ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಅರಿವು
Team Udayavani, Oct 17, 2019, 5:29 AM IST
ಶನಿವಾರಸಂತೆ: ಸಂವಿಧಾನ ದಿಂದ ಎಲ್ಲಾರಿಗೂ ಮೀಸಲಾತಿ ಸೌಲಭ್ಯ ಲಭಿಸಿದೆ ಎಂದು ಮಡಿಕೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕೆ.ಜಿ.ಪುಟ್ಟರಾಜು ಅಭಿಪ್ರಾಯ ಪಟ್ಟರು. ಅವರು ದುಂಡಳ್ಳಿ ಗ್ರಾ.ಪಂ.ಯ ಸುಳುಗಳಲೆ ಕಾಲನಿ ಸಮೂದಾಯ ಭವನದಲ್ಲಿ ಸುಳುಗಳಲೆ ಕಾಲೋನಿಯ ವಿವಿಧ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.-ಡಾ.ಬಿ.ಆರ್.ಅಂಬೇಡ್ಕರ್ ಅವರ ಮೀಸಲಾಯಿಂದಾಗಿ ದೇಶದ್ಯಾದಂತ ಜನ ಸಾಮಾನ್ಯರು ವಿವಿಧ ಸೌಲಭ್ಯ ಸೇವೆಗಳನ್ನು ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಎಲ್ಲಾರ ಬದುಕಿನ ಆಶಾ ಕಿರಣರಾಗಿದ್ದರು, ಹೆಣ್ಣು ಸಂಸಾರದ ಕಣ್ಣು ಎಂಬ ನಿಟ್ಟಿನಲ್ಲಿ ಅವರು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿಕೊಟ್ಟಿರುವ ಮೂಲಕ ಇಂದು ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಕಾರಣವಾಗಿದೆ ಎಂದರು. ಇಂದು ಮಹಿಳೆಯರು ಸಾಂಸಾರಿಕ ಜೀವನ ನಿರ್ವಹಣೆಯ ಜೊತೆಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.
ಈಲ್ಲಾ ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಸಬಲೀಕರಣಕ್ಕಾಗಿ ಸಂಬಂಧಗಳು, ಸುರಕ್ಷತೆ, ಸಂಹನ, ಮಾರ್ಗದರ್ಶನ, ಶಿಕ್ಷಣ, ಆರೋಗ್ಯ, ಭಾವನೆಗಳು, ಜೀವನ ಶೈಲಿ ಬಗ್ಗೆ ಜನರಿಗೆ ಮಾಹಿತಿ ಅರಿವು ಮೂಡಿಸಲಾಗುತ್ತಿದೆ ಈ ನಿಟ್ಟಿನಲ್ಲಿ ಎಲ್ಲಾರೂ ಮಾಹಿತಿ ಮತ್ತು ಸೇವೆ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು.ಗ್ರಾ.ಪಂ.ಸದಸ್ಯೆ ನೇತ್ರಾವತಿ, ಧರ್ಮಸ್ಥಳ ಸಂಘದ ಬಿ ಒಕ್ಕೂಟದ ಮಾಜಿ ಅಧ್ಯಕ್ಷೆ ರತ್ನ, ಸೇವಾ ಪ್ರತಿನಿಧಿಗಳಾದ ಎಸ್.ಆರ್.ಶೋಭಾವತಿ, ಗಿರಿಜಾ, ನಳಿನಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.