ಅಗ್ಗದ ಮೊಬೈಲ್ ಹೆಸರಲ್ಲಿ ಮೋಸ
Team Udayavani, Aug 30, 2019, 10:49 PM IST
ಮಡಿಕೇರಿ: ಕಡಿಮೆ ಬೆಲೆಯಲ್ಲಿ ಮೊಬೈಲ್ ನೀಡುತ್ತೇವೆ ಎಂದು ವ್ಯಕ್ತಿಯೋರ್ವನನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಒಂದನೇ ಭಾಗದ ನಿವಾಸಿ ಶರವಣ ಅವರ ಮೊಬೈಲಿಗೆ ಅಪರಿಚಿತನೊಬ್ಬ ಕರೆ ಮಾಡಿ, ಬೆಂಗಳೂರಿನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಲ್ಲದೆ, ಸ್ಯಾಮ್‌ಸಂಗ್ ಕಂಪೆನಿಯ 6 ಸಾ. ರೂ. ಬೆಲೆಯ ಮೊಬೈಲನ್ನು 2 ಸಾ. ರೂ.ಗೆ ನೀಡುತ್ತಿದ್ದೇವೆ. ನೀವು ಒಪ್ಪಿದರೆ ವಾರದೊಳಗೆ ಅಂಚೆ ಮೂಲಕ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾನೆ.
ಇದಕ್ಕೊಪ್ಪಿದ ಶರವಣ ಅವರು, ಮೊಬೈಲ್ ಕಳುಸಿಕೊಡುವಂತೆ ತಿಳಿಸಿದ್ದಾರೆ. ವಾರದ ಬಳಿಕ ಅಂಚೆ ಕಚೇರಿಗೆ ಪಾರ್ಸಲ್ ಬಂದಿದ್ದು, 2 ಸಾ. ರೂ. ಪಾವತಿಸಿ ಪಾರ್ಸೆಲ್ ಪಡೆದು ಮನೆಗೆ ಬಂದಿದ್ದಾರೆ. ಪಾರ್ಸೆಲ್ ಬಿಚ್ಚಿದಾಗ ಆಘಾತ ಕಾದಿತ್ತು. ಅದರಲ್ಲಿ ಇದ್ದುದು ಅವಧಿ ಮೀರಿದ ತಿಂಡಿ, ತಗಡಿನ ಪಾದುಕೆ, ಆಮೆ ಮತ್ತು ಲಕ್ಷಿ$¾ಯ ಚಿತ್ರ. ತತ್‌ಕ್ಷಣ ಶರವಣ ಹಿಂದಿನ ಸಂಖ್ಯೆಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ
Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!
Madikeri: ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.