ಸುಗ್ಗಿ ಹಬ್ಬ ಹುತ್ತರಿ ಕೋಲಾಟದ ಸಂಭ್ರಮ


Team Udayavani, Dec 6, 2017, 12:29 PM IST

20.jpg

ಮಡಿಕೇರಿ: ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿ ಸಂಭ್ರಮಾಚರಣೆಯೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ನಡೆದ ಪುತ್ತರಿ ಅರಮನೆ ಕೋಲಾಟ್‌ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ಕೊಡಗನ್ನಾಳಿದ ಹಾಲೆೇರಿ ರಾಜ ವಂಶಸ್ಥರ ಆಡಳಿತಾವಧಿಯಲ್ಲಿ ಪ‌ುತ್ತರಿ ಹಬ್ಬದ ಬಳಿಕ ಕೋಟೆ ಆವರಣದಲ್ಲಿ ಪ‌ುತ್ತರಿ ಕೋಲಾಟ್‌ ಪಾಂಡೀರ ಕುಟುಂಬಸ್ಥರ ಉಸ್ತುವಾರಿಯಲ್ಲಿ ನಡೆಯುತ್ತಿತ್ತು. ಬ್ರಿಟಿಷರ ಆಳ್ವಿಕೆಯ ಆರಂಭದೊಂದಿಗೆ ಪುತ್ತರಿ ಕೋಲಾಟ್‌ ಕೋಟೆ ಆವರಣದಿಂದ ಗದ್ದುಗೆಗೆ ಸ್ಥಳಾಂತರಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಪ‌ುತ್ತರಿ ಕೋಲಾಟ್‌ಗೆ ಪುನಶ್ಚೇತನ ನೀಡಿ, ಹಿಂದಿನಂತೆಯೆ ನಡೆಸುವ ಪರಿಪಾಠವನ್ನು ಆರಂಭಿಸಲಾಗಿದ್ದು, ಅದರಂತೆ ಇಂದು ಕೋಟೆ ಆವರಣದಲ್ಲಿ 7ನೇ ವರ್ಷದ ಪ‌ುತ್ತರಿ ಕೋಲಾಟ್‌ ಸಂಭ್ರಮ ಪಸರಿಸಿತು.

 ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಾಂಡೀರ ಕುಟುಂಬಸ್ಥರ ವತಿಯಿಂದ ಆಯೋಜಿತ ಅರಮನೆ ಕೋಲಾಟ್‌ಗೆ ಜ್ಯೋತಿ ಬೆಳಗುವ ಮೂಲಕ ಶಾಸಕ ರಾದ ಕೆ.ಜಿ. ಬೋಪಯ್ಯ, ಎಂಎಲ್‌ಸಿಗಳಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜ, ಎಡಿಸಿ ಸತೀಶ್‌ ಕುಮಾರ್‌, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್‌. ದೇವಯ್ಯ ಮೊದಲಾದ ಗಣ್ಯರು ಚಾಲನೆ ನೀಡುವುದರೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಕೋಲಾಟ್‌ ಪ್ರದರ್ಶನ ಆಕರ್ಷಕವಾಗಿ ಅನಾವರಣಗೊಂಡಿತು.

ಪುತ್ತರಿ ಕೋಲಾಟ್‌ ಈ ಬಾರಿ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಪಾಂಡೀರ ಕುಟುಂಬಸ್ಥರ ಸಮಕ್ಷಮದಲ್ಲಿ ಚೆಟ್ಟಿàರ ಕುಟುಂಬಸ್ಥರ ನೇತೃತ್ವದಲ್ಲಿ ನಡೆಯಿತು. ಪಾಂಡೀರ ಕುಟುಂಬಸ್ಥರು ಶುಭಕಾರ್ಯಗಳನ್ನು ನಡೆಸಲಾಗದ ಸಂದರ್ಭಗಳಲ್ಲಿ ಈ ಹಿಂದಿನಿಂದಲೂ ಚೆಟ್ಟಿàರ ಕುಟುಂಬಸ್ಥರು ಪಾಂಡೀರ  ಕುಟುಂಬ ನಿರ್ವಹಿಸಬೇಕಾದ ಕಾರ್ಯ ವನ್ನು ನಡೆಸಿಕೊಂಡು ಬರುವುದು ಸಾಮಾನ್ಯವಾಗಿದೆಯೆಂದು ಪಾಂಡೀರ ಮುತ್ತಣ್ಣ ತಿಳಿಸಿದರು.

ಸಾಂಸ್ಕೃತಿಕ ವೈಭವ

ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಮಡಿಕೇರಿ ಕೊಡವ ಸಮಾಜ ತಂಡಗಳು ನಡೆಸಿಕೊಟ್ಟ ಕೋಲಾಟ್‌, ಬೊಳಕಾಟ್‌, ಸಮರ ಕಲೆಯಾದ ಪರೆಯ ಕಳಿ, ಮಹಿಳೆಯರ ಉಮ್ಮತ್ತಾಟ್‌ ಕೊಡಗಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು.

ಕೋಲಾಟ್‌ನ ಅಂತ್ಯದಲ್ಲಿ ಪಾಂಡೀರ ಕುಟುಂಬದ ಪ್ರಮುಖರನ್ನು ಜಿಲ್ಲಾಧಿಕಾರಿ ಗಳಾದ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜ ಗೌರವಿಸಿದರು.

