ಕುಖ್ಯಾತ ಕಳವು ತಂಡದ ನಾಲ್ವರ ಬಂಧನ

ಮಡಿಕೇರಿ ಪೊಲೀಸರಿಂದ ಕಾರ್ಯಾಚರಣೆ

Team Udayavani, Jul 2, 2019, 9:27 AM IST

Z-CRIME-2

ಮಡಿಕೇರಿ: ಕುಶಾಲನಗರ ಸಮೀಪದ ಹೆಬ್ಟಾಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರುನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 2.50 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಚನ್ನಪಟ್ಟಣ ತಾಲೂಕಿನ ಪ್ರವೀಣ್‌(25), ಅರಕಲಗೂಡಿನ ಬಿ. ಗಣೇಶ್‌(30), ಹುಣಸೂರಿನ ಕುಮಾರ (33) ಹಾಗೂ ಮೈಸೂರು ಹೂಟಗಳ್ಳಿಯ ಆರ್‌. ಜೆ. ಅಭಿಷೇಕ್‌(23) ಬಂಧಿತರು. ಈ ಬಗ್ಗೆ ಎಸ್‌ ಪಿ ಡಾ| ಸುಮನ್‌ ಡಿ. ಪನ್ನೇಕರ್‌ ಅವರು ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳು ಹುಣಸೂರಿನಲ್ಲಿ ಬೈಕ್‌ ಕಳ್ಳತನ, ಕೆ.ಆರ್‌. ನಗರದಲ್ಲಿ ಮತ್ತು ಕೆ.ಆರ್‌. ಪೇಟೆಯಲ್ಲಿ ಪೆಟ್ರೋಲ್‌ ಬಂಕ್‌ ಸುಲಿಗೆ, ಕೆ.ಆರ್‌.ಸಾಗರದಲ್ಲಿ ಮನೆ ದರೋಡೆ, ಬೆಳಕವಾಡಿಯಲ್ಲಿ ಮನೆ ಕಳ್ಳತನ, ನಾಗಮಂಗಲದ ಚೀಣ್ಯದಲ್ಲಿ ಕುರಿ ಕಳ ವು, ಪಿರಿಯಾಪಟ್ಟಣ ಪೆಟ್ರೋಲ್‌ ಬಂಕ್‌ ಸುಲಿಗೆ, ಬೆಂಗಳೂರು ನ‌ಗರದಲ್ಲಿ ಬೈಕ್‌ ಕಳವು ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರವೀಣ್‌ ವಿರುದ್ಧ ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಜೂ. 17ರಂದು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆಬ್ಟಾಲೆ ಗ್ರಾಮದ ಎ. ಆರ್‌. ಸರ್ವಿಸ್‌ ಸ್ಟೇಷನ್‌ಗೆ ಪೆಟ್ರೋಲ್‌ ಹಾಕಿಸುವ ನೆಪದಲ್ಲಿ ಎರಡು ಬೈಕುಗಳಲ್ಲಿ ಬಂದ ನಾಲ್ವರು, ಲಾಂಗ್‌ ತೋರಿಸಿ ಬೆದರಿಸಿ ಹಣ, ಮೊಬೈಲ್‌ ಮತ್ತಿತರ ವಸ್ತುಗಳನ್ನು ಸುಲಿಗೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.

ಎಸ್‌ಪಿ ಮಾರ್ಗದರ್ಶನದಲ್ಲಿ ರಚನೆಗೊಂಡ ವಿಶೇಷ ಅಪರಾಧ ಪತ್ತೆ ತಂಡವು ಜೂ.30ರಂದು ಹುಣಸೂರಿನ ಕಲ್ಕುಣಿಕೆ ಸರ್ಕಲ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಿತು.

ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಮುರಳೀಧರ ಪಿ.ಕೆ., ತನಿಖಾಧಿಕಾರಿ ದಿನೇಶ್‌ ಕುಮಾರ್‌ ಬಿ.ಎಸ್‌., ಸಿಬಂದಿ ವರ್ಗದ ನಂದೀಶ್‌ ಕುಮಾರ್‌, ಸದಾಶಿವ, ಅರ್ಚನಾ, ಸಜಿ ಟಿ. ಎಸ್‌., ಡಿ.ಆರ್‌.ಸುಧೀಶ್‌ ಕುಮಾರ್‌, ದಯಾನಂದ, ಸಂದೇಶ್‌, ಜೋಸೆಫ್, ಎ. ಮಂಜುನಾಥ್‌, ಎನ್‌.ಆರ್‌. ರಮೇಶ್‌, ವೈ.ಎಸ್‌. ನಾಗರಾಜ್‌, ಪ್ರಕಾಶ್‌, ಸಂಪತ್‌ ರೈ, ಕೆ.ಎಸ್‌. ಸುಧೀಶ್‌ ಕುಮಾರ್‌, ಅಭಿಷೇಕ್‌, ಮಣಿಕಂಠ, ಚಂದ್ರು, ವಿವೇಕ, ಚಾಲಕರಾದ ರಾಜು, ರಾಜೇಶ್‌, ಗಿರೀಶ್‌, ಬೆರಳಚ್ಚು ವಿಭಾಗದ ಜಯಕುಮಾರ್‌, ಕಂಟ್ರೋಲ್‌ ರೂಂನ ಧನಂಜಯ, ಜೋಷಿ ಹಾಗೂ ಜಯಣ್ಣ ಪಾಲ್ಗೊಂಡಿದ್ದರು.
ಬಹುಮಾನ ಘೋಷಣೆ : ಈ ತಂಡಕ್ಕೆ ಎಸ್‌ಪಿ ನಗದು ಬಹುಮಾನವನ್ನು ಘೋಷಿಸಿದರು.

ಟಾಪ್ ನ್ಯೂಸ್

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!

Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ… ಶಾಸಕ ಚನ್ನಬಸಪ್ಪ ಆಕ್ರೋಶ

ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ… ಶಾಸಕ ಚನ್ನಬಸಪ್ಪ ಆಕ್ರೋಶ

SSMB 29: ಮಹೇಶ್‌ ಬಾಬು- ರಾಜಮೌಳಿ ಸಿನಿಮಾಕ್ಕೆ 1000 ಕೋಟಿ ಬಜೆಟ್?‌ ಶೂಟಿಂಗ್‌ ಯಾವಾಗ ಶುರು?

SSMB 29: ಮಹೇಶ್‌ ಬಾಬು- ರಾಜಮೌಳಿ ಸಿನಿಮಾಕ್ಕೆ 1000 ಕೋಟಿ ಬಜೆಟ್?‌ ಶೂಟಿಂಗ್‌ ಯಾವಾಗ ಶುರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

3(1)

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫ‌ಲ್ಗುಣಿಯೇ ಜೀವನದಿ!

2(1)

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.