ಬೆಂಗಳೂರು ಸೈಬರ್ ಕ್ರೈಂ ವಿಭಾಗದಿಂದ ತನಿಖೆಗೆ ಆಗ್ರಹ
Team Udayavani, Jul 20, 2017, 5:10 AM IST
ಮಡಿಕೇರಿ: ನಗರಸಭೆಯ ಡಿಜಿಟಲ್ ಸ್ಕ್ರೀನ್‌ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನವಾಗಿದೆ ಎನ್ನುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಸೈಬರ್ ಕ್ರೈಂ ವಿಭಾಗದಿಂದ ನಿಷ್ಪಕ್ಷ ತನಿಖೆ ನಡೆಯುವುದು ಸಾಧ್ಯವಿಲ್ಲವೆಂದು ಅಭಿಪ್ರಾಯ ಪಟ್ಟಿರುವ ನಗರಸಭೆಯ ಬಿಜೆಪಿ ಸದಸ್ಯರು ತನಿಖೆ ಜವಾಬ್ದಾರಿಯನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪಿ.ಡಿ. ಪೊನ್ನಪ್ಪ, ಅಶ್ಲೀಲ ಚಿತ್ರ ಪ್ರದರ್ಶನ ವಾಗಿಲ್ಲವೆಂದು ಅಧ್ಯಕ್ಷರು ಸಮರ್ಥನೆ ನೀಡುತ್ತಿದ್ದು, ಇದು ನಿಜವೇ ಆಗಿದ್ದಲ್ಲಿ ಸಂತೋಷ ಎಂದರು. ಆದರೆ, ಕೆಲವು ಅಧಿಕಾರಿಗಳು ಪ್ರದರ್ಶನವಾದ ಚಿತ್ರದ ಫೋಟೋ ತೆಗೆದಿದ್ದಾರೆ. ವಿಚಾರಣೆ ವೇಳೆ ಫೋಟೋ ಡಿಲೀಟ್ ಆಗಿದೆಯೆಂದು ಸಮಜಾಯಿಷಿಕೆ ನೀಡಿದ್ದಾರೆ. ಇದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದ್ದು, ಡಾಟಾ ಆಪರೇಟರ್ ಸಂಧ್ಯಾ ಅವರನ್ನು ಅಧ್ಯಕ್ಷರು ವಿಚಾರಣೆ ಮಾಡಬೇಕಾಗಿತ್ತೆಂದು ಅಭಿಪ್ರಾಯಪಟ್ಟರು.
ಎರಡನೇ ಬಾರಿಗೆ ನಗರಸಭಾ ಅಧ್ಯಕ್ಷರಾಗಿರುವ ಕಾವೇರಮ್ಮ ಸೋಮಣ್ಣ ಅವರಿಗೆ ಸಾಮಾನ್ಯ ಜ್ಞಾನ ಇರಬೇಕಾಗಿತ್ತೆಂದು ಅಸಮಾಧಾನ ವ್ಯಕ್ತಪಡಿಸಿದ ಪಿ.ಡಿ. ಪೊನ್ನಪ್ಪ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಬೇಕೆ ಹೊರತು ಅಧ್ಯಕ್ಷರು ಅಲ್ಲವೆಂದು ಹೇಳಿದರು. ನಗರಸಭೆಯಲ್ಲಿ ಅಳವಡಿಸಲಾಗಿರುವ ಎಲ್ಲಾ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಡಿಜಿಟಲ್ ಸ್ಕ್ರೀನ್ ಬಳಿಯ ಒಂದು ಕೆಮರಾ ದುರಸ್ತಿ ಗೀಡಾಗಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ಒಟ್ಟು ಪ್ರಕರಣ ಅನೇಕ ಸಂಶಯಗಳನ್ನು ಹುಟ್ಟು ಹಾಕುತ್ತಿದ್ದು, ತನಿಖೆಯ ವರದಿ ಬರುವ ಮೊದಲೇ ಎಲ್ಲ ಘಟನಾವಳಿಗಳಿಗೆ ಉಪಾಧ್ಯಕ್ಷರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷರನ್ನು ಹೊಣೆೆಗಾರರನ್ನಾಗಿ ಮಾಡಿರುವುದು ಸರಿಯಾದ ಕ್ರಮವಲ್ಲವೆಂದರು.
ನಗರಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಧ್ಯಕ್ಷರಿಗೆ ಅಧ್ಯಕ್ಷ ಸ್ಥಾನದ ಮೇಲಷ್ಟೆ ಪ್ರೀತಿ ಇದ್ದರೆ ಸಾಲದೆಂದು ಪಿ.ಡಿ. ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಅಶ್ಲೀಲ ಚಿತ್ರ ಪ್ರದರ್ಶನದ ಫೊàಟೋ ವನ್ನು ತೆಗೆದ ಅಧಿಕಾರಿಗಳು ಇದೀಗ ಆಡಳಿತ ಪಕ್ಷದ ಬೆದರಿಕೆಗೆ ಮಣಿದು ಚಿತ್ರ ಪ್ರದರ್ಶನವನ್ನು ನೋಡಿಲ್ಲವೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಈ ವಿಚಾರ ತಿಳಿಸಿದ ಅಧಿಕಾರಿಯ ಬಳಿ ತಾನು ಪ್ರಶ್ನಿಸಿದಾಗ ನೋಡಬಾರದ ಚಿತ್ರ ಪ್ರದರ್ಶನವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಇಲ್ಲವೆಂದು ಹೇಳುತ್ತಿದ್ದಾರೆ. ಅಶ್ಲೀಲ ಚಿತ್ರವೇ ಅಲ್ಲದಿದ್ದರೆ ಫೋಟೋ ತೆಗೆಯುವ ಅಗತ್ಯವೇನಿತ್ತು, ಡಾಟಾ ಆಪರೇಟರ್ ಸಂಧ್ಯಾ ಅವರ ಬಳಿ ವಿಷಯ ತಿಳಿಸಿ ಡಿಜಿಟಲ್ ಸ್ಕ್ರೀನ್ ಆಫ್ ಮಾಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಸರಕಾರದ ನಿಯಮಾವಳಿಯಂತೆ ಕಾರ್ಯ ನಿರ್ವಹಿಸದ ಡಾಟಾ ಆಪರೇಟರ್ ವಿರುದ್ಧ ಬೊಟ್ಟು ಮಾಡಲೇಬೇಕಾಗಿದೆ. ಸಂಧ್ಯಾ ಅವರ ಸಹೋದರ ಸೈಬರ್ ಕ್ರೆçಂ ವಿಭಾಗದಲ್ಲಿ ಕಾರ್ಯ ನಿರ್ವಹಿಸು ತ್ತಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ಸಂಶಯವಿದೆ. ಆದ್ದರಿಂದ ಬೆಂಗಳೂರು ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಅಧ್ಯಕ್ಷರ ವಿರುದ್ಧ ಗೂಬೆ ಕೂರಿಸಿ ಕೆಟ್ಟ ರಾಜಕಾರಣ ಮಾಡುವ ಅಗತ್ಯವಿಲ್ಲವೆಂದ ರಮೇಶ್, ವೈಫೈ ಮೂಲಕ ಡಿಜಿಟಲ್ ಸ್ಕ್ರೀನ್‌ನಲ್ಲಿ ಚಿತ್ರ ಪ್ರದರ್ಶನವಾಗಲು ಸಾಧ್ಯವಿಲ್ಲವೆಂದರು.
ಕಾಂಗ್ರೆಸ್ ಸದಸ್ಯ ನಂದ ಕುಮಾರ್ ವಿರುದ್ಧ ಅಸ ಮಾಧಾನ ವ್ಯಕ್ತಪಡಿಸಿದ ಅವರು, ನಾನು ಡಾಟಾ ಆಪರೇಟರ್‌ಗೆ ಕಿರುಕುಳ ನೀಡಿದ್ದೇ ಆಗಿದ್ದಲ್ಲಿ ನನ್ನ ವಿರುದ್ಧ ದೂರು ನೀಡಬಹುದಾಗಿತ್ತು. ಆದರೆ, ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ. ಅಲ್ಲದೆ ನಂದಕುಮಾರ್ ಅವರು ಕೆಲವು ವ್ಯಕ್ತಿಗಳ ಮೂಲಕ ದೌರ್ಜನ್ಯ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ ಕೆ.ಎಸ್. ರಮೇಶ್, ಎಲ್ಲ ಕೇಸ್‌ಗಳನ್ನು ಎದುರಿಸಲು ಸಿದ್ಧವೆಂದರು. ಸದಸ್ಯ ನಂದಕುಮಾರ್ ಅವರು ನಿಯಮ ಬಾಹಿರವಾಗಿ ನಗರದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದು ಮತ್ತು ಅವರ ವಾಸದ ಮನೆ ಕಾನೂನಿಗೆ ವಿರುದ್ಧವಾಗಿ ನಿರ್ಮಾಣಗೊಂಡಿರುವ ಬಗ್ಗೆ ದಾಖಲೆ ಇದ್ದು ಸದ್ಯ ದಲ್ಲೆ ಬಹಿರಂಗಪಡಿಸಲಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.