ಪುತ್ತರಿ ಕೋಲಾಟ್‌ ಆರಂಭಕ್ಕೂ ಮುನ್ನ ಪಾಂಡೀರ ಕುಟುಂಬಸ್ಥರ ಪರವಾಗಿ ಚೆಟ್ಟಿàರ ಕುಟುಂಬಸ್ಥರು ಶ್ರೀ ಕೋಟೆ ಗಣಪತಿಗೆ ವಿಶೇಷ ಪ‌ೂಜೆಯನ್ನು ಸಲ್ಲಿಸಿದರು.

ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಂಡೀರ ಕುಟುಂಬದ ಪಟ್ಟೆದಾರ ಪಾಂಡೀರ ಮೇದಪ್ಪ, ತಕ್ಕ ಮುಖ್ಯಸ್ಥ ಪಾಂಡೀರ ಮೊಣ್ಣಪ್ಪ, ಪಾಂಡೀರ ಕುಟುಂಬದ ಅಧ್ಯಕ್ಷ ಪಾಂಡೀರ ಕರುಂಬಯ್ಯ, ದಿನದ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಚೆಟ್ಟಿàರ ಕುಟುಂಬದ ಚೆೆಟ್ಟಿàರ ನಂಜಪ್ಪ, ಚೆಟ್ಟಿàರ ಮಾದಪ್ಪ, ಚೆಟ್ಟಿàರ ಕಾರ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ.ಎಸ್‌.ತಮ್ಮಯ್ಯ, ಶ್ರೀ ಓಂಕಾರೇಶ್ವರ ದೇವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ರಮೇಶ್‌ ಹೊಳ್ಳ, ಸಮಿತಿಯ ಆಡಳಿತಾಧಿಕಾರಿ  ಸಂಪತ್‌ ಕುಮಾರ್‌ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.

ಹೆಜ್ಜೆ ಹಾಕಿದ ಶಾಸಕರು
ಕೋಲಾಟ್‌ ಕಾರ್ಯಕ್ರಮದ ಸಮಾರೋಪದ ಬಳಿಕ ಕೊಡಗಿನ ಸಾಂಪ್ರದಾಯಿಕ ಓಲಗಕ್ಕೆ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‌ಸಿ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. 

ನಾಲ್ಕು ನಾಡಿನಲ್ಲಿ  ಸಂಭ್ರಮದ ಹುತ್ತರಿ

ಹುತ್ತರಿಯನ್ನು ನಾಲ್ಕುನಾಡು ನಾಪೋಕ್ಲು ವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಾಲ್ಕುನಾಡು ವ್ಯಾಪ್ತಿಯ ಕೊಳಕೇರಿ, ಕಕ್ಕಬ್ಬೆ, ಪಾಲೂರು, ನೆಲಜಿ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಗ್ರಾಮಸ್ಥರು ಅರ್ಥಪೂರ್ಣಗೊಳಿಸಿದರು.

 ಕೊಡಗಿನ ಜನರ ಆರಾಧ್ಯ ದೈವ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಹುತ್ತರಿ ಹಬ್ಬಕ್ಕೆ ಗ್ರಾಮಸ್ಥರು ಸಾಕ್ಷಿಯಾದರು. ದೇವಾಲಯದ ಸುತ್ತಮುತ್ತಲ ಗ್ರಾಮಸ್ಥರು ತಳಿಯಕ್ಕಿ ಬೊಳಕ್‌ನೊಂದಿಗೆ ದೇವಾಲಯಕ್ಕೆ ಆಗಮಿಸಿ ದುಡಿಕೊಟ್‌ಪಾಟ್‌ ನುಡಿಸಿ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಗದ್ದೆಗೆ ತೆರಳಿದ ಗ್ರಾಮಸ್ಥರು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ನಿಗದಿತ ಸಮಯದಲ್ಲಿ ಕುಶಾಲು ತೋಪು ಸಿಡಿಸಿ ಪೊಲಿ ಪೊಲಿಯೇ ಬಾ ಉದ್ಘೋಷದೊಂದಿಗೆ ಕದಿರನ್ನು ಕೊಯ್ಯಲಾಯಿತು.

ದೇವಾಲಯಕ್ಕೆ ಆಗಮಿಸಿದ ಭಕ್ತರು ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿರಿಸಿ ಧಾನ್ಯಲಕ್ಷಿ¾ಗೆ ಪೂಜೆಯನ್ನು ಸಲ್ಲಿಸಿದರು.

 ನಾಪೋಕ್ಲು ಕೊಡವ ಸಮಾಜದ ವತಿಯಿಂದ ಕೂಡ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಕಾಟಕೇರಿ: ಸಂಭ್ರಮದ ಹುತ್ತರಿ ಆಚರಣೆ

ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಧಾನ್ಯಲಕ್ಷಿಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ ಹಬ್ಬವನ್ನು ಕಾಟಕೇರಿಯ ಪ್ರಮೀಳ ನಂದಕುಮಾರ್‌ ಅವರ  ಗದ್ದೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮಸ್ಥರು ಧಾನ್ಯಲಕ್ಷ್ಮೀ ಕದಿರನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿದರು. 

ಟಾಪ್ ನ್ಯೂಸ್

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.