ಶ್ಮಶಾನದ ಜಾಗ ಒತ್ತುವರಿ: ಗ್ರಾಮಸ್ಥರಿಂದ ತೆರವು ಕಾರ್ಯಾಚರಣೆ
Team Udayavani, Jul 12, 2019, 5:57 AM IST
ಶನಿವಾರಸಂತೆ :ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ಗೆ ಸೇರಿದ ದೊಡ್ಡ ಕುಂದ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸೇರಿದ ಶ್ಮಶಾನದ ಜಾಗವನ್ನು ಗ್ರಾ.ಪಂ.ಯ ಹಾಲಿ ಉಪಾಧ್ಯಕ್ಷ ಆಹಮ್ಮದ್‌ಮೋಣು ಎಂಬುವರು 1 ವಾರದ ಹಿಂದೆ ಗ್ರಾಮಸ್ಥರ ಅರಿವಿಗೆ ಬಾರದೆ ಶ್ಮಶಾನಕ್ಕೆ ಸೇರಿದ ಜಾಗಕ್ಕೆ ಬೇಲಿ ನಿರ್ಮಿಸಿ ಅತಿಕ್ರಮಿಸಿದ್ದರು ಈ ಹಿನ್ನೆಲೆಯಲ್ಲಿ ಬುಧವಾರ ದೊಡ್ಡಕುಂದ, ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮಸ್ಥರು ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿದರು.
ದೊಡ್ಡಕುಂದ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿ ಸಮೂದಾಯದವರು 2 ಏಕರೆ ಜಾಗವನ್ನು ಶ್ಮಶಾನ ಕಾರ್ಯಕ್ಕಾಗಿ ಮೀಸಲಿಟ್ಟಿದ್ದರು ಇದೆ ಶ್ಮಶಾನಕ್ಕೆ ಸೇರಿದ ಜಾಗದಲ್ಲಿ ಪಕ್ಕದ ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮದ ಪರಿಶಿಷ್ಟ ಜಾತಿ ಸಮೂದಾಯದವರು ಅಂತ್ಯ ಸಂಸ್ಕಾರ ನಡೆಸುತ್ತಾರೆ. ಹಲವಾರು ದಶಕಗಳಿಂದ ಶ್ಮಶಾನಕ್ಕಾಗಿ ಮೀಸಲಿಟ್ಟಿದ ಜಾಗವನ್ನು ಒಂದು ವಾರದ ಹಿಂದೆ ಬ್ಯಾಡಗೊಟ್ಟ ಗ್ರಾ.ಪಂ.ಉಪಾಧ್ಯಕ್ಷ ಅಹಮದ್‌ಮೋಣು ಎಂಬಾತ ಬೇಲಿ ನಿರ್ಮಿಸಿಕೊಂಡು ಒತ್ತುವರಿ ಮಾಡಿ ಕೊಂಡಿದ್ದರು. ವಿಷಯ ಗ್ರಾಮಸ್ಥರಿಗೆ ತಿಳಿದು ಈ ಕುರಿತು ಸೋಮವಾರಪೇಟೆ ತಾಹಶೀಲ್ದಾರರಿಗೆ ಗ್ರಾಮಸ್ಥರು ಅಹಮದ್ ವಿರುದ್ಧ‌್ದ ದೂರುನೀಡಿ ಜಾಗವನ್ನು ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಅದರಂತೆ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ಸೇರಿದ ಶ್ಮಶಾನದ ಜಾಗವನ್ನು ಒತ್ತುವರಿ ಮಾಡಿದ್ದ ಅಹಮದ್‌ಗೆ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೂ ಸಹ ಶ್ಮಶಾನ ಅಹಮದ್ ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿದಿದ್ದ ಹಿನ್ನೆಲೆ ಯಲ್ಲಿ ದೊಡ್ಡಕುಂದ, ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮಸ್ಥರು ಎಲ್ಲಾರೂ ಒಂದಾಗಿ ಒತ್ತುವರಿ ಮಾಡಿಕೊಂಡಿದ್ದ ಶ್ಮಶಾನಕ್ಕೆ ಸೇರಿದ ಜಾಗವನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಉಭಯ ಗ್ರಾಮಗಳ ಪ್ರಮುಖರಾದ ಶಿವಣ್ಣ ಮಾಸ್ತರ್, ಜವರೇಗೌಡ, ಬಿ.ಕೆ.ವಸಂತ್, ಬಿ.ಕೆ.ಮಧು, ಬಿ.ಜೆ.ರಾಜು, ಜರ್ನಾದನ್, ಜೆ.ಆರ್.ವೇದಕುಮಾರ್ ,ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.