ಮಾಂದಲಪಟ್ಟಿ ಪ್ರವೇಶ ನಿಷೇಧಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ
ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸ್ಥಳ ಪರಿಶೀಲನೆ
Team Udayavani, Jul 27, 2019, 5:40 AM IST
ಮಡಿಕೇರಿ:ಅತಿ ಮಳೆ ಯಿಂದ ಎದುರಾಗಬಹುದಾದ ಅನಾಹುತಗಳ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೆಸರುವಾಸಿ ಪ್ರವಾಸಿತಾಣ ಮಾಂದಲಪಟ್ಟಿಗೆ ಜಿಲ್ಲಾಡಳಿತ ಪ್ರವೇಶ ನಿಷೇಧಿಸಿರುವುದನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಜೀಪು ಚಾಲಕರು ತೀವ್ರವಾಗಿ ವಿರೋಧಸಿದ್ದಾರೆ.
ಜಿಲ್ಲಾಡಳಿತದ ಈ ಕ್ರಮದಿಂದ ಪ್ರವಾಸಿಗರನ್ನೇ ನಂಬಿ ಜೀವನ ಸಾಗಿ ಸುತ್ತಿರುವ ಜೀಪು ಚಾಲಕರಿಗೆ ಹಾಗೂ ಗ್ರಾಮಸ್ಥರಿಗೆ ಕಷ್ಟ, ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಮಳೆಗಾಲದಲ್ಲಿ ಗುಡ್ಡ ಕುಸಿತವಾಗಿ ಉಳಿದಿರುವ ಅಲ್ಪ. ಸ್ವಲ್ಪ ಮಣ್ಣು ರಸ್ತೆ ಬದಿಯ ಚರಂಡಿಗೆ ಬೀಳುತ್ತಿದೆಯೇ ಹೊರತು ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇಲ್ಲ. ಮಾಂದಲ್ ಪಟ್ಟಿಗೆ ಹೋಗಲು ಮೂರು ರಸ್ತೆಗಳಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಗಳಿರುವುದಿಲ್ಲ. ಕಳೆದ ಬಾರಿಯ ಮಳೆಯಲ್ಲಿ ಭೂ ಕುಸಿತದಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದು ಕೊಂಡಿರುವ ಗ್ರಾಮಸ್ಥರಿಗೆ ಪ್ರವಾಸಿಗರ ಆಗಮನವೇ ಆದಾಯವಾಗಿದೆ. ಸುಮಾರು 200 ಕ್ಕಿಂತಲೂ ಹೆಚ್ಚಿನ ಕುಟುಂಬಗಳ ಜೀವನ ನಿರ್ವಹಣೆ ಪ್ರವಾಸೋದ್ಯಮದ ಮೂಲಕವೇ ನಡೆಯುತ್ತಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಮಾಂದಲಪಟ್ಟಿ ಪ್ರವೇಶ ನಿಷೇಧಿಸಿರುವುದರಿಂದ ಮಳೆಗಾಲದಲ್ಲಿ ಬಡ ಕುಟುಂಬಗಳು ಬೀದಿ ಪಾಲಾಗುವ ಎಲ್ಲÉ ಸಾಧ್ಯತೆಗಳಿವೆ ಎಂದು ಚಾಲಕರು ತಿಳಿಸಿದ್ದಾರೆ.
ಈ ವರ್ಷ ದೊಡ್ಡ ಪ್ರಮಾಣದ ಮಳೆಯೂ ಆಗುತ್ತಿಲ್ಲ, ಅನಾಹುತದ ಪರಿಸ್ಥಿತಿ ಎದುರಾದರೆ ನಾವುಗಳೇ ಜವಬ್ದಾರಿಯುತವಾಗಿ ವಾಹನಗಳನ್ನು ನಿಲುಗಡೆಗೊಳಿಸುತ್ತೇವೆ ಎಂದು ತಿಳಿಸಿರುವ ಚಾಲಕರು ಮಾನವೀಯ ನೆಲೆಗಟ್ಟಿನಡಿ ಜಿಲ್ಲಾಧಿಕಾರಿಗಳು ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳು ಪ್ರವೇಶ ನಿಷೇಧಿ ಸಿರುವ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು ಮಾಂದಲಪಟ್ಟಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸ್ಥಳೀಯ ಗ್ರಾಮಸ್ಥರು ಹಾಗೂ ಜೀಪು ಚಾಲಕರು ಎಸ್‌ಪಿ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಸುಮನ್ ಪನ್ನೇಕರ್ ಜಿಲ್ಲಾಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡರು.
ಎಸ್‌ಪಿ ಸ್ಪಷ್ಟನೆ
ಮಾಂದಲಪಟ್ಟಿಗೆ ತೆರಳುವ ರಸ್ತೆಯ ಬದಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದೆ. ಈ ಪ್ರಮಾಣ ಹೆಚ್ಚಾಗಿ ಪ್ರವಾಸಿಗರು ಅಪಾಯಕ್ಕೆ ಸಿಲುಕಬಹುದೆನ್ನುವ ಕಾರಣಕ್ಕಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯರಾದರೆ ಅಪಾಯದಿಂದ ಪಾರಾಗಬಹುದು, ಆದರೆ ಹೊರಗಿನಿಂದ ಆಗಮಿಸುವ ಪ್ರವಾಸಿಗರು ಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದೆೆ ಎಂದು ಎಸ್‌ಪಿ ಸುಮನ್ ಪನ್ನೇಕರ್ ಅವರು ಹೇಳಿದರು.
ಮಳೆ ಕಡಿಮೆ ಇರುವುದರಿಂದ ಆದೇಶವನ್ನು ಪುನರ್ ಪರಿಶೀಲಿಸಲು ಅವಕಾಶವಿದ್ದು, ಜಿಲ್ಲಾಧಿಕಾರಿಗಳ ನಿರ್ಧಾರವೇ ಅಂತಿಮವೆಂದು ಎಸ್‌ಪಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.