ಇಗ್ಗೋಡ್ಲು: ರೋಟರಿಯಿಂದ 25 ಮನೆ ಹಸ್ತಾಂತರ
Team Udayavani, Jun 20, 2019, 5:39 AM IST
ಮಡಿಕೇರಿ: ಸೂರಿಲ್ಲದವರಿಗೆ ಮನೆ ನಿಮಿ9ಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗಬೇಕೆಂದು ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ ಕರೆ ನೀಡಿದ್ದಾರೆ.
ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181 ನಿಂದ ರೀ ಬಿಲ್ಡ್ ಕೊಡಗು ಯೋಜನೆಯಡಿ ನಿರ್ಮಿಸಲಾದ 25 ಮನೆಗಳನ್ನು ಜಲಪ್ರಳಯ ಸಂತ್ರಸ್ಥರಿಗೆ ಹಸ್ತಾಂತರಿಸಿ ಕಲ್ಯಾಣ್ ಬ್ಯಾನರ್ಜಿ ಮಾತನಾಡಿದರು.
ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ರೋಟರಿ ಜಿಲ್ಲೆ 3181 ವತಿಯಿಂದ 25 ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಜಿಲ್ಲಾ ಗವನ9ರ್ ಪಿ.ರೋಹಿನಾಥ್ ಮಾತನಾಡಿ, . ಕೇವಲ 3 ತಿಂಗಳಲ್ಲಿ 25 ಮನೆಗಳನ್ನು ತಲಾ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂತ್ರಸ್ಥರಿಗೆ ಯೋಗ್ಯ ಮನೆಗಳನ್ನು ನಿಗಥಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ ಎಂದರು.
ರೋಟರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿದೇ9ಶಕ ರಾಜನ್ ಸ್ಯಾಮುವೆಲ್ ಮಾತನಾಡಿ, ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು 25 ಮನೆಗಳನ್ನು ತಲಾ 5 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದು 10 ಕುಟುಂಬಗಳಲ್ಲಿ ಮಹಿಳೆಯರೇ ನಿವ9ಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೆಉಈಳಿದರು.
ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಹಿರಿಯ ನಿದೇ9ಶಕ ಸಂಜಯ್ ದಾಸ್ವಾನಿ ರೋಟರಿಯ ರೀಬಿಲ್ಡ್ ಕೊಡಗು ರೋಟರಿ ಮಾಜಿ ಗವರ್ನರ್ ಕೃಷ್ಣಶೆಟ್ಟಿ ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ, ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಗಳಾದ ಡಾ| ನಾಗಾರ್ಜುನ್, ದೇವದಾಸರೈ, ಮಾತಂಡ ಸುರೇಶ್ ಚಂಗಪ್ಪ, ಆರ್.ಕೃಷ್ಣ, ನಾಗೇಂದ್ರಪ್ರಸಾದ್, ಮುಂದಿನ ಸಾಲಿನ ರೋಟರಿ ಗವರ್ನರ್ ಜ್ಯೊಸೆಫ್ ಮ್ಯಾಥ್ಯು, ನಿಯೋಜಿತ ಗವನ9ರ್ ರಂಗನಾಥ ಭಟ್ ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಲಾಯಿತು ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ 25 ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ಮತ್ತು ವಾಟರ್ ಫಿಲ್ಟರ್ ಗಳನ್ನು ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.