ಶರಣ ಸಾಹಿತ್ಯ ಪರಿಷತ್‌ನಿಂದ ವಚನ ದಿನ
Team Udayavani, Aug 31, 2017, 8:15 AM IST
ಶನಿವಾರಸಂತೆ: ಯುವಕರು, ವಿದ್ಯಾರ್ಥಿಗಳು ಹಾಗೂ ಮಕ್ಕಳು ಶರಣರ ಚಿಂತನೆ ಮತ್ತು ಶರಣ ವಚನಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ಸಮಾಜವನ್ನು ಸುಧಾರಣೆ ಮಾಡಬಹುದು ಎಂದು ರಾಜ್ಯ ರೇಷ್ಮೆ ಮತ್ತು ಪಶುಸಂಗೋಪನಾ ಇಲಾಖೆ ಸಚಿವ ಎ.ಮಂಜು ಅಭಿಪ್ರಾಯ ಪಟ್ಟರು.
ಅವರು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶಾಲಾ ಆವರಣದಲ್ಲಿರುವ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ್ ಇವರ ಸಂಯುಕ್ತ ಆಶ್ರಯದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಮತ್ತು ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಡಾ| ಶ್ರೀ ರಾಜೇಂದ್ರ ಮಹಾಸ್ವಾಮೀ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಸಮಾಜದ ಸುಧಾರಣೆಗಾಗಿ ಅನುಭವ ಮಂಟಪವನ್ನು ಸ್ಥಾಪಿಸುವುದರ ಮೂಲಕ ಇಂದಿನ ಸಂವಿಧಾನದ ರಚನೆಗೆ ಪ್ರೇರಣೆಯಾಯಿತು.
12ನೇ ಶತಮಾನದಲ್ಲಿ ಬಸವಣ್ಣ ಅವರು ಸ್ಥಾಪಿಸಿದ್ದ ಅನುಭವ ಮಂಟಪ್ಪ ಇಂದಿನ ನಮ್ಮ ದೇಶದ ಸಂವಿಧಾನದ ಅಡಿಯಲ್ಲಿರುವ ಲೋಕಸಭೆ, ವಿಧಾನ ಸಭೆಗಳೆಂಬ ವ್ಯವಸ್ಥೆಯಾಗಿದೆ ಎಂದರು. ವಚನ ಸಾಹಿತ್ಯ ಮತ್ತು ಅದರ ತತ್ವ ಸಂದೇಶಗಳನ್ನು ಯುವ ಜನಾಂಗ ಮತ್ತು ಮಕ್ಕಳು ಅಳವಡಿಸಿಕೊಂಡು ಅವುಗಳನ್ನು ಪಾಲನೆ ಮಾಡಿಕೊಳ್ಳುವುದ್ದರಿಂದ ತಮ್ಮ ಜೀವನ ಉತ್ತಮಗೊಳ್ಳುವುದರ ಜೊತೆಯಲ್ಲಿ ಸಮಾಜವನ್ನು ಅಭಿವೃದ್ಧಿಗೊಳಿಸಬಹುದಾಗಿದೆ, ವಚನ ಸಾಹಿತ್ಯದ ಸಾರ ಸಮಾಜ ಮತ್ತು ದೇಶದ ಅಭಿವದ್ಧಿಗೆ ಪೂರಕವಾಗಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ವಚನ ಸಾಹಿತ್ಯ ಹಾಗೂ ಶರಣರ ಚಿಂತನೆಯನ್ನು ಮುಂದಿನ ಪೀಳಿಗೆಯವರಿಗಾಗಿ ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದರು.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ವಚನ ಮತ್ತು ಶರಣ ಸಾಹಿತ್ಯದಲ್ಲಿ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮುಂತಾದ ಮಾನವೀಯ ಮೌಲ್ಯಗಳು ಅಡಕವಾಗಿವೆ. ಇವುಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ, 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರು ಸಾರಿದ ಸಂದೇಶ ಮತ್ತು ಮಾರ್ಗದರ್ಶನ ಪ್ರತಿಯೊಬ್ಬರಿಗೂ ಯಾಗಬೇಕೆಂದರು.
ವಚನ ದಿನದ ಕುರಿತು ಉಪನ್ಯಾಸ ನೀಡಿದ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ| ಸಿ.ಎಲ್. ಧರ್ಮ, ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯದ ತತ್ವ ಸಂದೇಶಗಳಿಂದ ಸಮಾಜ ಸುಧಾರಣೆಯ ಕ್ರಾಂತಿಯಾಗಿದೆ. ವಚನ ಸಾಹಿತ್ಯ ಮನೆಮನೆಗಳಿಗೂ ಮತ್ತು ಪ್ರತಿಯೊಂದು ಮನಸ್ಸಿಗೆ ನಾಟಿದರೆ ಇಂದಿನ ನಮ್ಮ ಸಮಾಜ ದಲ್ಲಿರುವ ಅಸಮಾನತೆ, ಜಾತಿ ತಾರತಮ್ಯ ಮುಂತಾದ ಭೇದಭಾವಗಳು ದೂರವಾಗುತ್ತವೆ ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 800 ವರ್ಷಗಳ ಹಿಂದೆ ಬಸವಣ್ಣ ಅವರ ಅನುಭವ ಮಂಟಪದ ಪರಿಕಲ್ಪನೆ ಇಂದಿನ ಸಂವಿಧಾನದ ವ್ಯವಸ್ಥೆಯಾಗಿರುವುದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕಾಗಿದೆ, ಶರಣರ ಮತ್ತು ವಚನ ಸಾಹಿತ್ಯ ಶರಣರ ಸಮಾಜ ಸುಧಾರಣೆಯ ಪರಿಕಲ್ಪನೆಯನ್ನು ನಾವೆಲ್ಲರೂ ಪಾಲನೆ ಮಾಡಬೇಕಾಗಿದೆಎಂದರು.
ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ತ್ ಅಧ್ಯಕ್ಷ ಬಿ.ಎಸ್. ಅನಂತಶಯನ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್‌ಸಾಗರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಕುಟ್ಟಪ್ಪ, ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕಲ್ಲುಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಎಸ್. ಮಹೇಶ್ ಮಾತನಾಡಿದರು. ಸಮಾರಂಭದಲ್ಲಿ ಸೋಮವಾರಪೇಟೆ ತಾ. ವೀರಶೈವ ಸಮಾಜ ಅಧ್ಯಕ್ಷ ಸಿ.ವಿ. ವಿಶ್ವನಾಥ್, ಪ್ರಮುಖರಾದ ವರಪ್ರಸಾದ್, ಬಿ.ಕೆ. ಯತೀಶ್, ಕೆ.ಪಿ. ಜಯಕುಮಾರ್, ಹೆಚ್.ಎಸ್. ಪ್ರೇಮ್‌ನಾಥ್, ಡಿ.ಬಿ. ಸೋಮಪ್ಪ, ಎಸ್.ಎಂ. ಡಿ’ಸಿಲ್ವ, ಜಿ.ಎಂ. ಕಾಂತರಾಜು, ಶೀಲಾ ಡಿ’ಸಿಲ್ವ ಮುಂತಾ ದವರು ಇದ್ದರು. ಈ ಸಂದರ್ಭದಲ್ಲಿ ಮೈಸೂರಿನ ಸುಗಮ ಸಂಗೀತ ಕಲಾವಿದರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.