48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತ
Team Udayavani, Mar 7, 2019, 1:00 AM IST
ಮಂಜೇಶ್ವರ: ಪಾವೂರು ಕೊಪ್ಪಳದ ಶಿವಪುರ ಶ್ರೀ ಮಹಾ ಮೃತ್ಯುಂ ಜಯೇಶ್ವರ ದೇವಸ್ಥಾನದಲ್ಲಿ ಮಾ. 4 ಸೊಮವಾರದಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ 48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತಾನುಷ್ಠಾನರಾಗಿದ್ದು, ಮಂಗಳವಾರ ಬೆಳಗ್ಗೆ ಗಣಪತಿ ಹವನ ಅನಂತರ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ ಮುಂದುವರಿಯಿತು.
ಈ ಸಂದರ್ಭದಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತರು ನಾಮ ಜಪ ಮಾಡಿದರು. ಸಂಜೆ ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನ ಮಂಡಳಿಯವರು ಭಜನ ಸಂಕೀರ್ತನೆ ನಡೆಸಿದರು. ಸಂಜೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅಥಿತಿಯಾಗಿ ವರ್ಕಾಡಿ ಕಾವೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ರೈ ವರ್ಕಾಡಿ ಮಾತನಾಡಿದರು. ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಸಂಜೀವ ಶೆಟ್ಟಿ ಮಾಡ, ಶ್ರೀಧರ ಶೆಟ್ಟಿ ಪಾವೂರು ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ ಗಣಪತಿ ಹವನ, ಪುಂಡರೀಕಾಕ್ಷ ಅವರಿಂದ ಮೌನವ್ರತ, ಭಕ್ತರಿಂದ 2 ಲಕ್ಷ ನಾಮಜಪ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಸುಂಕದಕಟ್ಟೆ ವರ್ಕಾಡಿ ತಂಡ ದಿಂದ ಭಜನಾ ಸಂಕೀರ್ತನೆ, ಸತ್ಸಂಗ ನೆರವೇರಿತು. ಈ ಸಂದರ್ಭ ಡಾ| ಕೆ.ಎಸ್.ಶಂಕರ ಹೊಳ್ಳ ಕೋಡಿ ವರ್ಕಾಡಿ, ಸುಬ್ಬ ಗುರುಸ್ವಾಮಿ, ಗೋಪಾಲ ಶೆಟ್ಟಿ ಅರಿಬೈಲು, ಲಕ್ಷ್ಮೀನಾರಾಯಣ ಭಟ್ ಕೋಳ್ಯೂರು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.