ಹಾರಂಗಿ ಅಣೆಕಟ್ಟಿಗೆ ಟೆಲಿಮೆಟ್ರಿ ವಾಟರ್ ಗೇಜ್ ಅಳವಡಿಕೆ
Team Udayavani, Jul 29, 2019, 12:28 PM IST
ಮಡಿಕೇರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟಿಗೆ ಟೆಲಿಮೆಟ್ರಿ ವಾಟರ್ ಗೇಜ್ ಅಳವಡಿಸಲಾಗಿದ್ದು, ಜಲಾಶಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರವೂ ಕ್ಷಣಕ್ಷಣಕ್ಕೂ ಕೇಂದ್ರ ಜಲ ಆಯೋಗಕ್ಕೆ ಉಪಗ್ರಹ ಮೂಲಕ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಹಾರಂಗಿ ಅಣೆಕಟ್ಟು ಕೇಂದ್ರ ಜಲ ಆಯೋಗದ ನೇರ ನಿಯಂತ್ರಣಕ್ಕೆ ಒಳಪಟ್ಟಂತಾಗಿದೆ.
ಮಾಹಿತಿ ನೇರ ಅಯೋಗಕ್ಕೆ ಇದಕ್ಕೂ ಮೊದಲು ಹಾರಂಗಿ ಜಲಾಶಯದ ಸಿಬಂದಿ ಜಲಮಟ್ಟವನ್ನು ಅಳತೆ ಮಾಡಿ ಲಿಖೀತ ರೂಪದಲ್ಲಿ ಜಲ ಆಯೋಗಕ್ಕೆ ವರದಿ ಕಳುಹಿಸುವ ವ್ಯವಸ್ಥೆ ಇತ್ತು. ಈಗ ಅತ್ಯಾಧುನಿಕ
ಯಂತ್ರೋಪಕರಣ ಅಳವಡಿಸಿರುವುದರಿಂದ ಎಲ್ಲ ಮಾಹಿತಿ ನೇರವಾಗಿ ಆಯೋಗಕ್ಕೆ ತಲುಪುತ್ತಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹಗಳಿಗೆ ಹಾರಂಗಿ ಅಣೆಕಟ್ಟೆಯಲ್ಲಿನ ನೀರಿನ ಅವೈಜ್ಞಾನಿಕ ಸಂಗ್ರಹವೇ ಕಾರಣ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ ವಿದ್ಯಮಾನಗಳ ಮೇಲೆ ಕಣ್ಣಿಡಲು ಕೇಂದ್ರ ಸರಕಾರ ಟೆಲಿಮೆಟ್ರಿ ವಾಟರ್ ಗೇಜ್ ಅಳವಡಿಸಿದೆ ಎನ್ನಲಾಗುತ್ತಿದೆ. ತಮಿಳುನಾಡಿಗೆ ಹರಿಸುವ ಕಾವೇರಿ ನೀರಿನಲ್ಲಿ ಹಾರಂಗಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವೂ ಮಹತ್ವದ ಪಾತ್ರ ವಹಿಸುತ್ತದೆ. ಜಲ ಆಯೋಗ ಅಣೆಕಟ್ಟಿನ ಮೇಲೆ ನಿಯಂತ್ರಣ ಹೊಂದಲು ಆಟೋ ಮೆಟಿಕ್ ವಾಟರ್ ಗೇಜ್ ಅಳವಡಿಕೆ ಸಹಾಯಕವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ತಿಂಗಳ ಹಿಂದೆ ಹಾರಂಗಿ ಜಲಾಶಯಕ್ಕೆ ಟೆಲಿಮೆಟ್ರಿ ವಾಟರ್ ಗೇಜ್ ಅಳವಡಿಸಲಾಗಿದೆ. ಈ ಉಪಕರಣ ಸಂಗ್ರಹಿಸುವ ವಿವರಗಳು ಉಪಗ್ರಹ ಮೂಲಕ ನೇರವಾಗಿ ಕೇಂದ್ರ ಜಲ ಆಯೋಗಕ್ಕೆ ತಲುಪುತ್ತವೆ. ಸ್ಥಳೀಯವಾಗಿ ಯಾವುದೇ ಮಾಹಿತಿ ಸಿಗುವುದಿಲ್ಲ. ನಾವು ಹಳೆಯ ವ್ಯವಸ್ಥೆಯಲ್ಲಿ ಸಂಗ್ರಹಿಸುವ ಅಂಕಿ ಅಂಶಗಳು ಮತ್ತು ಈ ಉಪಕರಣ ನೀಡುವ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ನಮಗೆ ಎಚ್ಚರಿಕೆಯ ಸಂದೇಶ ಬರುತ್ತದೆ.
- ನಾಗರಾಜ್, ಸಹಾಯಕ ಅಭಿಯಂತರ, ಹಾರಂಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.