೆಯೊಬ್ಬ ರನ್ನೇ ನೆಲದ ಮೇಲೆ ಕುಳ್ಳಿರಿಸಿ ಹೊರಳಾಡು ವಂತೆ ಮಾಡಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ಬಲಿಪಶು ಮಾಡುವ ಹುನ್ನಾರ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.
ಬಾಲಮಂದಿರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ
ಕೆಜಿಎಫ್: ನಗರದ ಮಸ್ಕಂನ ಬಾಲಮಂದಿರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಭೇಟಿ ನೀಡಿದರು. ಬಾಲಮಂದಿರದ ಅಧೀಕ್ಷಕರು ಮಕ್ಕಳಿಗೆ ಹೊಡೆದರು ಎಂಬ ಆರೋ ಪದ ಹಿನ್ನೆಲೆಯಲ್ಲಿ 27 ಮಕ್ಕಳನ್ನು ವಿಚಾರಣೆ ನಡೆಸಿ ದರು. ಆದರೆ, ಮಕ್ಕಳು ಅಧೀಕ್ಷಕರ ಮೇಲೆ ಸಕಾರಾ ತ್ಮಕವಾಗಿ ಹೇಳಿದರು. ಬಾಲಮಂದಿರದ ಸಿಬ್ಬಂದಿ ಸಚಿನ್ ಎಂಬಾತ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗ ಳಿಗೆ ಹರಿಯಬಿಟ್ಟಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು. ಆತನಿಗೆ ನೋಟಿಸ್ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸೌಮ್ಯ ಹೇಳಿದರು. ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣನಾದ ಸಚಿನ್ ಎಂಬ ಸಿಬ್ಬಂದಿಯ ವಿವರ ನನಗೆ ಕಳಿಸಿಕೊಡಬೇಕು. ಆತನ ಮೇಲೆ ಕ್ರಮ ಕೈಗೊಂಡು ವರ್ಗಾವಣೆಗೆ ಶಿಫಾರಸುಮಾಡಲಾಗುವುದೆಂದು ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.