ಹಣಕಾಸಿನ ವಿಚಾರವಾಗಿ ಜಗಳ : ಕತ್ತಿಯಿಂದ ಹೊಡೆದು ಕೊಲೆ!
Team Udayavani, Mar 29, 2021, 4:37 PM IST
ಪಿರಿಯಾಪಟ್ಟಣ: ಹಣಕಾಸಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಹ್ಯಾರೀಸ್ (52) ಕೊಲೆಯಾದ ವ್ಯಕ್ತಿ. ಈತ ಮೂಲತಃ ಮಡಿಕೇರಿ ತಾಲೂಕು ನಾಪೋಕ್ಲು ಬಳಿಯ ಕೊಟ್ಟಮುಡಿ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ನಿವಾಸಿ ಅಮೀದ್ ಎಂಬುವವರನ್ನು ತನ್ನ ಬಳಿ ಅಡಿಕೆ ಕೆಲಸ ಮಾಡಲು ಪಿರಿಯಾಪಟ್ಟಣಕ್ಕೆ ಕರೆತಂದು ಒಟ್ಟಿಗೆ ಸೇರಿ ಅಡಿಕೆ ವ್ಯವಹಾರ ನಡೆಸುತ್ತಿದ್ದರು.
ಹೀಗಿರುವಾಗ ಕಳೆದ ಒಂದು ವರ್ಷದಿಂದ ಅಮೀದ್ ಹ್ಯಾರೀಸ್ ನಿಂದ ದೂರವಾಗಿ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಹ್ಯಾರೀಶ್ ಪಿರಿಯಾಪಟ್ಟಣ ಟೌನಿನ ಶ್ರೀ ಮಹದೇಶ್ವರ ಸ್ವಾಮಿ ರೈಸ್ ಮಿಲ್ ಆವರಣದಲ್ಲಿ ಬೇರೆಯಾಗಿ ಅಡಿಕೆ ವ್ಯವಹಾರ ನಡೆಸುತ್ತಿದ್ದರು.
ಹ್ಯಾರಿಸ್ ನಿನ್ನೆ ಕೇರಳಕ್ಕೆ ಹೋಗಿ ಬಂದು ವ್ಯವಹಾರದ ವಿಷಯವಾಗಿ ಚೌಡೇನಹಳ್ಳಿಯಲ್ಲಿ ಅಡಿಕೆ ಕೆಲಸ ಮಾಡುತ್ತಿದ್ದ ಅಮೀದ್ ಬಳಿ ಹೋಗಿದ್ದಾರೆ. ವ್ಯಾಪಾರದಲ್ಲಿನ ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಅಮೀದ್, ಹ್ಯಾರೀಸ್ ಗೆ ಕತ್ತಿಯಿಂದ ಹೊಡೆದು ಕೊಲೆ ಮಾಡಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಹ್ಯಾರೀಸ್ ಮೃತ ದೇಹವನ್ನು ಕೊಡಗು ಜಿಲ್ಲೆಯ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮೃತರ ಸಂಬಂಧಿಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Madikeri: ಗಾಂಜಾ ದಂಧೆ : ಬೆಡ್ ಶೀಟ್ ಮಾರಾಟಗಾರರ ಬಂಧನ
Madikeri: ವಧುವಿನ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
Kuwait ಬ್ಯಾಂಕ್‌ನಿಂದ 700 ಕೋಟಿ ರೂ. ಲಪಟಾವಣೆ: 1425 ಕೇರಳಿಯರಿಗಾಗಿ ಶೋಧ
ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜತೆಗೆ 19ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿ ಪರಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.