‘ಶಿಕ್ಷಣ ಹಂತದಲ್ಲೇ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ’
Team Udayavani, Jul 1, 2019, 5:43 AM IST
ಶನಿವಾರಸಂತೆ: ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲಿರುವಾಗಲೇ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಭವಿ ಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ವಾಗುತ್ತದೆ ಎಂದು ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಇ.ಎಂ.ದಯಾನಂದ್ ಹೇಳಿದರು.
ಶನಿವಾರಸಂತೆ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿ ಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಲ್ಲಿರುವ ಆದರ್ಶ, ಸಂಸ್ಕಾರ ಮುಂತಾದ ಮೌಲ್ಯಗಳನ್ನು ಪಾಲನೆ ಮಾಡಬೇಕು ಇದರಿಂದ ಪದವಿ ಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದರು. ವಿದ್ಯಾಭ್ಯಾಸದ ದಿನಗಳಲ್ಲಿ ಮಾನವಿಯ ಗುಣ, ಸಂಸ್ಕಾರ ಮುಂತಾದ ಸನ್ನಡತೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಇದರಿಂದ ಮುಂದೆ ಸಮಾಜದಲ್ಲಿ ಸನ್ಮಾರ್ಗದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿ ದಿಸೆಯಲ್ಲಿ ಗುರು-ಹಿರಿಯರಿಗೆ ಗೌರವ ಕೊಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಭವಿಷ್ಯದ ಬಗ್ಗೆ ಗುರಿಯನ್ನಿಟ್ಟುಕೊಳ್ಳುವುದರ ಜೊತೆಯಲ್ಲಿ ಉತ್ತಮ ನಡತೆ ಮತ್ತು ವರ್ತನೆಯಿಂದ ತಾನು ಓದುತ್ತಿರುವ ಕಾಲೇಜಿಗೆ ಕೀರ್ತಿ ತಂದು ಕೊಡುವಷ್ಟು ಪ್ರಬುದ್ದ ವಿದ್ಯಾರ್ಥಿಗಳಾಗಿ ಬೆಳೆಯುವಂತೆ ಮನವಿ ಮಾಡಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ಪಿ.ನರಸಿಂಹಮೂರ್ತಿ ಮಾತನಾಡಿ, ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯ ಕ್ರಮ ಹಮ್ಮಿಕೊಳ್ಳುವುದ್ದರಿಂದ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಲ್ಲಿ ಸಹೋದರ ಮತ್ತು ಸಹೋದರತೆ ಮನೋ ಭಾವನೆಯ ಬೆಸುಗೆ ಹೆಚ್ಚಾಗುತ್ತದೆ, ವಿದ್ಯಾರ್ಥಿ ಜೀವನ ಹಾಗೂ ನಿಜ ಜೀವನ ಬೇರೆಬೇರೆಯದಾಗಿರುತ್ತದೆ ಆದರೆ ವಿದ್ಯಾರ್ಥಿ ದಿಸೆಯಲ್ಲಿ ಬಾಂದವ್ಯ, ಆತ್ಮೀಯತೆ ಮನೋಭಾವನೆಯನ್ನು ಶಿಕ್ಷಣ ಮುಗಿದ ನಂತರವೂ ಮುಂದು ವರಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ವಾಗುತ್ತದೆ ಎಂದರು. ಪ.ಪೂ.ಕಾಲೇಜು ಪ್ರಾಂಶುಪಾಲ ಎಸ್.ಜೆ.ಅಶೋಕ್ ಅಧ್ಯಕ್ಷತೆವಹಿಸಿ ಮಾತ ನಾಡಿ, ವಿದ್ಯಾರ್ಥಿಗಳು ಭವಿಷ್ಯದ ರೂವಾರಿ ಗಳಾಗಿರುವ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ದಿನಗಳಲ್ಲಿಯೇ ಉತ್ತಮ ವಿದ್ಯಾರ್ಥಿ ಎಂದು ಕರೆಸಿಕೊಳ್ಳಬೇಕೆಂದರು. ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಸಂಸ್ಕಾರ ವಾತಾವರಣದಲ್ಲಿ ಕಲಿತರೆ ಮುಂದೆ ಪದವಿ ಶಿಕ್ಷಣದಲ್ಲಿ ಅದೆ ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಬಹುದು ಇದ ರಿಂದ ವಿದ್ಯಾರ್ಥಿ ಭವಿಷ್ಯವು ಸಹ ಉತ್ತಮಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ, ಪ.ಪೂ.ಕಾಲೇಜು, ಪ್ರೌಢಶಾಲಾ ವಿಭಾಗದ ಉಪನ್ಯಾಸಕ ಮತ್ತು ಶಿಕ್ಷಕರ ವರ್ಗದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿನಿಯರು ಸ್ವಾಗತ ನೃತ್ಯದ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.