ಯೂತ್ ಅಸೋಸಿಯೇಷನ್ ವತಿಯಿಂದ ರಕ್ತದಾನ ಶಿಬಿರ
Team Udayavani, Mar 15, 2019, 1:00 AM IST
ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಹ್ಯಾಂಡ್‌ಪೋಷ್ಟ್ನಲ್ಲಿರುವ ನೂರ್ ಯೂತ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ಲಿಡ್ ಹೆಲ್ಪ್ಲೈನ್ ಸಂಸ್ಥೆ ಮತ್ತು ಹಾಸನ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕೊಡ್ಲಿಪೇಟೆ ಹ್ಯಾಂಡ್‌ಪೋಷ್ಟ್ನಲ್ಲಿರುವ ನೂರ್ ಮಹಲ್ ಸಮಿಪ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಮಸೀದಿಯ ಪ್ರಮುಖ ಮಹಮ್ಮದ್ ಪೈಝಿ ಖತೀಬ ಉದ್ಘಾಟಿಸಿದರು.
ಕರ್ನಾಟಕ ಬ್ಲಿಡ್ ಹೆಲ್ಪ್ ಲೈನ್ ಸಂಸ್ಥೆಯ ಡಾ.ಉದಯ್‌ಕುಮಾರ್ ರಕ್ತದಾನದ ಕುರಿತು ಮಾತನಾಡಿದರು.ೆ ಬ್ಲಿಡ್ ಹೆಲ್ಪ್ ಲೈನ್ ಸಂಸ್ಥೆ ನಿರ್ವಾಹಕ ಜನಾಬ್ ಅಶ್ರುಫ್ ಅರಭಿ ಮಾತನಾಡಿ-ರಕ್ತದಾನ ಮಾಡುವ ಕಾರ್ಯಕ್ಕೆ ಜಾತಿ- ಜನಾಂಗ, ಧರ್ಮಗಳೆಂಬ ಬೇದಭಾವಗಳಿ ರುವುದಿಲ್ಲ, ಮತ್ತೂಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ ಈ ಸಂದರ್ಭದಲ್ಲಿ ಕೇವಲ ಮನುಷ್ಯನ ರಕ್ತ ಮಾತ್ರಬೇಕಾಗುತ್ತದೆ ಇದನ್ನು ಅರಿತುಕೊಂಡು ಸಮಾಜದಲ್ಲಿ ಪ್ರತಿಯೊಬ್ಬರೂ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವ ಮೂಲಕ ಮಹತ್ವ ದಾದ ಕಾರ್ಯವನ್ನು ಪೋ›ತ್ಸಾಹಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಪಾದರ್ ಪ್ರಡ್ಡಿ ಚೆರಿಯನ್, ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಔರಂಗಜೇಬ್, ಶನಿವಾರಸಂತೆಯ ತಿಮ್ಮಯ್ಯಶೆಟ್ಟಿ ಮಾತನಾಡಿದರು. ಹ್ಯಾಂಡ್‌ಪೋಷ್ಟ್ ಮಸjದ್ದುನ್ನೂರ್ ಮಸೀದಿ ಅಧ್ಯಕ್ಷ ಡಿ.ಎ.ಸುಲೈಮಾನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಪ್ರಮುಖರಾದ ಕೊಡ್ಲಿಪೇಟೆ ಜಾಮೀಯ ಮಸೀದಿ ಅಧ್ಯಕ್ಷ ಬಿ.ಎ.ಆಹಮ್ಮದ್, ಬ್ಯಾಡಗೊಟ್ಟ ಗ್ರಾ.ಪಂ.ಉಪಾಧ್ಯಕ್ಷ ಅಬ್ಟಾಸ್, ಕೊಡ್ಲಿಪೇಟೆ ಕರವೇ ಅಧ್ಯಕ್ಷ ಡಿ.ಪಿ.ಭೂಪಾಲ್, ಬ್ಲಿಡ್ ಹೆಲ್ಪ್ ಸಂಸ್ಥೆ ಪ್ರಮುಖರಾದ ಯತೀಶ್‌ಕುಮಾರ್, ವೇಧಕುಮಾರ್, ಯತೀಶ್, ಮಹಮ್ಮದ್ ಹನೀಪ್, ಬಿ.ಇ.ಖಾದರ್ ಹಾಸನ ರಕ್ತನಿಧಿ ಕೇಂದ್ರದ ಮೋಹನ್, ಕಾಂತರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.