ಲೆ| ಜ| ಬಿ.ಸಿ. ನಂದ ಅಂತ್ಯಸಂಸ್ಕಾರ
Team Udayavani, Dec 14, 2018, 10:08 AM IST
ಮಡಿಕೇರಿ: ಭಾರತೀಯ ಸೇನಾ ಪಡೆಯಲ್ಲಿ ತಮ್ಮ ಉನ್ನತ ಸ್ತರದ ಕಾರ್ಯವೈಖರಿಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದ ಲೆ| ಜ| ಬಿ.ಸಿ. ನಂದ ಅವರ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ನಗರದಂಚಿನ ಅವರ ತೋಟದಲ್ಲಿ ನೆರವೇರಿತು.
ಮೂಲತಃ ಮಹರ್ ರೆಜಿಮೆಂಟಿನ, ಪ್ರಸ್ತುತ ಮೈಸೂರಿನಲ್ಲಿ ಎನ್‌ಸಿಸಿ ಕಮಾಂಡೆಂಟ್ ಆಗಿರುವ ಕ| ಎಂ.ಕೆ. ಬೆಳ್ಯಪ್ಪ ಮತ್ತು ಮದ್ರಾಸ್ ಸ್ಯಾಪರ್ಸ್ ತಂಡದ ನೇತೃತ್ವ ವಹಿಸಿದ್ದ ಲೆ| ಕ| ದಿನೇಶ್ ಕುಮಾರ್ ನೇತೃತ್ವದ 21 ಮಂದಿಯ ತಂಡ ಅಗಲಿದ ಸೇನಾಧಿಕಾರಿಗೆ ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿತು.
ಪತ್ನಿ ಲೀಲಾ ನಂದ ಹಾಗೂ ದ್ವಿತೀಯ ಪುತ್ರಿ ದೇವಿಕಾ ಕೊಡವ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನೆರವೇರಿಸಿದರು. ಫೀ|ಮಾ| ಕಾರ್ಯಪ್ಪ ಮತ್ತು ಜ| ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕ| ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕರಾದ ಮೇ| ಬಿ.ಎ. ನಂಜಪ್ಪ ಮತ್ತು ಕುಟುಂಬಸ್ಥರು ಸಹಕರಿಸಿದರು. ನಂದ ಅವರ ಆಶಯದಂತೆ ಪಾರ್ಥಿವ ಶರೀರವನ್ನು ತೋಟದಲ್ಲಿ ಭೂ ತಾಯಿಯ ಮಡಿಲಿಗೆ ಅರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.