ನೌಕಾದಳ ಸೇರ್ಪಡೆಗೆ ಯುವ ಸಮೂಹಕ್ಕೆ ಪ್ರೇರಣೆ
ನೌಕಾದಳ ಐಎನ್‌ಎಸ್ ಶಿವಾಜಿ ತಂಡ ಮಡಿಕೇರಿಗೆ ಭೇಟಿ
Team Udayavani, May 4, 2019, 6:18 AM IST
ಮಡಿಕೇರಿ: ಭಾರತೀಯ ನೌಕಾದಳದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿತ ಭಾರತ ದರ್ಶನ ಕಾರ್ಯಕ್ರಮದಡಿ ಐಎನ್‌ಎಸ್ ಶಿವಾಜಿ ನೌಕೆಯ 14 ಮಂದಿ ಅಧಿಕಾರಿಗಳ ತಂಡ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡಿತು.
ಐಎನ್‌ಎಸ್ ಶಿವಾಜಿ ತಂಡದ ನೇತೃತ್ವವನ್ನು ಕಮಾಂಡರ್ ವಿ.ಸೀತಾರಾಂ ವಹಿಸಿದ್ದು, ಕಮಾಂಡರ್‌ಗಳಾದ ಗೌರವ್ ಸೇಥ್, ಅಭಿಮನ್ಯು ದಲಾಲ್, ಶ್ಯಾಂ ಕುಮಾರ್ ಕೆ., ಲೆಫ್ಟಿನೆಂಟ್ ಕಮಾಂಡರ್‌ಗಳಾದ ಸತೀಶ್ ಕುಮಾರ್ ಮತ್ತು ಜಿ.ಜಗನ್ನಾಥ್, ಲೆಫ್ಟಿನೆಂಟ್‌ಗಳಾದ ಸುದೀಪ್ ಭಟ್ಟಾರಾಯಿ ಮತ್ತು ಎಂ.ಕೆ.ಗೌತಮ್, ಅಖೀಲ್, ಹೆಚ್.ದಹಿಯ, ಮಂದೀಪ್ ಸಿಂಗ್, ಆರ್. ಆರ್.ಚೌಹಾಣ್, ಇ.ಸಿ.ಪಾಲಾಸ್ಕರ್ ಮತ್ತು ಎಲ್ವಿಸ್ ಮ್ಯಾಥ್ಯೂ ತಂಡದ ಸದಸ್ಯರುಗಳಾಗಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ನಗರದ ಸನ್ನಿಸೈಡ್‌ನ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನಕ್ಕೆ ಶಿವಾಜಿ ತಂಡದ ಅಧಿಕಾರಿಗಳು ಭೇಟಿ ನೀಡಿದ್ದಲ್ಲದೆ, ಬಳಿಕ ಕೂಡಿಗೆಯ ಸೈನಿಕ ಶಾಲೆ, ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳಿಗೂ ಭೇಟಿ ನೀಡಿತು. ಈ ಎಲ್ಲಾ ಭೇಟಿಯ ಪ್ರಮುಖ ಉದ್ದೇಶ, ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಳ್ಳಲು ಯುವ ಸಮೂಹಕ್ಕೆ ಪ್ರೇರಣೆ ನೀಡುವುದೇ ಆಗಿತ್ತು.
45 ದಿನಗಳ ಕಾರ್ಯಕ್ರಮ- ಐಎನ್‌ಎಸ್ ಶಿವಾಜಿ ನೌಕೆಯ ತಂಡ ಭಾರತ ದರ್ಶನ ಕಾರ್ಯಕ್ರಮದಡಿ ಒಟ್ಟು 45 ದಿನಗಳ ಕಾಲ ರಾಷ್ಟ್ರದ ವಿವಿಧ ಭಾಗಗಳಿಗೆ ತೆರಳಿ ಯುವ ಸಮೂಹದಲ್ಲಿ ನೌಕಾದಳ ಸೇರ್ಪಡೆಗೆ ಪ್ರೇರಣೆ ನೀಡಲಿದೆ ಎಂದು ತಂಡದ ನೇತೃತ್ವ ವಹಿಸಿರುವ ಕಮಾಂಡರ್ ವಿ. ಸೀತಾರಾಂ ಅವರು ತಿಳಿಸಿದರು.
ಭಾರತ ದರ್ಶನ ಕಾರ್ಯಕ್ರಮಕ್ಕೆ ಇದೇ ಫೆಬ್ರವರಿಯಲ್ಲಿ ಮುಂಬೈನಲ್ಲಿ ಮತ್ತು ಮಾರ್ಚ್‌ನಲ್ಲಿ ಲೋನಾವಾಲದಿಮದ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಂತೆ ದೆಹಲಿ, ವಿಶಾಖಪಟ್ಟಣಂ, ಕೊಚ್ಚಿನ್‌ಗೆ ತೆರಳಿ ಅಲ್ಲಿಂದ ಮರಳಿ ಇದೇ ಮೇ 9ಕ್ಕೆ ಲೋನಾವಾಲಕ್ಕೆ ಹಿಂತಿರುಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಐಎನ್‌ಎಸ್ ಶಿವಾಜಿ ತಂಡದೊಂದಿಗೆ ಇದ್ದು ಅವರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು. ಈ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ತಂಡ ಭೇಟಿ ನೀಡಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ತರಬೇತಿಗೊಳಿಸಿ ನೌಕಾದಳಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ತಂಡದ ಉದ್ದೇಶವಾಗಿದೆಯೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Madikeri: ಅರೆಸುಟ್ಟ ಮೃತದೇಹದ ಪ್ರಕರಣ; ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಂಕೂರ್ ರಾಣ ಬಂಧನ
Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ
Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!
Madikeri: ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.