ಬೆಂಗಳೂರು: ಕೊಡವ ಸಾಹಿತ್ಯ, ಸಾಂಸ್ಕೃತಿಕ ಸಂಗಮದ ಮೆರುಗು
Team Udayavani, Aug 4, 2017, 7:25 AM IST
ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮತ್ತು ಬೆಂಗಳೂರಿನ ದಾಸರಳ್ಳಿಯ ಕೊಡವ ಅಸೋಸಿಯೇ ಷನ್ ಜಂಟಿ ಆಶ್ರಯದಲ್ಲಿ ದಾಸರಳ್ಳಿಯ ಸರಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ “ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಜರಗಿತು.
ವಿಧಾನಸಭಾ ಸದಸ್ಯ ಮುನಿರಾಜು, ಕುಶಾಲ ತೋಪನ್ನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಬಿದ್ದಂಡ ಟೈಗರ್ ಅಶೋಕ್ ಕುಮಾರ್, ಕೊಡವ ಸಮು ದಾಯ ಒಗ್ಗಟ್ಟನ್ನು ಕಾಯ್ದು ಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಪೊರೇಟರ್ ಉಮಾದೇವಿ ಮಾತನಾಡಿ, ರಾಜಕೀಯ ವಾಗಿ ಕೊಡವರು ತಮಗೆ ನೀಡಿದ ಬೆಂಬಲಕ್ಕೆ ಚಿರಋಣಿ ಎಂದರು.
ಯಶಸ್ವಿ ಕಾರ್ಯನಿರ್ವಹಣೆ
ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಅಕಾಡೆಮಿಯ ಮೂರು ವರ್ಷದ ಆಡಳಿತಾವಧಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳ ಲಿದೆ. ಕಳೆದ ಮೂರು ವರ್ಷಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿ ಯಾಗಿರುವುದಾಗಿ ತಿಳಿಸಿದರು. ಪ್ರೊ| ಇಟ್ಟಿರ ಬಿದ್ದಪ್ಪ ರಚಿಸಿದ ಪುಸ್ತಕವನ್ನು ಬೆಂಗಳೂರಿನ ಖ್ಯಾತ ವಕೀಲರಾದ ಮುಕ್ಕಾಟಿರ ನಾಣಯ್ಯ ಬಿಡುಗಡೆಗೊಳಿಸಿದರು.
ಕಲ್ಮಾದಂಡ ಯಶಸ್ವಿನಿ ಪ್ರಾರ್ಥಿಸಿದರು, ಅಕಾಡೆ ಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಮಾದೇಟಿರ ಬೆಳ್ಳಿಯಪ್ಪ ನಿರೂಪಿಸಿ, ಸಂಘದ ಕಾರ್ಯದರ್ಶಿ ವಿನುಕುಮಾರ್ ವಂದಿಸಿದರು.
ಬೃಹತ್ ಮೆರವಣಿಗೆಯಲ್ಲಿ ಕೊಡವರು ತಮ್ಮ ಸಂಸ್ಕೃತಿಯ ಅಂಗವಾದ ಕೋವಿ, ಒಡಿಕತ್ತಿ, ತೆರೆ, ಚಂಡೆ, ವಾಲಗ ಕಪಾಳ ಕಳಿಯೊಂದಿಗೆ ಗಂಡಸರು ದಟ್ಟಿ ಕುಪ್ಪಸದಲ್ಲಿ, ಹೆಂಗಳೆಯರು ಕೊಡವತಿ ಸೀರೆ ವಸ್ತ್ರಾದಾರಿಯಾಗಿ ಗಮನ ಸೆಳೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.