ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ ಶೇ. 80ರಷ್ಟು ಮಳೆ
Team Udayavani, Sep 12, 2017, 7:35 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿನ ಸರಾಸರಿ ಮಳೆಯ ಪ್ರಮಾಣವನ್ನು ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ ಅಂತ್ಯದ ವರೆಗೆ ಸರಾಸರಿ ವಾಡಿಕೆ ಮಳೆ 2,199.19 ಮಿ.ಮೀ.ಗಳಾಗಿದೆ. 2017ರ ಜನವರಿಯಿಂದ ಆಗಸ್ಟ್ ಅಂತ್ಯದ ವರೆಗೆ 1,759.27 ಮಿ.ಮೀ.ಮಳೆಯಾಗಿದ್ದು, ಶೇ. 80ರಷ್ಟು ಮಳೆ ಸುರಿದಿದೆ. 2016ರಲ್ಲಿ 1,538.86 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 1,838.47 ಮಿ.ಮೀ. ಮಳೆಯಾಗಿತ್ತು.
ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಆಗಸ್ಟ್ ಅಂತ್ಯದ ವರೆಗೆ ಸರಾಸರಿ ವಾಡಿಕೆ ಮಳೆ 2,688.4 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಆಗಸ್ಟ್, 31ರ ವರೆಗೆ 2,514.6 ಮಿ.ಮೀ. ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 2,336.9 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 2,780.14 ಮಿ.ಮೀ.ಮಳೆ ಯಾಗಿತ್ತು. ಒಟ್ಟಾರೆ ತಾಲೂಕಿನಲ್ಲಿ ಈ ಬಾರಿ ಶೇ. 93.54ರಷ್ಟು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಆಗಸ್ಟ್ ಅಂತ್ಯದ ವರೆಗೆ ಸರಾಸರಿ ವಾಡಿಕೆ ಮಳೆ 1,756.9 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯ ವರೆಗೆ 1,387.62 ಮಿ.ಮೀ ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 1,195.18 ಮಿ.ಮೀ. ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1,292.4 ಮಿ.ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಈ ಬಾರಿ ಶೇ. 78.98ರಷ್ಟು ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಆಗಸ್ಟ್ ಅಂತ್ಯದ ವರೆಗೆ ಸರಾಸರಿ ವಾಡಿಕೆ ಮಳೆ 2,152.3 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯ ವರೆಗಿನ ಮಳೆ 1,375.59 ಮಿ.ಮೀ. ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 1,084.55 ಮಿ.ಮೀ. ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1,442.85 ಮಿ.ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಈ ಬಾರಿ ಶೇ. 63.91ರಷ್ಟು ಮಾತ್ರ ಮಳೆಯಾಗಿದೆ.
ಒಟ್ಟಾರೆ ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 200 ಮೀ.ಮೀ. ಮಾತ್ರ ಮಳೆ ಹೆಚ್ಚಾಗಿದೆ. ಆದರೆ ಸರಾಸರಿ ಮಳೆ ಪ್ರಮಾಣದಲ್ಲಿ ಶೇ. 20ರಷ್ಟು ಕೊರತೆಯಾಗಿದೆ ಎಂಬುದನ್ನು ಅಂಕಿಅಂಶಗಳಿಂದ ತಿಳಿಯಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.