Madikeri ಕರಿಕೆಯಲ್ಲಿ ಕಾಡಾನೆಗಳ ಹಾವಳಿ: ತೋಟಗಳು ನಾಶ
Team Udayavani, Oct 6, 2023, 11:32 PM IST
ಮಡಿಕೇರಿ: ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ ಪರಿಣಾಮ ತೋಟಗಳಿಗೆ ಹಾನಿಯಾಗಿದ್ದು, 80ಕ್ಕೂ ಅಧಿಕ ಅಡಿಕೆ, 28ಕ್ಕೂ ಹೆಚ್ಚು ತೆಂಗು ಮತ್ತು ಸುಮಾರು 50 ಬಾಳೆ ಗಿಡಗಳು ನಾಶವಾಗಿವೆ.
ಎಳ್ಳುಕೊಚ್ಚಿ ಗ್ರಾಮದ ರಾಘವ ಹೊಸಮನೆ, ದುಷ್ಯಂತ ಹೊಸಮನೆ ಹಾಗೂ ಚೆತ್ತುಕಾಯದ ಎಚ್.ಎಂ. ನಂಜುಂಡ ಅವರ ತೋಟಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ಗಡಿ ರಾಜ್ಯ ಕೇರಳ ಭಾಗದಿಂದ ಕಾಡಾನೆಗಳ ಹಿಂಡು ಬಂದು ದಾಂಧಲೆ ನಡೆಸುತ್ತವೆ ಎಂದು ಸ್ಥಳೀಯ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ ಗಡಿ ಗ್ರಾಮದ ಬಗ್ಗೆ ಕಾಳಜಿ ವಹಿಸಿ ಕಾಡಾನೆ ಉಪಟಳ ತಡೆಗೆ ಸೋಲಾರ್ ಬೇಲಿ ನಿರ್ಮಾಣ ಮತ್ತು ತಡೆಗೋಡೆಗೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬೆಳೆ ನಷ್ಟಕ್ಕೆ ತತಕ್ಷಣ ಪರಿಹಾರ ವಿತರಿಸಬೇಕೆಂದು ತೋಟದ ಮಾಲಕರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
Kasaragodu: ನಾಪತ್ತೆಯಾಗಿದ್ದ ಯುವಜೋಡಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.