ಕೊಡಗು: 13 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲು
Team Udayavani, Jul 17, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಡಿಕೇರಿ: ಕೋವಿಡ್ 19 ಸೋಂಕು ಬಾಧಿತ ವೃದ್ಧೆಯೊಬ್ಬರು ಗುರುವಾರ ಸಾವನ್ನಪ್ಪುವುದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿದೆ.
ಹೊಸದಾಗಿ 13 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ.
ಸೋಮವಾರಪೇಟೆಯ ತೊರೆನೂರು ಗ್ರಾಮದ 90 ವರ್ಷದ ವೃದ್ಧೆ ಮೃತಪಟ್ಟವರು. ಸಾವಿನ ಬಳಿಕ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿದೆ.
ಅವರಿಗೆ ಬೇರಾವುದೇ ರೋಗ ಲಕ್ಷಣಗಳಿಲ್ಲದ ಕಾರಣ ಕೋವಿಡ್ ಸಂಬಂಧಿತ ಸಾವು ಎಂದು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗುರುವಾರ ಸೋಂಕು ದೃಢವಾದ 13 ಮಂದಿಯಲ್ಲಿ 3 ವರ್ಷದ ಬಾಲಕ, 64 ವರ್ಷದ ಮಹಿಳೆ, 20 ವರ್ಷದ ಯುವತಿ, 21 ವರ್ಷದ ಯುವಕ ಸೇರಿದ್ದಾರೆ.
ಕಾಸರಗೋಡು: 18 ಪ್ರಕರಣ
ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಬಾಧಿಸಿದೆ. 11 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ನಾಲ್ವರು ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಆಗಮಿಸಿದವರು.
ಮಂಗಲ್ಪಾಡಿಯ ಮಹಿಳೆ, ಮೂವರು ಪುರುಷರು, 14, 3 ವರ್ಷ ಮತ್ತು 40 ದಿನಗಳ ವಯೋಮಾನದ ಮಕ್ಕಳು, ಮಧೂರಿನ ಯುವಕ, ಚೆಮ್ನಾಡ್‌ನ ಮಹಿಳೆ, ಪನತ್ತಡಿಯ ವೃದ್ಧ ಸಂಪರ್ಕದಿಂದ ಸೋಂಕು ತಗಲಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ
Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!
Madikeri: ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.