ಕೊಡಗಿನಲ್ಲಿ ಕಾಡಾನೆ ದಾಳಿ; ತಿಂಗಳಲ್ಲಿ 4ನೇ ಜೀವ ಬಲಿ
Team Udayavani, Apr 1, 2024, 12:51 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಒಂದೇ ತಿಂಗಳಲ್ಲಿ ನಾಲ್ಕನೇ ಮಾನವ ಜೀವ ಬಲಿಯಾಗಿದೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದ ತೋಟದಲ್ಲಿ ರವಿವಾರ ಬೆಳಗ್ಗೆ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿ ಕಾಂತರಾಜು (48) ಮೃತಪಟ್ಟವರು. ಗ್ರಾಮದಲ್ಲಿ ಆತಂಕದ ವಾತಾವರಣ ನೆಲೆಸಿದೆ.
ಮಡಿಕೇರಿ ಶಾಸಕ ಡಾ| ಮಂತರ್ ಗೌಡ ಅವರು ಕಾಂತರಾಜು ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕಾಡಾನೆ ಉಪಟಳದ ವಿರುದ್ಧ ಸೂಕ್ತ ಕ್ರಮಕ್ಕೆ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಸರಕಾರದಿಂದ ಸಿಗಬೇಕಾದ ಪರಿಹಾರದ ಮೊತ್ತ ಶೀಘ್ರ ಸಿಗಲಿದೆ ಎಂದರು. ಕಾಡಾನೆ ದಾಳಿಯ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ನಾಲ್ಕನೇ ಸಾವು
ಕೊಡಗು ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಕಾಡಾನೆ ದಾಳಿ ಯಿಂದ ಈಗಾಗಲೇ ಮೂವರು ಮೃತಪಟ್ಟಿದ್ದು, ಕಾಂತರಾಜು ಅವರು ನಾಲ್ಕನೆಯವರಾಗಿದ್ದಾರೆ. ಈ ಹಿಂದೆ ಮಡಿಕೇರಿ ತಾಲೂಕಿನ ನಿಶಾನಿಬೆಟ್ಟದಲ್ಲಿ ಅಪ್ಪಚ್ಚು, ವೀರಾಜಪೇಟೆಯ ಚೆನ್ನಂಗಿ ಅಬ್ಬೂರು ಗ್ರಾಮದಲ್ಲಿ ಅಜಬಾನು ಎಂಬ ಮಹಿಳೆ ಹಾಗೂ ಕಕ್ಕಬ್ಬೆಯಲ್ಲಿ ರಾಜ ದೇವಯ್ಯ ಮೃತಪಟ್ಟಿದ್ದರು.
ವಿವಿಧೆಡೆ ನಡೆದ ಆನೆ ದಾಳಿಯಲ್ಲಿ ಅನೇಕರು ಜೀವ ಉಳಿಸಿಕೊಂಡಿದ್ದಾರೆ, ಮತ್ತೆ ಕೆಲವರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿದ್ದು, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಕಾಡಾನೆ ದಾಳಿ: ಗಂಭೀರ ಗಾಯ
ಮಡಿಕೇರಿ: ಶನಿವಾರಸಂತೆ ಸಮೀಪ ಕಾಡಾನೆ ದಾಳಿ ಯಿಂದ ವ್ಯಕ್ತಿ ಯೊಬ್ಬರು ಮೃತ ಪಟ್ಟಿರುವ ಬೆನ್ನಲ್ಲೇ ವೀರಾಜ ಪೇಟೆ ಹೊರವಲಯದ ಅರಮೇರಿ ಗ್ರಾಮದಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರ ವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ನಟೇಶ್ ಕಾಳಪ್ಪ (50) ಕಾಡಾನೆ ದಾಳಿಯಿಂದ ತೀವ್ರ ವಾಗಿ ಗಾಯಗೊಂಡವರು. ಅವರನ್ನು ಮಡಿ ಕೇರಿಯಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಾನೆ ಹಾವಳಿ ಕುರಿತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳು ವಂತೆ ಅರಣ್ಯ ಇಲಾಖೆ ಯನ್ನು ಆಗ್ರಹಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.