ಸಂತ್ರಸ್ತರಿಗೆ ಮನೆಗಳ ಹಂಚಿಕೆ
Team Udayavani, May 17, 2019, 6:20 AM IST
ಮಡಿಕೇರಿ :ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಭೂ ಕುಸಿತ, ಪ್ರವಾಹದಿಂದಾಗಿ ಸಂತ್ರಸ್ತರಾದ ಮೊದಲನೇ ಹಂತದ ಪಟ್ಟಿಯಲ್ಲಿನ ಪೂರ್ಣ, ತೀವ್ರ ವಾಸದ ಮನೆ ಹಾನಿಯಾದ ನಿರಾಶ್ರಿತರಿಗೆ ಸರಕಾರದ ವತಿಯಿಂದ ಕರ್ಣಂಗೇರಿ ಗ್ರಾಮದ ಸ.ನಂ.178/1ರ 4.80 ಎಕ್ರೆ ಜಾಗದಲ್ಲಿ ನಿರ್ಮಿಸಿರುವ 35 ಮನೆಗಳನ್ನು ಕರ್ಣಂ ಗೇರಿಯಲ್ಲಿಯೇ ತಮಗೆ ಮನೆಗಳು ಬೇಕೆಂದು ಕೋರಿರುವ ಫಲಾನುಭಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ತಿಳಿಸಿದ್ದಾರೆ.
ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದಲ್ಲಿ ಬರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲಾಗುತ್ತಿರುವ ಸ್ಥಳಕ್ಕೆ ಕೇವಲ 2 ಕಿ.ಮೀ.ಅಂತರದೊಳಗೆ ಬರುವ ಸಂತ್ರಸ್ತರಾಗಿರುವುದರಿಂದ ಆ 16 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ.
ಫಲಾನುಭಗಳ, ಸಂತ್ರಸ್ಥರ ವಿವರ
ಕರ್ಣಂಗೇರಿಯ ಪ್ರಿಯಾ ಜಯ್ ಕುಮಾರ್, ಗೌರಮ್ಮ ಎಚ್.ಜಿ., ಅಕ್ಕಮ್ಮ ಬಿ.ಎಂ., ಉದಯಗಿರಿಯ ಬಿ.ಎಸ್.ಸಂಜೀವ ರೈ, ಬಿ.ಕೆ.ಚಂದ್ರಶೇಖರ್, ಬಿ.ಡಿ.ಪಾರ್ವತಿ, ಪಿ.ಜಯರಾಂ, ಜಯಂತಿ, ಒ.ಬಿ., ಒ.ಕೆ.ಜಾರಪ್ಪಮತ್ತು ಶ್ರೀಲತಾ, ಎಂ.ಆರ್.ದೇವಕ್ಕಿ , ಎಂ.ಎ.ರಾಮಣ್ಣ ನಾಯ್ಕ, ಗಣೇಶ್ ಬಿ.ಐ, ಎಚ್.ಕೆ.ಮನುಕುಮಾರ್, ಬಿ.ಎಸ್.ಪದ್ಮಾವತಿ, ಎಚ್.ಬಿ.ಗಿರಿಜಾ, ಎಂ.ಎ.ರಾಮಚಂದ, ಬಿ.ಕೆ.ವಿಠಲ, ಬಿ.ಎ.ಸುಂದರ.
ಕರ್ಣಂಗೇರಿಯಲ್ಲಿ ಮನೆ ಬೇಕೆಂದು ಕೋರಿದ್ದ, ಲಾಟರಿ ಮೂಲಕ ಕರ್ಣಂಗೇರಿಗೆ ಆಯ್ಕೆಯಾದ ಫಲಾನುಭಗಳ/ಸಂತ್ರಸ್ಥರ ವಿವರ
ಹೆಬ್ಬೆಟಗೇರಿಯ ಎನ್.ಎ.ರಾಜು, ಮಂಗಳದೇನಗರದ ರಾಮಕೃಷ್ಣಾಚಾರಿ, ಇಂದಿರಾ ನಗರದ ಕೆ.ಎಂ.ಶಿವಶೇಖರ್, ಯಶೋಧಾ ಕೆ., ಚಾಮುಂಡೇಶ್ವರಿ ನಗರದ ನಾಗಮ್ಮ ಪಿ., ಮಕ್ಕಂದೂರಿನ ಬಲ್ಲಂರಂಡ ಎ.ಚಂಗಪ, ಇಂದಿರಾನಗರದ, ರಾಮಕೃಷ್ಣ, ಮಕ್ಕಂದೂರಿನ ಕೆ.ಎಸ್.ಹೇಮಾವತಿ, ಹೆಬ್ಬೆಟಗೇರಿಯ ಬಿ..ರೋಣಿ, ಕಾಟಕೇರಿಯ ರ ಎಂ.ಬಿ., ಮಕ್ಕಂದೂರಿನ ಎಸ್.ಯು.ಜಯ್ ಕುಮಾರ್‌ಎಸ್.ಸಿ.ಉತ್ತಯ್ಯ, ಹೆಬ್ಬೆಟಗೇರಿಯ ಬಿ.ಎ.ಆನಂದ, ಇಂದಿರಾನಗರದ ಮೇರಿ ಕೆ., ಹೆಬ್ಬೆಟಗೇರಿ ಚೆರಿಯಮನೆ ಬೋಪಯ್ಯ, ಮಕ್ಕಂದೂರು ಸಾಲಪ್ಪ ಡಿಸೋಜ, ಮಕ್ಕಂದೂರು ಹಾಗೂ ಶಿವಪ್ಪ ಬಿ.ಕೆ. ಅವರಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ಮನೆಗಳನ್ನು ನೀಡಲಾಯಿತು
106 ಜನ ಸಂತ್ರಸ್ತರು
ಕರ್ಣಂಗೇರಿ ಗ್ರಾಮದ ಸ.ನಂ.178/1 ರಲ್ಲಿ ಅನುಮೋದಿತ ಬಡಾವಣೆ ನಕ್ಷೆಯಂತೆ 35 ಮನೆಗಳನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗಿರುತ್ತದೆ. ಕರ್ಣಂಗೇರಿಯಲ್ಲಿಯೇ ತಮಗೆ ಮನೆ ಬೇಕೆಂದು 106 ಜನ ಸಂತ್ರಸ್ಥರು, ಫಲಾನುಭಗಳು ತಮ್ಮ ಬೇಡಿಕೆ ಕೇಳಿರುತ್ತಾರೆ.
ಕರ್ಣಂಗೇರಿ ಗ್ರಾಮದ 3 ಜನ ಸಂತ್ರಸ್ತರು ಮನೆ ಕಳೆದುಕೊಂಡಿದ್ದು, ಆ 3 ಜನರಿಗೆ ಕರ್ಣಂಗೇರಿಯಲ್ಲಿಯೇ ಮನೆ ನೀಡಲಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.